ಮೈಸೂರು: ಉತ್ತಮ ಮಳೆ, ಬೆಳೆಗಾಗಿ ವಿಶೇಷ ಓಕುಳಿ ಹಬ್ಬ ಆಚರಣೆ

ಮೈಸೂರು: ಉತ್ತಮ ಮಳೆ, ಬೆಳೆಗಾಗಿ ವಿಶೇಷ ಓಕುಳಿ ಹಬ್ಬ ಆಚರಣೆ

ರಾಮ್​, ಮೈಸೂರು
| Updated By: ಆಯೇಷಾ ಬಾನು

Updated on:May 26, 2024 | 10:41 AM

ತಾಂಡವಪುರ ಹಾಗೂ ಬಂಚಳ್ಳಿ ಹುಂಡಿ ಗ್ರಾಮಸ್ಥರು ರಾಜ್ಯ ಮತ್ತು ದೇಶದಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಓಕಳಿ ಹಬ್ಬ ಆಚರಣೆ ಮಾಡಿದರು. ಈ ಹಬ್ಬದಲ್ಲಿ ಹಲವು ಗ್ರಾಮದವರು ಕೂಡ ಭಾಗಿಯಾಗಿದ್ದರು. ರೈತರು ಸುಭಿಕ್ಷವಾಗಿರಲಿ ಜೊತೆಗೆ ದೇಶದ ಜನರಿಗೆ ರೋಗ ರುಜಿನ ಬಾರದಂತೆ ಇರಲಿ ಎಂದು ಪ್ರಾರ್ಥಿಸಿದರು.

ಮೈಸೂರು, ಮೇ.26: ಮೈಸೂರು ಜಿಲ್ಲೆಯಲ್ಲಿ ಉತ್ತಮ ಮಳೆಗಾಗಿ ಪ್ರಾರ್ಥಿಸಿ ಓಕಳಿ ಹಬ್ಬ ಆಚರಣೆ ಮಾಡಲಾಗಿದೆ. ನಂಜನಗೂಡು ತಾಲ್ಲೂಕು ತಾಂಡವಪುರ ಗ್ರಾಮದ ಮಾರಮ್ಮನ ದೇವಾಲಯ, ನಾರಾಯಣಸ್ವಾಮಿ, ಮಾಲಮ್ಮ ಚಿಕ್ಕಮ್ಮ ದೇವಾಲಯದ ಮುಂಭಾಗದಲ್ಲಿ ಓಕುಳಿ ಹಬ್ಬ ಆಚರಿಸಲಾಯಿತು.

ತಾಂಡವಪುರ ಹಾಗೂ ಬಂಚಳ್ಳಿ ಹುಂಡಿ ಗ್ರಾಮಸ್ಥರು ರಾಜ್ಯ ಮತ್ತು ದೇಶದಲ್ಲಿ ಉತ್ತಮ ಮಳೆ ಬೆಳೆಯಾಗಲಿ ಎಂದು ಓಕಳಿ ಹಬ್ಬ ಆಚರಣೆ ಮಾಡಿದರು. ಈ ಹಬ್ಬದಲ್ಲಿ ಹಲವು ಗ್ರಾಮದವರು ಕೂಡ ಭಾಗಿಯಾಗಿದ್ದರು. ರೈತರು ಸುಭಿಕ್ಷವಾಗಿರಲಿ ಜೊತೆಗೆ ದೇಶದ ಜನರಿಗೆ ರೋಗ ರುಜಿನ ಬಾರದಂತೆ ಇರಲಿ. ದೇವರು ಉತ್ತಮ ಆರೋಗ್ಯ ಭಾಗ್ಯ ಕರುಣಿಸಲಿ ಎಂದು ಗ್ರಾಮಸ್ಥರು ಪ್ರಾರ್ಥಿಸಿದ್ದಾರೆ. ದೇವಸ್ಥಾನದ ಸುತ್ತ ದೇವರ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು.

ವಿಡಿಯೋ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published on: May 26, 2024 10:37 AM