ಪ್ರೇಮ್ (Prem) ನಿರ್ದೇಶನ ಮಾಡಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿ’ ಸಿನಿಮಾನಲ್ಲಿ ದೊಡ್ಡ ತಾರಾಗಣವಿದೆ. ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಜೊತೆಗೆ ಬಾಲಿವುಡ್ ಹಾಗೂ ಇತರೆ ಚಿತ್ರರಂಗದ ನಟರು ಸಹ ಇದ್ದಾರೆ. ನಟ ರವಿಚಂದ್ರನ್, ರಮೇಶ್ ಅರವಿಂದ್ ಅವರುಗಳು ಸಹ ಈ ಗ್ಯಾಂಗ್ಸ್ಟರ್ ಸಿನಿಮಾದ ಪಾತ್ರವಾಗಿದ್ದಾರೆ. ಇಂದು ಚಿತ್ರತಂಡ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪ್ರೇಮ್ಗೆ ಇವರಿಬ್ಬರ ಪಾತ್ರಗಳ ಕುರಿತಾಗಿ ಪ್ರಶ್ನೆ ಎದುರಾಯ್ತು. ಪ್ರಶ್ನೆಗೆ ಜಾಣ್ಮೆಯಿಂದ ಉತ್ತರ ಕೊಟ್ಟಿದ್ದಾರೆ ಪ್ರೇಮ್. ಅಂದಹಾಗೆ ‘ಕೆಡಿ’ ಸಿನಿಮಾನಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ ಇನ್ನೂ ಹಲವಾರು ಕಲಾವಿದರು ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ