ರಸ್ತೆ ಅಪಘಾತದಲ್ಲಿ 6 ಜನ ಸಾವು; ಮೃತರ ಮಕ್ಕಳಿಗೆ ಪ್ರದೀಪ್ ಈಶ್ವರ್ ಸಾಂತ್ವನ

ರಸ್ತೆ ಅಪಘಾತದಲ್ಲಿ 6 ಜನ ಸಾವು; ಮೃತರ ಮಕ್ಕಳಿಗೆ ಪ್ರದೀಪ್ ಈಶ್ವರ್ ಸಾಂತ್ವನ

ಕಿರಣ್ ಹನುಮಂತ್​ ಮಾದಾರ್
|

Updated on: May 26, 2024 | 6:24 PM

ಹಾಸನದ ಬಳಿ ಕಾರು ಅಪಘಾತದಲ್ಲಿ 6 ಜನರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ತಾಲೂಕಿನ ಚಿಗಟೇನಹಳ್ಳಿಯ ಮೃತ ರವಿಕುಮಾರ್  ಹಾಗೂ ನೇತ್ರಾ ದಂಪತಿಯ ಮಕ್ಕಳನ್ನು ಶಾಸಕ ಪ್ರದೀಪ್ ಈಶ್ವರ್ ಭೇಟಿಯಾಗಿ ಸಾಂತ್ವಾನ ಹೇಳಿದರು. ಈ ವೇಳೆ ಅನಾಥರಾದ ಬಾಲಕಿಯರನ್ನು ಕಂಡು ಪ್ರದೀಪ್ ಈಶ್ವರ್ ಕಣ್ಣೀರಾಕಿದರು.

ಚಿಕ್ಕಬಳ್ಳಾಪುರ, ಮೇ.26: ಹಾಸನದ ಬಳಿ ಕಾರು ಅಪಘಾತದಲ್ಲಿ 6 ಜನರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಚಿಗಟೇನಹಳ್ಳಿಯ ಮೃತ ರವಿಕುಮಾರ್  ಹಾಗೂ ನೇತ್ರಾ ದಂಪತಿಯ ಮಕ್ಕಳನ್ನು ಶಾಸಕ ಪ್ರದೀಪ್ ಈಶ್ವರ್(Pradeep Eshwar) ಭೇಟಿಯಾಗಿ ಸಾಂತ್ವಾನ ಹೇಳಿದರು. ಈ ವೇಳೆ ಅನಾಥರಾದ ಬಾಲಕಿಯರನ್ನು ಕಂಡು ಪ್ರದೀಪ್ ಈಶ್ವರ್ ಕಣ್ಣೀರಾಕಿದರು. ತಂದೆ-ತಾಯಿ ಕಳೆದುಕೊಂಡು ಇಬ್ಬರು ಬಾಲಕಿಯರು ಅನಾಥರಾಗಿದ್ದು,  ಅಜ್ಜಿಯ ಮನೆಯಲ್ಲಿದ್ದಾರೆ. ಇನ್ನು ಕೂಡಲೇ ಆ ಇಬ್ಬರ ಬಾಲಕಿಯರ ಹೆಸರಿನಲ್ಲಿ ತಲಾ 1 ಲಕ್ಷ ರೂಪಾಯಿ ಪೋಸ್ಟಲ್ ಡೆಪಾಸಿಟ್ ಜೊತೆಗೆ ಉಚಿತ ವಿದ್ಯಾಭ್ಯಾಸ ಕೊಡಿಸುವುದಾಗಿ ಪ್ರದೀಪ್ ಈಶ್ವರ್ ಭರವಸೆ ನೀಡಿದ್ದಾರೆ.

ಬಾಲ್ಯದಲ್ಲಿ ತಂದೆ-ತಾಯಿ ಕಳೆದುಕೊಂಡು ಅನಾಥರಾಗಿದ್ದ ಪರಿಸ್ಥಿತಿ ನೆನೆದ ಶಾಸಕ

ಇನ್ನು ಈ ವೇಳೆ ಬಾಲ್ಯದಲ್ಲಿ ತಾನೂ ಕೂಡ ಅಪಘಾತದಲ್ಲಿ ತಂದೆ-ತಾಯಿ ಕಳೆದುಕೊಂಡು ಅನಾಥರಾಗಿದ್ದ ತಮ್ಮ ಪರಿಸ್ಥಿತಿಯನ್ನು ನೆನೆದು ಶಾಸಕರು ದುಃಖತಪ್ತರಾದರು. ‘ನಾನು ಅನಾಥವಾದಾಗ ಪ್ರದೀಪ್ ಈಶ್ವರ್ ಇರಲಿಲ್ಲ, ಈಗ ನಿಮ್ಮ ಜೊತೆ ಪ್ರದೀಪ್ ಈಶ್ವರ್ ಇರುತ್ತೇನೆ ಎಂದು ಅಭಯ ನೀಡಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ