‘ಚಿತ್ರರಂಗದಲ್ಲಿ ಸ್ಟಾರ್ ಯಾರೂ ಇಲ್ಲ’: ನೇರವಾಗಿ ಹೇಳಿದ ನಟ ಧ್ರುವ ಸರ್ಜಾ
ಬಹುನಿರೀಕ್ಷಿತ ‘ಕೆಡಿ’ ಸಿನಿಮಾದ ಸುದ್ದಿಗೋಷ್ಠಿ ಮಾಡಲಾಗಿದೆ. ಧ್ರುವ ಸರ್ಜಾ ನಟನೆಯ ಈ ಸಿನಿಮಾಗೆ ಪ್ರೇಮ್ ನಿರ್ದೇಶನ ಮಾಡಿದ್ದು, ‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಆಗುತ್ತಿದೆ. ಈ ಚಿತ್ರದ ಪ್ರೆಸ್ಮೀಟ್ನಲ್ಲಿ ಕೇಳಲಾದ ಪ್ರಶ್ನೆಗೆ ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ಅವರು ನೇರವಾಗಿ ಉತ್ತರ ನೀಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ..
ಸ್ಟಾರ್ ನಟರ ಸಿನಿಮಾಗಳ (Kannada Cinema) ಸಂಖ್ಯೆ ಕಡಿಮೆ ಆಗಿರುವ ಕಾರಣದಿಂದ ಏಕಪರದೆ ಚಿತ್ರಮಂದಿರಗಳು ಮುಚ್ಚುತ್ತಿವೆ ಎಂದು ಅನೇಕರು ಆರೋಪಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ (Kannada Film Industry) ಸ್ಟಾರ್ ಹೀರೋಗಳ ಸಿನಿಮಾಗಳು ಇತ್ತೀಚಿನ ವಾರಗಳಲ್ಲಿ ರಿಲೀಸ್ ಆಗಿರುವುದು ಕಡಿಮೆ. ಈ ಬಗ್ಗೆ ‘ಕೆಡಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಧ್ರುವ ಸರ್ಜಾ (Dhruva Sarja) ಅವರಿಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಅವರು ಈ ರೀತಿ ಉತ್ತರ ನೀಡಿದ್ದಾರೆ. ‘ಚಿತ್ರರಂಗದಲ್ಲಿ ಸ್ಟಾರ್ ಅಂತ ಯಾರೂ ಇಲ್ಲ. ಒಳ್ಳೆಯ ಸಬ್ಜೆಕ್ಟ್ಗಳೇ ಸ್ಟಾರ್. ಜನವರಿಯಿಂದ ಇಲ್ಲಿಯ ತನಕ ಸುಮಾರು 75ಕ್ಕೂ ಅಧಿಕ ಸಿನಿಮಾಗಳು ರಿಲೀಸ್ ಆಗಿವೆ. ಆ ಸ್ಟಾರ್ ಮಾಡ್ತಾರೆ, ಈ ಸ್ಟಾರ್ ಮಾಡ್ತಾರೆ ಅನ್ನೋದಲ್ಲ. ಸಿನಿಮಾ ಚೆನ್ನಾಗಿದ್ದರೆ ಅವರೇ ಸ್ಟಾರ್. ಕ್ವಾಲಿಟಿ ನೀಡಬೇಕು ಎಂಬ ಕಾರಣಕ್ಕಾಗಿ ನಾವು ಸಮಯ ತೆಗೆದುಕೊಳ್ಳುತ್ತಿದ್ದೇವೆ. ಆ ರೀತಿ ಸ್ಪರ್ಧೆ ಇದೆ. ಏನೇನೋ ಮಾಡಿದರೆ ‘ನನ್ಮಗ ಕಿತ್ತೋದ್ ಸಿನಿಮಾ ಮಾಡಿದಾನೆ’ ಅಂತ ನೀವೇ ಹೇಳುತ್ತೀರಿ. ಪ್ಯಾನ್ ಇಂಡಿಯಾ ಸಿನಿಮಾ ಎಂದಾಗ ಯೂನಿವರ್ಸಲ್ ಆಗಿರಬೇಕು. ನಮಗಾಗಿ ಮಾತ್ರ ಮಾಡಿದಾಗ ಅದು ಬೇರೆ. ನೀವು ಹೇಳುವುದರಲ್ಲೂ ಒಂದು ಅರ್ಥ ಇದೆ. ಜಾಸ್ತಿ ಸಿನಿಮಾ ಮಾಡಬೇಕು. ಅದನ್ನು ನಾವು ಖಂಡಿತವಾಗಿ ಮಾಡುತ್ತೇವೆ’ ಎಂದಿದ್ದಾರೆ ಧ್ರುವ ಸರ್ಜಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.