‘ಅಕ್ಟೋಬರ್ 11ಕ್ಕೆ ಮಾರ್ಟಿನ್ ಸಿನಿಮಾ ರಿಲೀಸ್ ಆಗತ್ತೆ’: ಧ್ರುವ ಸರ್ಜಾ
‘ಇಲ್ಲಿಯೇ ನಾವು ಮಾರ್ಟಿನ್ ಸಿನಿಮಾದ ರಿಲೀಸ್ ದಿನಾಂಕ ಅನೌನ್ಸ್ ಮಾಡಿದ್ದು ಯಾಕೆಂದರೆ, ನಾವು ಎಂದಿಗೂ ನಮ್ಮ ಮೂಲವನ್ನು ಮರೆಯಬಾರದು. ನಾವು ಕನ್ನಡದವರು. ಕರ್ನಾಟಕದಲ್ಲೇ ಮೊದಲು ಅನೌನ್ಸ್ ಮಾಡಬೇಕು. ಇದು ನಿಮ್ಮ ಸಿನಿಮಾ. ದಯವಿಟ್ಟು ಎಲ್ಲರೂ ಈ ಸಿನಿಮಾವನ್ನು ನೋಡ್ತೀವಿ ಅಂತ ಭರವಸೆ ಕೊಡಿ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ನಟ ಧ್ರುವ ಸರ್ಜಾ ಅವರು ‘ಮಾರ್ಟಿನ್’ (Martin) ಸಿನಿಮಾಗಾಗಿ ಎರಡೂವರೆ ವರ್ಷಗಳ ಕಾಲ ಮೀಸಲು ಇಟ್ಟಿದ್ದರು. ಈ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಎಂದು ಎಲ್ಲರೂ ಕೇಳುತ್ತಿದ್ದರು. ಇಂದು (ಮೇ 24) ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿ ‘ಮಾರ್ಟಿನ್’ ಸಿನಿಮಾದ ಬಿಡುಗಡೆ ದಿನಾಂಕವನ್ನು (Martin Release Date) ಘೋಷಿಸಿದ್ದಾರೆ. ಅಕ್ಟೋಬರ್ 11ರಂದು ಸಿನಿಮಾ ರಿಲೀಸ್ ಆಗಲಿದೆ. ಪ್ರೆಸ್ಮೀಟ್ನಲ್ಲಿ ಈ ಬಗ್ಗೆ ಧ್ರುವ ಸರ್ಜಾ (Dhruva Sarja) ಮಾತನಾಡಿದರು. ‘ಎರಡೂವರೆ ವರ್ಷ ನಾವು ಈ ಜರ್ನಿ ಮಾಡಿದ್ದೇವೆ. ಒಂದು ಫ್ರೇಮ್ನಲ್ಲೂ ನಾವು ರಾಜಿ ಆಗಿಲ್ಲ. ಇದು ತಂತ್ರಜ್ಞರ ಸಿನಿಮಾ. ಇಷ್ಟು ಬೇಗ ಅವರಿಗೆ ಧನ್ಯವಾದ ಹೇಳುತ್ತಾ ನಾನು ಟೈಮ್ ವೇಸ್ಟ್ ಮಾಡಲ್ಲ. ನನಗೆ ತುಂಬ ಜವಾಬ್ದಾರಿ ಬಂದಿದ್ದೇ ತಂತ್ರಜ್ಞರ ಕಾರಣದಿಂದ. ಮೊದಲ ಬಾರಿಗೆ ನಮ್ಮ ಅಂಕಲ್ ಕಥೆ ಮತ್ತು ಚಿತ್ರಕಥೆ ಮಾಡಿದ್ದಾರೆ. ಅದನ್ನು ನಾನು ಸರಿಯಾಗಿ ಕಾರ್ಯರೂಪಕ್ಕೆ ತರಬೇಕು ಎಂಬುದು ಇತ್ತು. ತುಂಬ ಭಯ-ಭಕ್ತಿಯಿಂದ ಕೆಲಸ ಮಾಡಿದ್ದೇವೆ. ಅಕ್ಟೋಬರ್ 11ರಂದು ಸಿನಿಮಾ ಬಿಡುಗಡೆ ಆಗಲಿದೆ. ದಯವಿಟ್ಟು ನಿಮ್ಮ ಸ್ನೇಹಿತರಿಗೆಲ್ಲರಿಗೂ ಈ ಬಗ್ಗೆ ಹೇಳಿ’ ಎಂದಿದ್ದಾರೆ ಧ್ರುವ ಸರ್ಜಾ. ಈ ಸಿನಿಮಾಗೆ ಎ.ಪಿ. ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಉದಯ್ ಮೆಹ್ತಾ ಬಂಡವಾಳ ಹೂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಡಿಕೆ ಶಿವಕುಮಾರ್ ಹಾಗೂ ಕೆಎನ್ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ

