‘ದೇವರ’ ಬಿಡುಗಡೆ ಟೈಮ್ನಲ್ಲೇ ‘ಮಾರ್ಟಿನ್’ ರಿಲೀಸ್; ಏನಂದ್ರು ನಿರ್ದೇಶಕರು?
ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಒಟ್ಟಿಗೆ ಬರುತ್ತಿವೆ. ಅಕ್ಟೋಬರ್ 11ಕ್ಕೆ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಬಿಡುಗಡೆ ಆಗಲಿದೆ. ಜೂ. ಎನ್ಟಿಆರ್ ಅವರ ‘ದೇವರ’ ಚಿತ್ರ ಅಕ್ಟೋಬರ್ 10ರಂದು ತೆರೆಕಾಣಲಿದೆ. ಇದರಿಂದ ಕ್ಲ್ಯಾಶ್ ಆಗಲ್ವಾ ಎಂಬ ಪ್ರಶ್ನೆಗೆ ‘ಮಾರ್ಟಿನ್’ ಸಿನಿಮಾದ ನಿರ್ದೇಶನ ಎ.ಪಿ. ಅರ್ಜುನ್ ಉತ್ತರ ನೀಡಿದ್ದಾರೆ.
ಇಷ್ಟು ದಿನ ಲೋಕಸಭಾ ಎಲೆಕ್ಷನ್ ಮತ್ತು ಐಪಿಎಲ್ ಅಬ್ಬರ ಜಾಸ್ತಿ ಇದ್ದಿದ್ದರಿಂದ ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿರಲಿಲ್ಲ. ಈಗ ‘ಮಾರ್ಟಿನ್’ (Martin) ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ. ಅಕ್ಟೋಬರ್ 11ರಂದು ‘ಮಾರ್ಟಿನ್’ ತೆರೆಕಾಣಲಿದೆ. ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ (Devara Movie) ಅಕ್ಟೋಬರ್ 10ರಂದು ಬಿಡುಗಡೆ ಆಗಲಿದೆ. ಇದರಿಂದ ಡೇಟ್ ಕ್ಲ್ಯಾಶ್ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ನಿರ್ದೇಶನ ಎ.ಪಿ. ಅರ್ಜುನ್ (AP Arjun) ಅವರು ಉತ್ತರ ನೀಡಿದ್ದಾರೆ. ‘ವಿಜಯದಶಮಿ ಎಂಬುದು ಕನ್ನಡ ನಾಡಿನ ಅದ್ಭುತವಾದ ಹಬ್ಬ. ಈ ಹಬ್ಬಕ್ಕೆ ನಾವು ಏನಾದರೂ ಕೊಡಲೇಬೇಕು. ಆಗೆಲ್ಲ ಕನ್ನಡದಲ್ಲೇ ಮೂರು-ನಾಲ್ಕು ಸಿನಿಮಾ ರಿಲೀಸ್ ಆಗುತ್ತಿತ್ತು. ಈಗ ನಮ್ಮ ವಿಜಯದಶಮಿಗೆ ನಮ್ಮದೊಂದು ಸಿನಿಮಾ ರಿಲೀಸ್ ಮಾಡದಿದ್ದರೆ ಹೇಗೆ? ಕ್ಲ್ಯಾಶ್ ಎನ್ನೋದಕ್ಕಿಂತಲೂ ನಮ್ಮ ತಂಡದಿಂದ ನಮ್ಮ ಸಿನಿಮಾ ಬರುತ್ತಿದೆ, ಅವರ ತಂಡದಿಂದ ಅವರ ಸಿನಿಮಾ ಬರುತ್ತಿದೆ. ಎರಡು ಸಿನಿಮಾಗಳನ್ನು ತಡೆದುಕೊಳ್ಳುವಂತಹ ಸಾಮರ್ಥ್ಯ ಇರುವ ಚಿತ್ರಮಂದಿರಗಳು ಭಾರತದಲ್ಲಿ ಇವೆ. ಎರಡೂ ಸಿನಿಮಾವನ್ನು ವಿಜಯದಶಮಿ ಸಮಯದಲ್ಲಿ ನೋಡುವಂತಹ ಜನರು ಕೂಡ ನಮ್ಮ ದೇಶದಲ್ಲಿ ಇದ್ದಾರೆ’ ಎಂದು ಎ.ಪಿ. ಅರ್ಜುನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ

