ಬೆಂಗಳೂರು: ಪೀಣ್ಯ ದಾಸರಹಳ್ಳಿ, ಬಗಲಗುಂಟೆ, ಕುರುಬರಹಳ್ಳಿ ಮೊದಲಾದ ಕಡೆ ಧಾರಾಕಾರವಾಗಿ ಸುರಿದ ಮಳೆ

ಬೆಂಗಳೂರು: ಪೀಣ್ಯ ದಾಸರಹಳ್ಳಿ, ಬಗಲಗುಂಟೆ, ಕುರುಬರಹಳ್ಳಿ ಮೊದಲಾದ ಕಡೆ ಧಾರಾಕಾರವಾಗಿ ಸುರಿದ ಮಳೆ

ಅರುಣ್​ ಕುಮಾರ್​ ಬೆಳ್ಳಿ
|

Updated on: May 24, 2024 | 7:40 PM

ಚರಂಡಿ ಮತ್ತು ರಾಜಾ ಕಾಲುವೆಗಳಲ್ಲಿ ಶೇಖರಣೆಗೊಂಡಿರುವ ಹೂಳನ್ನು ತೆಗೆದು ಸರಾಗವಾಗಿ ನೀರು ಹರಿದು ಹೋಗುವ ಏರ್ಪಾಟು ಮಾಡಿ ಅಂತ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನಗರದ ಪ್ರದಕ್ಷಿಣೆ ಹಾಕಿದ ನಂತರ ಹೇಳಿದ್ದರು. ಆ ಕೆಲಸ ಆರಂಭವಾಗಿದೆಯೇ? ಬಿಬಿಎಂಪಿ ಕಮೀಶನರ್ ತುಷಾರ್ ಗಿರಿನಾಥ್ ಅವರೇ ಹೇಳಬೇಕು!

ಬೆಂಗಳೂರು: ಇದನ್ನು ಕಾರ್ಮಿಕ ವಿರೋಧಿ ಮಳೆ (anti Labour rain) ಅಂತ ಅಂದರೆ ತಪ್ಪಾಗಲಾರದು. ಕಾರ್ಮಿಕ ವಿರೋಧಿ ಮಳೆ ಅಂದರೆ ನಿಮಗೆ ಗೊತ್ತಾಗಿರಬಹುದು. ಬೆಳಗ್ಗೆ ಆಫೀಸು, ಕೋರ್ಟ್ ಕಚೇರಿಗಳಿಗೆ ಹೋದವರು ಅವತ್ತಿನ ಕೆಲಸ ಮುಗಿಸಿ ಮನೆಗೆ ಹೋಗುವ ಸಮಯದಲ್ಲಿ ಮಳೆ ಸುರಿಯಲು ಶುರುವಾದರೆ ಅದನ್ನು ಕಾರ್ಮಿಕ ವಿರೋಧಿ ಮಳೆ ಅನ್ನಬಹುದು ಎಂದು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು (late Ravi Belagere) ಒಮ್ಮೆ ಮಳೆಯ ಪ್ರಕಾರಗಳ ಬಗ್ಗೆ ಹೇಳುತ್ತಾ ಬರೆದಿದ್ದರು! ನಗರದ ಪೀಣ್ಯ, ದಾಸರಹಳ್ಳಿ, ಬಗಲುಕುಂಟೆ, ಮಲ್ಲಸಂದ್ರ ಮತ್ತು ಶೆಟ್ಟಿಹಳ್ಳಿ (Shettihalli) ಏರಿಯಾಗಳಲ್ಲಿ ಇವತ್ತು ಸಾಯಂಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕುರುಬರಹಳ್ಳಿಯಲ್ಲೂ ಮಳೆ ಸುರಿದಿದೆ. ನಗರದಲ್ಲಿ ಮಳೆ ಸುರಿಯಲಾರಂಭಿಸಿದರೆ ಜನ ಎದುರಿಸುವ ತಾಪತ್ರಯಗಳು ನಿಮಗೆ ಗೊತ್ತಲ್ಲ! ಚರಂಡಿ ಮತ್ತು ರಾಜಾ ಕಾಲುವೆಗಳಲ್ಲಿ ಶೇಖರಣೆಗೊಂಡಿರುವ ಹೂಳನ್ನು ತೆಗೆದು ಸರಾಗವಾಗಿ ನೀರು ಹರಿದು ಹೋಗುವ ಏರ್ಪಾಟು ಮಾಡಿ ಅಂತ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನಗರದ ಪ್ರದಕ್ಷಿಣೆ ಹಾಕಿದ ನಂತರ ಹೇಳಿದ್ದರು. ಆ ಕೆಲಸ ಆರಂಭವಾಗಿದೆಯೇ? ಬಿಬಿಎಂಪಿ ಕಮೀಶನರ್ ತುಷಾರ್ ಗಿರಿನಾಥ್ ಅವರೇ ಹೇಳಬೇಕು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಳಗಾವಿಯಲ್ಲಿ ಸಿಡಿಲಿಗೆ ಇಬ್ಬರು ಬಲಿ, 6 ಜನರ ಸ್ಥಿತಿ ಗಂಭೀರ: ರಾಜ್ಯದಲ್ಲಿ ಎಲ್ಲೆಲ್ಲಿ ಹೇಗಿದೆ ಮಳೆ ಪರಿಸ್ಥಿತಿ? ಇಲ್ಲಿದೆ ವಿವರ