ಮಂಗಳಮುಖಿಯರೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಾಗಿಣಿ ದ್ವಿವೇದಿ: ವಿಡಿಯೋ
ತುಪ್ಪದ ಹುಡುಗಿ ಎಂದೇ ಖ್ಯಾತವಾಗಿರುವ ರಾಗಿಣಿ ದ್ವಿವೇದಿ ಹುಟ್ಟುಹಬ್ಬ ಮಂಗಳಮುಖಿಯರೊಟ್ಟಿಗೆ ಆಚರಣೆ ಮಾಡಿಕೊಂಡರು. ಈ ಸಮಯದಲ್ಲಿ ಮಂಗಳಮುಖಿಯರ ಕಾಲಿಗೆ ಎರಗಿ ಆಶೀರ್ವಾದ ಸಹ ಪಡೆದುಕೊಂಡರು. ಇಲ್ಲಿದೆ ನೋಡಿ ರಾಗಿಣಿ ಬರ್ತ್ಡೇ ವಿಡಿಯೋ.
ನಟಿ ರಾಗಿಣಿ ದ್ವಿವೇದಿ (Ragini Dwivedi) ಹುಟ್ಟುಹಬ್ಬ (Birthday) ಇಂದು (ಮೇ 24). ನಟ-ನಟಿಯರು ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಮಾಮೂಲು. ಆದರೆ ನಟಿ ರಾಗಿಣಿ ದ್ವಿವೇದಿ ಇಂದು ತಮ್ಮ ಹುಟ್ಟುಹಬ್ಬವನ್ನು ಮಂಗಳಮುಖಿಯರೊಟ್ಟಿಗೆ ಆಚರಣೆ ಮಾಡಿಕೊಂಡರು. ಮಂಗಳಮುಖಿಯರನ್ನು ಆಹ್ವಾನಿಸಿ ಅವರ ಕಾಲಿಗೆ ಎರಗಿ ಆಶೀರ್ವಾದವನ್ನು ಸಹ ರಾಗಿಣಿ ಪಡೆದರು. ಮಂಗಳಮುಖಿಯರು ಮಾತ್ರವೇ ಅಲ್ಲದೆ ಬಿಬಿಎಂಬಿ ಸ್ವಚ್ಛತಾ ಸಿಬ್ಬಂದಿ, ಸ್ಮಶಾನದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಕರೆದು ಅವರೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಮಯದಲ್ಲಿ ಕೆಲವು ರಾಗಿಣಿಯ ಅಭಿಮಾನಿಗಳು ಸಹ ಇದ್ದರು. ಇದೇ ಸಮಯದಲ್ಲಿ ಸ್ವಚ್ಛತಾ ಸಿಬ್ಬಂದಿಗೆ ಇನ್ನಿತರರಿಗೆ ದಿನಸಿ ಸಾಮಗ್ರಿಗಳು, ಬಟ್ಟೆಗಳನ್ನು ರಾಗಿಣಿ ದ್ವಿವೇದಿ ವಿತರಣೆ ಮಾಡಿದರು. ಒಟ್ಟಾರೆಯಾಗಿ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ನಟಿ ಆಚರಣೆ ಮಾಡಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 24, 2024 06:38 PM
Latest Videos