ಜೂ ಎನ್ಟಿಆರ್ ಹುಟ್ಟುಹಬ್ಬಕ್ಕೆ ಬಳ್ಳಾರಿಯಲ್ಲಿ ಅದ್ಧೂರಿ ಬೈಕ್ ರ್ಯಾಲಿ
ಜೂ ಎನ್ಟಿಆರ್ ಮೇ 20ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಒಂದು ದಿನ ಮುಂಚಿತವಾಗಿ ಅದ್ಧೂರಿ ಬೈಕ್ ರ್ಯಾಲಿ ನಡೆಸಿದ್ದಾರೆ. ಅದೂ ಬಳ್ಳಾರಿಯಲ್ಲಿ.

ಟಾಲಿವುಡ್ನ (Tollywood) ಸ್ಟಾರ್ ನಟ ಆಗಿದ್ದ ಜೂ ಎನ್ಟಿಆರ್ (Jr NTR), ‘RRR’ ಸಿನಿಮಾದ ಬಳಿಕ ಭಾರತದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ‘ಆರ್ಆರ್ಆರ್’ ಸಿನಿಮಾ ಜೂ ಎನ್ಟಿಆರ್ ಅವರನ್ನು ಗ್ಲೋಬಲ್ ನಟನನ್ನಾಗಿ ಮಾಡಿದೆ. ಮೊದಲೇ ಜೂ ಎನ್ಟಿಆರ್ಗೆ ಭಾರಿ ಸಂಖ್ಯೆಯ ಅಭಿಮಾನಿಗಳಿದ್ದರು, ಈಗ ಅಭಿಮಾನಿಗಳ ಸಂಖ್ಯೆ ಎರಡು ಪಟ್ಟಾಗಿದೆ. ಜೂ ಎನ್ಟಿಆರ್ ಅಭಿಮಾನಿಗಳು, ಅವರ ಸಿನಿಮಾಗಲ ಪಾತ್ರಗಳಂತೆ ರಫ್ ಆಂಟ್ ಟಫ್. ಮೇ 20 ರಂದು ಜೂ ಎನ್ಟಿಆರ್ ಹುಟ್ಟುಹಬ್ಬವಿದ್ದು ಒಂದು ದಿನ ಮುಂಚಿತವಾಗಿಯೇ ಅಭಿಮಾನಿಗಳು ಸಂಭ್ರಮ ಶುರುವಿಟ್ಟುಕೊಂಡಿದ್ದಾರೆ. ಬಳ್ಳಾರಿಯಲ್ಲಿ ಜೂ ಎನ್ಟಿಆರ್ ಅಭಿಮಾನಿಗಳು ಬೈಕ್ ರ್ಯಾಲಿ ಮಾಡಿದ್ದಾರೆ.
ಹಲವಾರು ಮಂದಿ ಯುವಕರು, ಜೂ ಎನ್ಟಿಆರ್ ಚಿತ್ರ ಹೊಂದಿರುವ ಹಳದಿ ಬಣ್ಣದ ಬಾವುಟಗಳನ್ನು ಹಿಡಿದು ಬೈಕ್ಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆಯುದ್ದಕ್ಕೂ ‘ಜೈ ಎನ್ಟಿಆರ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಬಳ್ಳಾರಿ ಕರ್ನಾಟಕದ್ದೇ ಆದರು, ಅಲ್ಲಿ ತೆಲುಗಿನ ಪ್ರಭಾವ ಜೋರಾಗಿದೆ. ಹಾಗಾಗಿ ಅಲ್ಲಿ ಜೂ ಎನ್ಟಿಆರ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿದ್ದಾರೆ. ಎನ್ಟಿಆರ್ ಅನ್ನು ಕಾಣಲು ಬಳ್ಳಾರಿಯಿಂದ ಹಲವು ಹಯುವಕರು ಹೈದರಾಬಾದ್ಗೆ ಸಹ ತೆರಳಿದ್ದಾರಂತೆ.
NTR having Huge Fan base in Ballari.. Celebrations Begins 💥💥#FearSong @tarak9999pic.twitter.com/NHn08F2Ww8
— Jr NTR Fan Club (@JrNTRFC) May 19, 2024
ಇದು ಬಳ್ಳಾರಿಯ ಕತೆಯಾದರೆ ಜಪಾನ್ನಲ್ಲಿಯೂ ಸಹ ಜೂ ಎನ್ಟಿಆರ್ ಅಭಿಮಾನಿಗಳು ಒಂದು ದಿನ ಮುಂಚಿತವಾಗಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಜೂ ಎನ್ಟಿಆರ್ರ ಬೇರೆ ಬೇರೆ ಸಿನಿಮಾಗಳ ಪಾತ್ರಗಳ ಪೋಸ್ಟರ್ಗಳನ್ನು ಕಟ್ಟಿ, ಜೂ ಎನ್ಟಿಆರ್ ಅವರ ಪೋಸ್ಟರ್ಗಳನ್ನು ಕಟ್ಟಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇಂದು ನಡೆದ ಎಸ್ಆರ್ಎಚ್ ಪಂದ್ಯದ ನಡುವೆ ಜೂ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾದ ಹಾಡನ್ನು ಸಹ ಕೇಳಿಲಾಯ್ತು.
ಇದನ್ನೂ ಓದಿ:‘ದೇವರ’ ಹಾಡು ಬಿಡುಗಡೆ, ಭಯ ಹುಟ್ಟಿಸುತ್ತಿರುವ ಜೂ ಎನ್ಟಿಆರ್
ಆಂಧ್ರ-ತೆಲಂಗಾಣಗಳಲ್ಲಂತೂ ಜೂ ಎನ್ಟಿಆರ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಲು ತಯಾರಿ ನಡೆಸಿದ್ದಾರೆ. ರಕ್ತದಾನ ಶಿಬಿರಗಳು, ಅನ್ನದಾನಗಳು ಜೋರಾಗಿ ಆಯೋಜಿಸಲಾಗಿದೆ. ಜೂ ಎನ್ಟಿಆರ್ ಹುಟ್ಟುಹಬ್ಬದ ಪ್ರಯುಕ್ತ ಈಗಾಗಲೇ ‘ದೇವರ’ ಸಿನಿಮಾದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಹೊಸ ಸಿನಿಮಾದ ಘೋಷಣೆ ಸಹ ಆಗುವ ಸಾಧ್ಯತೆ ಇದೆ. ಜೊತೆಗೆ ‘ವಾರ್ 2’ ಸಿನಿಮಾದ ಅಪ್ಡೇಟ್ ಸಹ ಹೊರಬೀಳುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ