AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇವರ’ ಹಾಡು ಬಿಡುಗಡೆ, ಭಯ ಹುಟ್ಟಿಸುತ್ತಿರುವ ಜೂ ಎನ್​ಟಿಆರ್

ದೇವರ ಸಿನಿಮಾದ ಹೊಸ ಹಾಡೊಂದು ಬಿಡುಗಡೆ ಆಗಿದೆ. ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿರುವ ಹಾಡನ್ನು ಅವರೇ ಹಾಡಿದ್ದಾರೆ. ಹಾಡನ್ನು ‘ಫಿಯರ್ ಸಾಂಗ್’ ಎಂದು ಕರೆಯಲಾಗಿದೆ.

‘ದೇವರ’ ಹಾಡು ಬಿಡುಗಡೆ, ಭಯ ಹುಟ್ಟಿಸುತ್ತಿರುವ ಜೂ ಎನ್​ಟಿಆರ್
ಮಂಜುನಾಥ ಸಿ.
|

Updated on: May 19, 2024 | 9:41 PM

Share

ಜೂ ಎನ್​ಟಿಆರ್ (Jr NTR) ನಟನೆಯ ‘ದೇವರ’ (Devara) ಸಿನಿಮಾ ತೆಲುಗು ಚಿತ್ರರಂಗದ ಬಲು ನಿರೀಕ್ಷೆಯ ಸಿನಿಮಾ. ‘ಆರ್​ಆರ್​ಆರ್’ ಸಿನಿಮಾದಿಂದ ಭಾರಿ ದೊಡ್ಡ ಯಶಸ್ಸು ಗಳಿಸಿರುವ ಜೂ ಎನ್​ಟಿಆರ್ ಇದೀಗ ‘ದೇವರ’ ಸಿನಿಮಾ ಮೂಲಕ ಆ ಯಶಸ್ಸನ್ನು ಮುಂದುವರೆಸುವ ಉಮೇದಿನಲ್ಲಿದ್ದಾರೆ. ಹಾಗಾಗಿಯೇ ಈ ಸಿನಿಮಾಕ್ಕೆ ವಿದೇಶದಿಂದ ತಂತ್ರಜ್ಞರನ್ನು ಕರೆತಂದಿದ್ದಾರೆ. ಮುಂಚೆ ಇದ್ದ ಸಿನಿಮಾದ ಬಜೆಟ್ ಅನ್ನು ಮೂರು ಪಟ್ಟು ಹೆಚ್ಚು ಮಾಡಲಾಗಿದೆ. ಸಿನಿಮಾದ ಬಗ್ಗೆ ಹಚ್ಚಿನ ಮಾಹಿತಿಯನ್ನು ಹಂಚಿಕೊಳ್ಳದಿದ್ದ ಚಿತ್ರತಂಡ ಇದೀಗ ಹಾಡೊಂದನ್ನು ಬಿಡುಗಡೆ ಮಾಡಿದ್ದು, ಕತೆಯ ಪ್ರಧಾನ ಪಾತ್ರ ‘ದೇವರ’ನ ವ್ಯಕ್ತಿತ್ವವನ್ನು ಹಾಡಿನಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದೆ.

ಸದ್ಯದ ಬಲು ಬೇಡಿಕೆಯ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ‘ದೇವರ’ ಸಿನಿಮಾಕ್ಕೆ ಸಂಗೀತ ನೀಡಿದ್ದು, ಅವರೇ ಸಂಗೀತ ಸಂಯೋಜಿಸಿ ಹಾಡಿರುವ ಹಾಡೊಂದನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗಿದ್ದು, ವಿಡಿಯೋನಲ್ಲಿ ಸ್ವತಃ ಅನಿರುದ್ಧ್ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ. ಪಾಪ್ ಗಾಯಕರ ರೀತಿ ಹಾಡಿ-ಕುಣಿದಿದ್ದಾರೆ. ಜೊತೆಗೆ ‘ದೇವರ’ ಸಿನಿಮಾದ ಕೆಲವು ಆಕ್ಷನ್ ದೃಶ್ಯಗಳ ತುಣುಕುಗಳನ್ನು ಸಹ ಅಲ್ಲಲ್ಲಿ ತೋರಿಸಲಾಗಿದೆ.

ಸಿನಿಮಾದ ಕತೆಯು ಸಮುದ್ರಕ್ಕೆ ಸಂಬಂಧಿಸಿದೆ ಎಂಬುದು ಹಾಡಿನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಜೊತೆಗೆ ಜೂ ಎನ್​ಟಿಆರ್ ಎರಡು ಶೇಡ್​ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆಂಬುದು ಸಹ ತಿಳಿದು ಬರುತ್ತಿದೆ. ಭರ್ಜರಿ ಆಕ್ಷನ್ ದೃಶ್ಯಗಳು ಸಿನಿಮಾದಲ್ಲಿರುವುದು ಹಾಡಿನಿಂದ ಪಕ್ಕಾ ಆಗುತ್ತಿದೆ. ಜೊತೆಗೆ ಸಿನಿಮಾದಲ್ಲಿ ಜೂ ಎನ್​ಟಿಆರ್ ಬಳಸಿರುವ ಆಯುಧಗಳು ಸಖತ್ ಭಿನ್ನವಾಗಿವೆ. ಹಲವು ರೀತಿಯ ಆಯುಧಗಳನ್ನು ಜೂ ಎನ್​ಟಿಆರ್ ಬಳಸಿದ್ದು ಅವುಗಳ ಸಣ್ಣ ಝಲಕ್ ತೋರಿಸಲಾಗಿದೆ.

ಇದನ್ನೂ ಓದಿ:‘ಅಲ್ಲಿ ಎಲ್ಲರೂ ಮೃಗಗಳೇ ಯಾರಿಗೂ ಸಾವಿನ ಬಗ್ಗೆ ಭಯವಿಲ್ಲ, ಆದರೆ..’: ಜೂ ಎನ್​ಟಿಆರ್ ಹೊಸ ಸಿನಿಮಾ ಕತೆ

ಹಾಡಿಗೆ ‘ಫಿಯರ್ ಸಾಂಗ್’ (ಹೆದರಿಸುವ ಹಾಡು) ಎಂದು ಚಿತ್ರತಂಡ ಕರೆದಿದೆ. ಅದಕ್ಕೆ ತಕ್ಕಂತೆ ಹಾಡಿನ ವಿಡಿಯೋ ತುಣುಕಿನಲ್ಲಿ ಬರುವ ಆಕ್ಷನ್, ಆಯುಧಗಳು, ಹರಿಯುವ ರಕ್ತ ಹೆದರಿಕೆ ಮೂಡಿಸುತ್ತವೆ. ಹಾಡು ಸಖತ್ ವೇಗವಾಗಿದ್ದು, ಸಾಹಿತ್ಯವನ್ನು ಸಂಗೀತದ ಅಬ್ಬರವೇ ನುಂಗಿಬಿಟ್ಟಿದೆ. ಜೂ ಎನ್​ಟಿಆರ್ ಅಭಿಮಾನಿಗಳಿಗೆ ಹಾಡು ಇಷ್ಟವಾಗುವ ಸಾಧ್ಯತೆ ಹೆಚ್ಚಿದೆ.

‘ದೇವರ’ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಹಾಲಿವುಡ್ ನ ಜನಪ್ರಿಯ ಆಕ್ಷನ್ ಸಂಯೋಜಕರು ಈ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ. ಸಿನಿಮಾದ ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಜೂ ಎನ್​ಟಿಆರ್ ಅವರ ಸಹೋದರ ಬಂಡವಾಳ ಹೂಡಿದ್ದಾರೆ. ‘ದೇವರ’ ಸಿನಿಮಾ ಅಕ್ಟೋಬರ್ 10ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ