ಪೆನ್​ಡ್ರೈವ್​ ಕೇಸ್: ಶಿವರಾಮೇಗೌಡ, ದೇವರಾಜೇಗೌಡ, ಡಿಕೆಶಿ ​ಸೀಕ್ರೆಟ್ ಆಡಿಯೋ​ ವೈರಲ್

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣಕ್ಕೆಸಂಬಂಧಿಸಿದಂತೆ ಮತ್ತೊಂದು ಆಡಿಯೊ ಬಯಲಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಾಸನ ಪೆನ್‌ಡ್ರೈವ್‌ ಕೇಸ್‌ಗೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ (Devarajegowda), ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಡುವಿನ ದೂರವಾಣಿ ಸಂಭಾಷಣೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಕೆಲ ಸ್ಫೋಟಕ ಅಂಶಗಳು ಬಯಲಾಗಿವೆ.

ಪೆನ್​ಡ್ರೈವ್​ ಕೇಸ್: ಶಿವರಾಮೇಗೌಡ, ದೇವರಾಜೇಗೌಡ, ಡಿಕೆಶಿ ​ಸೀಕ್ರೆಟ್ ಆಡಿಯೋ​ ವೈರಲ್
Follow us
|

Updated on:May 19, 2024 | 5:54 PM

ಬೆಂಗಳೂರು, (ಮೇ 19): ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಕೇಸ್​ಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಈ ಪ್ರಕರಣದ ರೂವಾರಿ ಡಿಕೆ ಶಿವಕುಮಾರ್ ಎಂದು ಮೊನ್ನೇ ಅಷ್ಟೇ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರು ಗಂಭೀರ ಆರೋಪಗಳನ್ನು ಮಾಡಿದ್ದರು. ಅದಕ್ಕೂ ಮೊದಲು ಕೆಲ ಫೋಟೋ, ಆಡಿಯೋ ಬಿಡುಗಡೆ ಮಾಡಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಮಾಜಿ ಸಂಸದ ಎಲ್‌ಆರ್ ಶಿವರಾಮೇಗೌಡ ಹಾಗು ವಕೀಲ‌ ದೇವರಾಜೇಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಇನ್ನು ಈ ಆಡಿಯೋದಲ್ಲಿ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಹೆಸರನ್ನು ಹೇಳುವಂತೆ ಬಿಜೆಪಿ ಮುಖಂಡ ದೇವರಾಜೇಗೌಡಗೆ ಎಲ್.ಆರ್ ಶಿವರಾಮೇಗೌಡ ಒತ್ತಡ ಹಾಕಿದ್ದಾರೆ ಅನ್ನೋ ಸ್ಫೋಟಕ ಅಂಶ ಬಯಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಆಡಿಯೋ ಟಿವಿ9ಗೆ ಲಭ್ಯವಾಗಿದೆ. ಇದರಲ್ಲಿ ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಹೆಸರನ್ನು ಸಿಕ್ಕಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಅಲ್ಲದೇ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರ ಬಗ್ಗೆ ಎಲ್.ಆರ್ ಶಿವರಾಮೇಗೌಡರು ಹಗುರವಾಗಿ ಮಾತನಾಡಿದ್ದಾರೆ. ಕುಮಾರಸ್ವಾಮಿ ಹೆಸರನ್ನು ಹೇಳುವಂತೆ ಎಲ್.ಆರ್ ಶಿವರಾಮೇಗೌಡ, ದೇವರಾಜೇಗೌಡನ ಮೇಲೆ ಒತ್ತಡ ಹಾಕಿದ್ದರು ಎಂದು ಹೇಳಲಾಗಿದೆ.

ಡಿಕೆ ಶಿವಕುಮಾರ್-ದೇವರಾಜೇಗೌಡ ಆಡಿಯೋ ಸಂಭಾಷಣೆ

ಲಭ್ಯವಾಗಿರುವ ಆಡಿಯೊ ಪ್ರಕಾರ, ಮೊದಲು ದೇವರಾಜೇಗೌಡ ಹಾಗೂ ಎಲ್‌.ಆರ್.ಶಿವರಾಮೇಗೌಡ ದೂರವಾಣಿಯಲ್ಲಿ ಮಾತನಾಡಿದ್ದಾರೆ. “ನಾನು ಫೋನ್‌ಅನ್ನು ಡಿ.ಕೆ.ಶಿವಕುಮಾರ್‌ ಅವರಿಗೆ ಕೊಡುತ್ತೇನೆ. ಏನೇನಾಗಿದೆ ಎಲ್ಲದರ ಕುರಿತು ಮಾಹಿತಿ ಕೊಡು” ಎಂಬುದಾಗಿ ಶಿವರಾಮೇಗೌಡ ಅವರು ದೇವರಾಜೇಗೌಡರಿಗೆ ತಿಳಿಸುತ್ತಾರೆ. ಇದಾದ ಬಳಿಕ ದೇವರಾಜೇಗೌಡ ಅವರು ಡಿಸಿಎಂ ಡಿ.ಕೆ.ಶಿವಕುಮಾರ್‌ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.

ಏನೇನಾಯ್ತು? ಏನಿದೆ ಪರಿಸ್ಥಿತಿ” ಎಂಬುದಾಗಿ ಡಿ.ಕೆ.ಶಿವಕುಮಾರ್‌ ಕೇಳುತ್ತಾರೆ. ಆಗ ದೇವರಾಜೇಗೌಡ ಅವರು, “ಸದ್ಯದ ಪರಿಸ್ಥಿತಿಯಲ್ಲಿ ನಾಳೆ ಕೋರ್ಟ್‌ನಲ್ಲಿ ಸ್ಟೇ ಆಗೋ ಚಾನ್ಸ್‌ ಇದೆ. ಸರಿಯಾಗಿ ದೂರು ಕೊಟ್ಟಿಲ್ಲ. ಮಹಿಳೆ ನೀಡಿರುವ ಹೇಳಿಕೆ ಹಾಗೂ ನಡೆದಿರುವ ಘಟನೆ ಮಧ್ಯೆ ಹಲವು ವರ್ಷ ವ್ಯತ್ಯಾಸ ಇದೆ. ಆದರೆ, ಎಸ್‌ಐಟಿಯವರು ಮಹಿಳೆಯನ್ನು ಕರೆದುಕೊಂಡು ಹೋಗಿ ವಿಚಾರಣೆ, ತನಿಖೆ ನಡೆಸಿದರೆ ಸೀರಿಯಸ್‌ ಕೇಸ್‌ ಆಗುತ್ತದೆ. ಆದರೆ, ಮಹಿಳೆಯು ಪ್ರಕರಣದಲ್ಲಿ ಸ್ಟ್ರಾಂಗ್‌ ಇಲ್ಲ” ಎಂದಿದ್ದಾರೆ.

ಇದಾದ ಬಳಿಕ ಡಿ.ಕೆ.ಶಿವಕುಮಾರ್‌, “ಏನಾದರೂ ಬೇರೆ ಎವಿಡೆನ್ಸ್‌ ಇದೆಯಾ” ಎಂದು ಪ್ರಶ್ನಿಸಿದ್ದಾರೆ. ಆಗ, ದೇವರಾಜೇಗೌಡ ಅವರು “ಯಾವುದೇ ಎವಿಡೆನ್ಸ್‌ ಇಲ್ಲ” ಎಂದಿದ್ದಾರೆ. ಇದಾದ ಬಳಿಕ ಇಬ್ಬರ ನಡುವಿನ ಮಾತುಕತೆ ಮುಗಿದಿದೆ. ದೇವರಾಜೇಗೌಡ ಅವರು ಜೈಲಿಗೆ ಹೋಗುವ ಮೊದಲು ನಡೆದ ಮಾತುಕತೆ ಇದಾಗಿದೆ ಎಂದು ಮೂಲಗಳು ತಿಳಿಸಿವೆ.

ಆಡಿಯೋ :1

  • ಶಿವರಾಮೇಗೌಡ– ಗೌಡ್ರೇ
  • ದೇವರಾಜೇಗೌಡ- ಅಣ್ಣ ನಮಸ್ಕಾರ ಹೇಳಣ್ಣ
  • ಶಿವರಾಮೇಗೌಡ-ಈಗ ಮನೆ ಇರೋದು ಎಲ್ಲಿ ನಿಂದು
  • ದೇವರಾಜೇಗೌಡ– ಹೆಬ್ಬಾಳದಲ್ಲೊಂದು ಮನೆ ಇದೆ ಅಣ್ಣ
  • ಶಿವರಾಮೇಗೌಡ– ಈಗ ವಾಸ ಎಲ್ಲಿದ್ದೀಯ ಹೇಳಪ್ಪ..
  • ದೇವರಾಜೇಗೌಡ- ಇಲ್ಲಿ ಪ್ರೆಸ್ಟೀಜ್ ಟ್ರಾಂಕ್ವಿಟಿ ಅಂತ ಅಣ್ಣ ಬೊಮ್ಮನಹಳ್ಳಿ ಹೊಸಕೋಟೆ ಹತ್ತಿರ ಬರುತ್ತೆ ಅಣ್ಣ
  • ಶಿವರಾಮೇಗೌಡ – ಈಗ ನೀನು ಸದಾಶಿವನಗರ ಬರೋಕೆ‌ ಎಷ್ಟೊತ್ತಾಗುತ್ತೆ.
  • ದೇವರಾಜೇಗೌಡ– ಅಣ್ಣ ಹೆಂಗೇ ಮಾಡಿದ್ರು ಒಂದೂವರೆ, ಎರಡು ಗಂಟೆ ಆಗುತ್ತೆ
  • ಶಿವರಾಮೇಗೌಡ- ಅಷ್ಟು ದೂರ ಹೋಗಿ ಉಳಿದುಕೊಳ್ತಾರಾ ಯಾರಾದ್ರೂ ಬೆಂಗಳೂರಲ್ಲಿ
  • ದೇವರಾಜೇಗೌಡ– ಸಿಟಿ ಬೇಡ ಸ್ವಲ್ಪ ಔಟ್ ಸ್ಕರ್ಟ್ ಇರೋಣ ಅಂತ ಅಪಾರ್ಟ್ಮೆಂಟ್ ತಗೊಂಡ್ ಬಿಟ್ಟೆ
  • ಶಿವರಾಮೇಗೌಡ– ಇಲ್ಲಿ ಡಿಕೆ ಸಾಹೇಬರಿಗೆ ಕೊಡ್ತಿನಿ ಕರೆಕ್ಟ್ ಆಗಿ ಏನೇನ್ ಆಗ್ತಾ ಇದೆ ಹೇಳು. ನಿನಗೇ ಏನೇನ್ ಸಿಕ್ಕಿದೆ ಎಲ್ಲ ಹೇಳು
  • ದೇವರಾಜೇಗೌಡ- ಕೊಡಿ ಕೊಡಿ
  • ಡಿಕೆ ಶಿವಕುಮಾರ್– ನಮಸ್ಕಾರ ದೇವರಾಜ್
  • ದೇವರಾಜೇಗೌಡ– ಅಣ್ಣ ನಮಸ್ಕಾರ ಅಣ್ಣ ಚೆನ್ನಾಗಿದ್ದಿರಾ.? ನೆನಪಾಯ್ತಾ ಅಣ್ಣ ನಮ್ದು..?
  • ಡಿಕೆ ಶಿವಕುಮಾರ್-ಹೇಳಿ ಏನೇನ್ ಆಯ್ತು ಏನಿದೆ ಪರಿಸ್ಥಿತಿ?
  • ದೇವರಾಜೇಗೌಡ– ಅಣ್ಣ ನಾಳೆ ಹೈಕೋರ್ಟ್​​ ನಲ್ಲಿ ಸ್ಟೇ ಹಾಕೋ ಚಾನ್ಸಸ್ ಜಾಸ್ತಿ ಇದೆ. ಯಾಕಂದ್ರೆ ಕಂಪ್ಲೆಂಟರ್ಸ್ ಸರಿಯಾಗೆ ಕಂಪ್ಲೆಂಟ್ ಕೊಟ್ಟಿಲ್ಲ. ಮತ್ತೆ ಆ ಸೆಕ್ಷನ್​ಗೆ ಸಿಕ್ಸ್ ಮಂತ್ ಡಿಲೇ ಆಯ್ತು ಅಂದ್ರೆ ತುಂಬಾ ವ್ಯಾಲ್ಯುಬಲ್ ರೀಸನ್ ಕೊಡಬೇಕು. ಈಕೆ ನೋಡಿದ್ರೆ ನೈನ್ ಈಯರ್ಸ್ ವ್ಯತ್ಯಾಸ ಹೇಳಿದ್ದಾಳೆ. ಬಟ್ ಇದೊಂದು ಅವರಿಗೆ ಬಚಾವಾಗೋಕೆ ಒಳ್ಳೆ ಅವಕಾಶ ಅಣ್ಣ. ಇನ್ನೊಂದು ಎಸ್ ಐ ಟಿ ಯವರು ಡೈರೆಕ್ಟ್ ಆಗಿ ಕರೆದುಕೊಂಡು ಹೋಗಿ ಸಾಹೇಬರ ಮುಂದೆ ರೇಪು ಅಂತ ಕಂಟೆಂಟ್ ಕೊಟ್ರೆ ಇದು ಸೀರಿಯಸ್ ಅಫೆನ್ಸ್ ಆಗುತ್ತೆ ಅಣ್ಣ.
  • ಡಿಕೆ ಶಿವಕುಮಾರ್: ಆಯ್ತು ಕರೆಕ್ಟ್ ನೀ ಹೇಳೋದು ಕರೆಕ್ಟ್ ಬಿಡು.
  • ದೇವರಾಜೇಗೌಡ– ಅದನ್ನ ಮಾಡಿಲ್ಲ, ಅದನ್ನ ಸಾಹೇಬರ ಮುಂದೆ ಮರು ಹೇಳಿಕೆ ಅಂತ ಕೊಡಬೇಕು. 164 ಸ್ಟೇಟ್ಮೆಂಟ್ ಕೊಟ್ಟ ಸಾಹೇಬರ ಹತ್ತಿರಾನೆ ಕೊಡಬೇಕು ಅಣ್ಣ, ಅದು ಕಾನ್ಫಿಡೆನ್ಶಿಯಲ್ ಆಗಿ ಮಾಡಿಸ್ತಾರೆ ಅಣ್ಣ. ಅವರು ಚೂರು ಬಿಗಿಯಾಗಿಲ್ಲ ಅಣ್ಣ.
  • ಡಿಕೆ ಶಿವಕುಮಾರ್– ಹೇ ಅಯ್ಯೋ ಬಿಡಪ್ಪ, ನಮ್ಮತ್ರ ಇರೋರು ಅವರಾಗೆ ಕರೆದುಕೊಂಡು ಬಂದು ಹೇಳಿಸಿದಾರೆ ಅಲ್ಲ
  • ದೇವರಾಜೇಗೌಡ- ಹು ಅಣ್ಣ
  • ಡಿಕೆ ಶಿವಕುಮಾರ್– ಆಯ್ತು ನಾವು ಅಟೆಂಡ್ ಮಾಡ್ತೀವಿ ಬೇರೆ ಎವಿಡೆನ್ಸ್ ಏನಾದ್ರೂ ಇದ್ರೆ
  • ದೇವರಾಜೇಗೌಡ- ಇಲ್ಲ ಅಣ್ಣ
  • ಡಿಕೆಶಿ- ಓಕೆ

ಆಡಿಯೋ: 2 ಶಿವರಾಮೇಗೌಡ-ದೇವರಾಜೇಗೌಡ ಸಂಭಾಷಣೆ

  • ಎಲ್ ಆರ್ ಶಿವರಾಮೇಗೌಡ – ನೀವು ಡಿಕೆ ಅವರ‌ ಜೊತೆ‌ ಕೈಜೋಡಿಸಿದ್ರೆ ಹೆಲ್ಪ್ ಮಾಡ್ತಾರೆ.. ನಿಮಗೆ ಯಾವ ತರಾ ಬೇಕೋ ಹಾಗೇ ನೋಡ್ಕೋತಾರೆ.. ನಾನು ಯಡಿಯೂರಪ್ಪರಿಗೆ ಒಂದು ಮಾತು ಹೇಳಿದ್ದೆ.. ನಾನು ಬಿಜೆಪಿಯಲ್ಲಿದ್ದೆ.. ಬಿಜೆಪಿ ಯಲ್ಲಿ ಮಾಜಿ ಸಂಸದ. ನರೇಂದ್ರ ಮೋದಿ ಅವರಿಗೆ ಒತ್ತಾಯ ಮಾಡ್ತೀನಿ.. ಇವರನ್ನ ಮೊದಲು ಎನ್ ಡಿ ಎಯಿಂದ ಹೊರಗೆ ಹಾಕುವಂತೆ ಒತ್ತಾಯ ಮಾಡ್ತೀನಿ.. ಇದಾದ ಮೇಲೆ ‌ಬಿಜೆಪಿಯನ್ನ ಹಳೆ ಮೈಸೂರಲ್ಲಿ ಇನ್ಮುಂದೆ ಕಟ್ಟೋದು ಕನಸು. ಇವ್ರು ಇನ್ಯಾವ ಕಾರಣಕ್ಕೂ ಕಟ್ಟೋಕಾಗಲ್ಲ.. ಮರೆತುಬಿಡಿ
  • ದೇವರಾಜೇಗೌಡ – ಯಾರು ಯಡಿಯೂರಪ್ಪರಿಗೆ ಮೆಸೇಜ್?
  • ಎಲ್ ಆರ್ ಶಿವರಾಮೇಗೌಡ – ನಾನು ಹೇಳ್ದೆ.. ಯಡಿಯೂರಪ್ಪ ಮಗ ಬಂದ ಮೇಲೆ ವಿಜಯೇಂದ್ರ ಬಂದಮೇಲೆ ಏನೋ ಕಟ್ತಾನೆ ಅಂತಿದ್ದೆ‌ ಈ ಚುನಾವಣೆಯೇ ಮಾರಾಟ ಆಗೋಯ್ತು ಅಂತೆ.
  • L.R ಶಿವರಾಮೇಗೌಡ:-ಕುಮಾರಸ್ವಾಮಿಯೇ ಬಿಟ್ಟಿರಬೇಕು ಅಂತ ಹೇಳಿ, ಕುಮಾರಸ್ವಾಮಿಗೆ ಮಗ ಮುಂದಕ್ಕೆ ಬರಬೇಕು ಅಂತ ಆಸೆ ಇದೆ. ಪ್ರಜ್ವಲ್ ಮುಂದಕ್ಕೆ ಬಂದ ಬಿಟ್ಟಾನೂ ಅಂತ ಅದಕ್ಕೋಸ್ಕರ ಮಾಡಿದ್ದಾನೆ ಅಂತ ಹೇಳಿ, ದೇವೇಗೌಡ, ದೇವೇಗೌಡ ಮಕ್ಕಳು. ಓಹೋ ಏನ್ ಕಡಿಮೆ ಅಂತ ತಿಳ್ಕೋಬೇಡ ಇನ್ನು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವಲ್ಲ ದೇವೇಗೌಡ, ಕೇಳಣ್ಣ, ಕೇಳಣ್ಣ ಇಲ್ಲಿ, ಇನ್ನೇನು ವಿಡಿಯೋಗಳಿದೆ. ಡಿಕೆ ಮಾತಾಡಿದ್ರು ಬೆಳಗ್ಗೆ ಇನ್ನೂ ಏನೇನು ಇದೆ ನಮಗೆ ಕೊಡಿ ನೀವು ಏನೂ ತಲೆನೇ ಕೆಡಿಸಿಕೊಳ್ಳಬೇಡಿ, ಅವರನ್ನ ಬಲಿ ಹಾಕೋಕೆ ಸರ್ಕಾರ ತೀರ್ಮಾನ ಮಾಡಿದೆ. ಅರ್ಥ ಆಯ್ತಾ? ನೀನೇನು ಪೆನ್​ಡ್ರೈವ್ ಹಾಸನದಲ್ಲಿ ಹಂಚಿಲ್ಲ, ನಿನ್ನದೇನು ತಪ್ಪಿಲ್ಲ, ಹಂಚಿದ್ರೆ ತಪ್ಪೇನಿದೆ ಹೇಳಿ? ನೋಡಿದ್ದೇವೆ ನಾವೂ, ನೀವೂ ಲಾಯರ್ ಅಲ್ಲಾ, ಅದೇನೂ ಆಗಲ್ಲ.
  • ದೇವರಾಜೇಗೌಡ:-ಅಣ್ಣ ಕಾನೂನೂ ಪ್ರಕಾರ ಶಿಕ್ಷೆ ಅಲ್ವಾ ಅಣ್ಣ ಹೆಣ್ಮಕ್ಕಳ ಮಾನ-ಮರ್ಯಾದೆ ಅಣ್ಣ ಅವರ ಶೀಲದ ಬಗ್ಗೆ ನಾವು ಯೋಚನೆ ಮಾಡಬೇಕಲ್ಲಾ?
  • L.R ಶಿವರಾಮೇಗೌಡ:– ಅದರ ಬಗ್ಗೆ ನೀವು ಯಾಕೆ ಯೋಚನೆ ಮಾಡ್ತೀರಿ, ಅಮಿತ್ ಶಾ ಚೆನ್ನಾಗಿಯೇ ಹೇಳಿದ್ದಾನಲ್ಲ, ಹೆಣ್ಮಕ್ಕಳಿಗೆ ಸುರಕ್ಷಿತ ತಾಣವಲ್ಲ ಕರ್ನಾಟಕ ಅಂತ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:49 pm, Sun, 19 May 24

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ