‘ಅಲ್ಲಿ ಎಲ್ಲರೂ ಮೃಗಗಳೇ ಯಾರಿಗೂ ಸಾವಿನ ಬಗ್ಗೆ ಭಯವಿಲ್ಲ, ಆದರೆ..’: ಜೂ ಎನ್​ಟಿಆರ್ ಹೊಸ ಸಿನಿಮಾ ಕತೆ

Jr NTR: ಜೂ ಎನ್​ಟಿಆರ್ ನಟನೆಯ 'ದೇವರ' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಸಿನಿಮಾದ ಒನ್​ಲೈನ್ ಕತೆ ಇದೀಗ ಹೊರಬಿದ್ದಿದೆ.

'ಅಲ್ಲಿ ಎಲ್ಲರೂ ಮೃಗಗಳೇ ಯಾರಿಗೂ ಸಾವಿನ ಬಗ್ಗೆ ಭಯವಿಲ್ಲ, ಆದರೆ..': ಜೂ ಎನ್​ಟಿಆರ್ ಹೊಸ ಸಿನಿಮಾ ಕತೆ
ದೇವರ ಸಿನಿಮಾ
Follow us
ಮಂಜುನಾಥ ಸಿ.
|

Updated on: Jul 30, 2023 | 8:04 PM

ಆರ್​ಆರ್​ಆರ್‘ (RRR) ಸಿನಿಮಾದ ಮೂಲಕ ಗ್ಲೋಬಲ್ ಹಿಟ್ ನೀಡಿರುವ ಜೂ ಎನ್​ಟಿಆರ್ (Jr NTR) ಮೇಲೆ ಈಗ ನಿರೀಕ್ಷೆಗಳು ದುಪ್ಪಟ್ಟಾಗಿದೆ. ‘ಆರ್​ಆರ್​ಆರ್’ ಗ್ಲೋಬಲ್ ಹಿಟ್ ಆಗುವ ಮುನ್ನವೇ ಜೂ ಎನ್​ಟಿಆರ್, ಕೊರಟಾಲ ಶಿವ ಜೊತೆಗಿನ ‘ದೇವರ’ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಆದರೆ ‘ಆರ್​ಆರ್​ಆರ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಕೊರಟಾಲ ಶಿವ (Koratala Shiva) ತಮ್ಮ ಸಿನಿಮಾದ ಚಿತ್ರಕತೆಯನ್ನು ತಿದ್ದಿದ ಜೊತೆಗೆ ಸಿನಿಮಾವನ್ನು ದೊಡ್ಡ ಸ್ಕೇಲ್​ನಲ್ಲಿ ನಿರ್ಮಿಸಲು ಮುಂದಾಗಿದ್ದಾರೆ.

‘ದೇವರ’ ಸಿನಿಮಾದ ಕತೆಯ ಎಳೆಯೊಂದು ಇದೀಗ ಬಹಿರಂಗಗೊಂಡಿದೆ. ‘ದೇವರ’ ಚಿತ್ರತಂಡವು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಪ್ರೋಮೋ ವಿಡಿಯೋದ ಹಿನ್ನೆಲೆಯಲ್ಲಿರುವ ಧ್ವನಿಯೊಂದು ‘ದೇವರ’ ಸಿನಿಮಾದ ಕತೆಯ ಎಳೆಯನ್ನು ಹೇಳಿದೆ. ”ಕತೆಯಲ್ಲಿ ಮನುಷ್ಯರಿಗಿಂತಲೂ ಹೆಚ್ಚು ಮೃಗಗಳೇ ಇರುತ್ತಾರೆ. ಸಾವೆಂದರೆ ಭಯ ಇರದ, ದೇವರೆಂದರೆ ಭಯ ಇರದ ಮೃಗಗಳು ಅವರು. ಆದರೆ ಅವರಿಗೆಲ್ಲ ಒಬ್ಬರೆಂದರೆ ಭಯ. ಅದು ಯಾರೆಂದು ವಿವರಿಸಿ ಹೇಳಬೇಕಿಲ್ಲ. ಭಯ ಇರಬೇಕು, ಭಯ ಅವಶ್ಯಕ, ಭಯ ಪಡಿಸಲು ಈ ಸಿನಿಮಾದಲ್ಲಿ ಆತ ಯಾವ ರೇಂಜಿಗೆ ಬೇಕಾದರು ಹೋಗುತ್ತಾನೆ. ಇದು ಬಹಳ ಎಮೋಷನಲ್ ಪಯಣ” ಎಂದಿದೆ.

‘ದೇವರ’ ಸಿನಿಮಾ ಪಕ್ಕಾ ಆಕ್ಷನ್ ಭರಿತ ಹೊಡಿ-ಬಡಿ ಕತೆಯನ್ನು ಒಳಗೊಂಡಿರುವುದು ಇದಾಗಲೇ ಖಾತ್ರಿಯಾಗಿದೆ. ಸಮುದ್ರ ತಟದಲ್ಲಿ ನಡೆವ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಮುದ್ರದ ಮೇಲೆ ಅಧಿಕಾರಕ್ಕಾಗಿ ಪರಸ್ಪರ ಕಾದಾಟದಲ್ಲಿರುವ ಮೃಗಗಳ ಮಧ್ಯೆ ಜೂ ಎನ್​ಟಿಆರ್ ಪಾತ್ರ ಸೆಣೆಸಲಿದೆ ಎನ್ನಲಾಗುತ್ತಿದೆ. ಅಲ್ಲದೆ ಸಿನಿಮಾದಲ್ಲಿ ಜೂ ಎನ್​ಟಿಆರ್ ಎರಡು ಷೇಡ್​ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಇದನ್ನೂ ಓದಿ:‘ಕೆಜಿಎಫ್ 2’ ನೋಡಿ ಕಲಿತುಕೊಳ್ಳಲು ಸ್ಟಾರ್​ ಡೈರೆಕ್ಟರ್​ಗೆ ಸೂಚನೆ ನೀಡಿದ ಜ್ಯೂ. ಎನ್​ಟಿಆರ್​?

‘ದೇವರ’ ಸಿನಿಮಾದಲ್ಲಿ ಜೂ ಎನ್​ಟಿಆರ್ ಜೊತೆಗೆ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಇದು ಜಾನ್ಹವಿಯ ಮೊದಲ ದಕ್ಷಿಣ ಭಾರತದ ಸಿನಿಮಾ. ಜಾನ್ಹವಿ ಜೊತೆಗೆ ಮತ್ತೊಬ್ಬ ನಟಿಯೂ ಈ ಸಿನಿಮಾದಲ್ಲಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಸಿನಿಮಾದ ಮುಖ್ಯ ವಿಲನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಸಿನಿಮಾದ ಪ್ರಮುಖ ವಿಭಾಗಗಳಿಗೆ ನುರಿತ ತಂತ್ರಜ್ಞರನ್ನು ನೇಮಿಸಿಕೊಳ್ಳಲಾಗಿದೆ. ಸಿನಿಮಾದ ಸಾಹಸ ನಿರ್ದೇಶನಕ್ಕೆ ಹಾಲಿವುಡ್​ನ ಜನಪ್ರಿಯ ಸಾಹಸ ನಿರ್ದೇಶಕರನ್ನು ಕರೆತರಲಾಗಿದೆ.

ಜೂ ಎನ್​ಟಿಆರ್, ‘ದೇವರ’ ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಕೊರಟಾಲ ಶಿವ ಸಹ, ಜೂ ಎನ್​ಟಿಆರ್ ಒತ್ತಾಯದ ಮೇರೆಗೆ ಸಿನಿಮಾದ ಚಿತ್ರಕತೆಯನ್ನು ಹಲವು ಬಾರಿ ತಿದ್ದಿರುವುದಲ್ಲದೆ ಭಾರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ. ಸಿನಿಮಾಕ್ಕಾಗಿ ಎರಡು ಹಾಲಿವುಡ್​ ರೇಂಜ್​ನ ಫೈಟ್ ಸೀಕ್ವೆನ್ಸ್​ಗಳನ್ನು ಸೃಷ್ಟಿಸಿದ್ದಾರಂತೆ. ಒಂದು ಫೈಟ್ ದೊಡ್ಡ ಹಡಗಿನಲ್ಲಿ ನಡೆದರೆ ಮತ್ತೊಂದು ಫೈಟ್ ಸಮುದ್ರದ ದಡದಲ್ಲಿ ನಡೆಯುತ್ತದೆ. ಎರಡಕ್ಕೂ ಹಾಲಿವುಡ್​ನ ಅನುಭವಿ ಫೈಟ್ ಕಂಪೋಸರ್​ ಅನ್ನು ಕರೆತರಲಾಗಿದೆ. ‘ದೇವರ’ ಸಿನಿಮಾ 2024 ರ ಏಪ್ರಿಲ್ 05ಕ್ಕೆ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು