Jr NTR: ಜಪಾನ್ ವಿದೇಶಾಂಗ ಮಂತ್ರಿಗೆ ಜೂ ಎನ್ಟಿಆರ್ ಅಚ್ಚುಮೆಚ್ಚು
Jr NTR-Ram Charan: ಎರಡು ದಿನಗಳ ಭಾರತದ ಭೇಟಿಗೆ ಬಂದಿರುವ ಜಪಾನಿನ ವಿದೇಶಾಂಗ ಸಚಿವನಿಗೆ ಆರ್ಆರ್ಆರ್ ಸಿನಿಮಾ ಅಚ್ಚುಮೆಚ್ಚು.
ಆರ್ಆರ್ಆರ್ (RRR) ಸಿನಿಮಾ ವಿಶ್ವದ ಹಲವು ರಾಷ್ಟ್ರಗಳಲ್ಲಿ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಸಿನಿಮಾದ ಇಬ್ಬರು ನಾಯಕರಾದ ಜೂ ಎನ್ಟಿಆರ್ (Jr NTR) ಹಾಗೂ ರಾಮ್ ಚರಣ್ (Ram Charan) ಈಗ ಪ್ಯಾನ್ ಇಂಡಿಯಾ ಸ್ಟಾರ್ಗಳು ಮಾತ್ರವಲ್ಲ ಪ್ಯಾನ್ ವರ್ಲ್ಡ್ ಸ್ಟಾರ್ಗಳಾಗಿದ್ದಾರೆ. ಜೂ ಎನ್ಟಿಆರ್ ಹಾಗೂ ರಾಮ್ ಚರಣ್ ನಟನೆಯನ್ನು ಹಾಲಿವುಡ್ ಸೇರಿದಂತೆ ವಿಶ್ವದ ಹಲವ ದೇಶಗಳ ಸಿನಿಮಾ ಪಂಡಿತರು, ವಿಶ್ಲೇಷಕರು ಮೆಚ್ಚಿಕೊಂಡಿದ್ದರು. ಜಪಾನ್ನಲ್ಲಂತೂ ಆರ್ಆರ್ಆರ್ ಸಿನಿಮಾ ಭಾರಿ ವೈರಲ್ ಆಗಿದ್ದು, ಅಲ್ಲಿನ ಸರ್ಕಾರದ ಉನ್ನತ ಮಂತ್ರಿಗಳಿಗೂ ಸಹ ಆರ್ಆರ್ಆರ್ ಮೋಡಿ ಮಾಡಿದೆ.
ಇದೀಗ ಜಪಾನ್ನ ವಿದೇಶಾಂಗ ಸಚಿವ ಯೋಷಿಮಾಸ ಹಯಾಷಿ ಎರಡು ದಿನಗಳ ಭಾರತದ ಭೇಟಿಗೆ ಬಂದಿದ್ದು, ಭಾರತದ ವಿದೇಶಾಂಗ ಸಚಿವ ಜಯಶಂಖರ್ ಜೊತೆಗೆ ಸಂವಾದವೊಂದರಲ್ಲಿ ಭಾಗಿಯಾಗಿದ್ದರು. ಆ ಸಮಯದಲ್ಲಿ ಆರ್ಆರ್ಆರ್ ಸಿನಿಮಾದ ಬಗ್ಗೆ ಸಚಿವ ಯೋಷಿಮಾಸ ಹಯಾಷಿ ಪ್ರಸ್ತಾಪಿಸಿದ್ದಾರೆ. ”ಆರ್ಆರ್ಆರ್’ ಸಿನಿಮಾ ಅದ್ಭುತವಾಗಿದೆ. ಅದು ನನ್ನ ಮೆಚ್ಚಿನ ಸಿನಿಮಾ. ಅದರಲ್ಲಿ ಹಲವು ನಟರಿದ್ದಾರೆ. ಆದರೆ ನನಗೆ ಬಹಳ ಇಷ್ಟವಾಗಿದ್ದು ರಾಮ್ ಜೂನಿಯರ್ ಎಂದಿದ್ದಾರೆ ಸಚಿವ ಯೋಷಿಮಾಸ ಹಯಾಷಿ.
ಇದನ್ನೂ ಓದಿ:ಅಮೆರಿಕದಲ್ಲಿ ಪರಸ್ಪರ ಹೊಡೆದಾಡಿಕೊಂಡ ಜೂ ಎನ್ಟಿಆರ್ ಹಾಗೂ ನಾರಾ ಲೋಕೇಶ್ ಅಭಿಮಾನಿಗಳು
ಯೋಷಿಮಾಸ ಹಯಾಷಿ, ಜೂ ಎನ್ಟಿಆರ್, ತಾರಕ ರಾಮ್ ಜೂನಿಯರ್ ಇಷ್ಟ ಎಂದು ಹೇಳಿದ್ದಾರೆ. ಆದರೆ ರಾಮ್ ಚರಣ್ ಅಭಿಮಾನಿಗಳು, ಯೋಷಿಮಾಸ ಹಯಾಷಿ, ರಾಮ್ ಚರಣ್ ಹಾಗೂ ಜೂ ಎನ್ಟಿಆರ್ ಇಬ್ಬರ ಹೆಸರೂ ಹೇಳಿದ್ದಾರೆ ಎಂದು ವಾದಿಸುತ್ತಿದ್ದಾರೆ. ಏನಾದರಾಗಲಿ ಜಪಾನಿನಲ್ಲಿ ಆರ್ಆರ್ಆರ್ ಹವಾ ಎಬ್ಬಿಸಿದೆ. ಅದರಲ್ಲಿಯೂ ನಾಟು-ನಾಟು ಹಾಡಂತೂ ಜಪಾನಿನಲ್ಲಿ ಇನ್ನಿಲ್ಲದಂತೆ ವೈರಲ್ ಆಗಿದೆ. ಭಾರತದ ಜಪಾನಿನ ರಾಯಭಾರಿ ಕಚೇರಿಯವರು ಸಹ ಆರ್ಆರ್ಆರ್ ಸಿನಿಮಾದ ನಾಟು-ನಾಟು ಹಾಡಿಗೆ ಡ್ಯಾನ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
ಸಚಿವ ಯೋಷಿಮಾಸ ಹಯಾಷಿ, ಆರ್ಆರ್ಆರ್ ಸಿನಿಮಾ ಬಗ್ಗೆ ಮಾತ್ರವೇ ಅಲ್ಲದೆ ಭಾರತದ ಬಿರಿಯಾನಿಯನ್ನೂ ಹೊಗಳಿದ್ದಾರೆ. ಬಿರಿಯಾನಿ ಈಗ ಜಪಾನಿನ ರಾಷ್ಟ್ರೀಯ ಊಟವಾಗಿದೆ. ನನಗಂತೂ ಬಿರಿಯಾನಿ ಎಂದರೆ ಬಹಳ ಇಷ್ಟ ಎಂದು ಕೊಂಡಾಡಿದ್ದಾರೆ.
ಜಪಾನಿನಲ್ಲಿ ‘ಆರ್ಆರ್ಆರ್’ ಸಿನಿಮಾ ಗಳಿಕೆಯಲ್ಲಿ ದಾಖಲೆ ಬರೆದಿದೆ. ರಾಮ್ ಚರಣ್ ಹಾಗೂ ಇತರರು ಜಪಾನ್ಗೆ ತೆರಳಿ ತಮ್ಮ ಸಿನಿಮಾದ ಪ್ರಚಾರ ಮಾಡಿದ್ದರು. ಅದಕ್ಕೆ ತಕ್ಕಂತೆ ಜಪಾನ್ನಲ್ಲಿ ಆರ್ಆರ್ಆರ್ ಸಿನಿಮಾ ಸೂಪರ್ ಹಿಟ್ ಆಯಿತು. ಆರ್ಆರ್ಆರ್ ಮಾತ್ರವೇ ಅಲ್ಲದೆ ‘ಕೆಜಿಎಫ್ 2’ ಸಿನಿಮಾ ಸಹ ಸೂಪರ್ ಹಿಟ್ ಆಗಿದೆ. ಒಳ್ಳೆಯ ಮೊತ್ತವನ್ನು ಜಪಾನ್ ದೇಶದಲ್ಲಿ ‘ಕೆಜಿಎಫ್ 2’ ಗಳಿಕೆ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ