AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಚರಣ್-ಉಪಾಸನಾ ಪುತ್ರಿ ಕ್ಲಿನ್ ಕಾರಾಳ ಕೋಣೆ ಹೀಗಿದೆ

Klin Kaara: ರಾಮ್ ಚರಣ್ ಹಾಗೂ ಉಪಾಸನಾ ಪುತ್ರಿ ಕ್ಲಿಕ್ ಕಾರಾಗಾಗಿ ವಿಶೇಷ ವಿನ್ಯಾಸದ ಕೋಣೆಯನ್ನು ಸಿದ್ಧಪಡಿಸಲಾಗಿದೆ.

ರಾಮ್ ಚರಣ್-ಉಪಾಸನಾ ಪುತ್ರಿ ಕ್ಲಿನ್ ಕಾರಾಳ ಕೋಣೆ ಹೀಗಿದೆ
ರಾಮ್-ಉಪಾಸನಾ
ಮಂಜುನಾಥ ಸಿ.
|

Updated on: Jul 14, 2023 | 4:46 PM

Share

ರಾಮ್ ಚರಣ್ (Ram Charan) ಹಾಗೂ ಉಪಾಸನಾ ಕೋನಿಡೇಲಾ (Upasana Konidela) ಇತ್ತೀಚೆಗಷ್ಟೆ ಪೋಷಕರಾಗಿದ್ದಾರೆ. ಈ ಜೋಡಿಗೆ ಸುಂದರವಾದ ಹೆಣ್ಣು ಮಗು ಕಳೆದ ತಿಂಗಳ ಅಂತ್ಯದಲ್ಲಿ ಜನಿಸಿದ್ದು, ಮಗುವಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟಿದ್ದಾರೆ. ಈ ಮಗುವನ್ನು ಮೆಗಾ ಫ್ರಿಸೆನ್ಸೆಸ್ ಎಂದು ಅಭಮಾನಿಗಳು ಕರೆಯುತ್ತಿದ್ದು, ಥೇಟ್ ಯುವರಾಣಿಯ ಐಶೋ ಆರಾಮಗಳು ಒಂದು ತಿಂಗಳು ಸಹ ಆಗಿರದ ಕ್ಲಿನ್ ಕಾರಾಗೆ (Klin Kaara) ಧಕ್ಕುತ್ತಿವೆ.

ಕ್ಲಿಕ್ ಕಾರಾ, ಮುಖೇಶ್ ಅಂಬಾನಿ ಉಡುಗೊರೆ ನೀಡಿರುವ ಚಿನ್ನದ ತೊಟ್ಟಿಲಿನಲ್ಲಿ ಮಲಗಲಿದ್ದಾಳೆ ಎಂದು ಈ ಮೊದಲು ಸುದ್ದಿಯಾಗಿತ್ತು, ಬಳಿಕ ಅದು ಸುಳ್ಳಾಯಿತು. ಉಪಾಸನಾ ಬೆಂಬಲಿಸುವ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ಸಂಸ್ಥೆಯೊಂದರ ಮಹಿಳೆಯರು ಕೈಯಿಂದ ಮಾಡಿದ ತೊಟ್ಟಿಲನ್ನು ಉಪಾಸನಾಗೆ ಉಡುಗೊರೆಯಾಗಿ ನೀಡಿದ್ದು ಆ ನಂತರ ಸುದ್ದಿಯಾಯ್ತು.

ಉಪಾಸನಾ ಹಾಗೂ ರಾಮ್ ಚರಣ್ ತಮ್ಮ ಮಗಳಿಗಾಗಿ ವಿಶೇಷವಾಗಿ ಕೋಣೆಯನ್ನು ಡಿಸೈನ್ ಮಾಡಿಸಿದ್ದಾರೆ. ಮಗು ಜನಿಸುವ ಮುನ್ನವೇ ವಿಶೇಷ ಕೋಣೆಯನ್ನು ಉಪಾಸನಾ ಡಿಸೈನ್ ಮಾಡಿಸಿ ಆಗಿತ್ತು. ಮಗುವಿಗಾಗಿ ಮಾಡಿಸಿರುವ ಕೋಣೆಯನ್ನು ಡಿಸೈನ್ ಮಾಡಿರುವುದು ಆರ್ಕ್​ಡೈಜೆಸ್ಟ್ ಇಂಡಿಯಾ ಹೆಸರಿನ ಸಂಸ್ಥೆ. ಈ ಸಂಸ್ಥೆಯ ಸಿಬ್ಬಂದಿ, ಮೊದಲು ಉಪಾಸನಾ ಹಾಗೂ ರಾಮ್ ಅವರೊಟ್ಟಿಗೆ ಮಾತನಾಡಿ, ಅವರ ಇಷ್ಟಗಳನ್ನು ತಿಳಿದುಕೊಂಡು ಬಳಿಕ ಮಗುವಿನ ಬೆಳವಣಿಗೆಗೆ, ಮನೋವಿಕಾಸಕ್ಕೆ ಪೂರಕವಾದ ಅಂಶಗಳನ್ನು ಸೇರಿಸಿ ಭಿನ್ನ ರೀತಿಯಲ್ಲಿ ಕೋಣೆಯನ್ನು ಡಿಸೈನ್ ಮಾಡಿದ್ದಾರೆ.

ಇದನ್ನೂ ಓದಿ:ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟ ರಾಮ್ ಚರಣ್-ಉಪಾಸನಾ: ಹೆಸರಿನ ಅರ್ಥವೇನು?

ಕ್ಲಿನ್ ಕಾರಾಳ ನರ್ಸರಿ ಕೋಣೆ ಬಿಳಿ ಹಾಗೂ ತೆಳು ಪಿಂಕ್ ಬಣ್ಣಗಳಿಂದ ತುಂಬಿದೆ. ಕೋಣೆಯ ತುಂಬೆಲ್ಲ ಅರಣ್ಯ, ಪ್ರಕೃತಿ, ವನ್ಯಜೀವಿಗಳ ಭಿನ್ನ ರೀತಿಯ ಚಿತ್ರಗಳಿವೆ. ಉಪಾಸನಾ ಹಾಗೂ ರಾಮ್ ಚರಣ್ ಇಬ್ಬರಿಗೂ ಅರಣ್ಯವೆಂದರೆ ಬಹಳ ಪ್ರೀತಿಯಾದ್ದರಿಂದ ಅದೇ ಥೀಮ್ ಇರಿಸಿ ಮಗಳ ಕೋಣೆಯನ್ನು ಡಿಸೈನ್ ಮಾಡಿಸಿದ್ದಾರೆ. ಆನೆ, ಹುಲಿ, ಕೋತಿ, ಜನಪಾತ, ಮಳೆ, ಮರ, ಗಿಡಗಳ ಭಿನ್ನ ರೀತಿಯ ಚಿತ್ರಗಳು ಇಡೀ ಕೋಣೆಯ ತುಂಬೆಲ್ಲ ಇವೆ. ಜೊತೆಗೆ ದೊಡ್ಡವರು ಕುಳಿತುಕೊಳ್ಳಲು ಸೋಫಾಗಳು ಸಹ ಇವೆ.

”ನಾನು ಹಾಗೂ ರಾಮ್ ಚರಣ್ ಹೋದ ಕಡೆಗಳಲ್ಲಿ ಸಂಗ್ರಹಿಸಿದ ವಸ್ತುಗಳನ್ನು ಇಲ್ಲಿ ಸೇರಿಸಿದ್ದೇವೆ. ಇಲ್ಲಿರುವ ಎಲ್ಲ ವಸ್ತಗಳಲ್ಲಿ ನಾವು, ನಮ್ಮ ನೆನಪು ಇದೆ. ಹಾಗಾಗಿಯೇ ಈ ಸ್ಥಳ ಬಹಳ ವಿಶೇಷವಾಗಿದೆ. ಮಗು ಮೊದಲು ನೋಡುವ ವಸ್ತುಗಳು, ವ್ಯಕ್ತಿಗಳು, ದೃಶ್ಯಗಳು ಬಹಳ ಮುಖ್ಯ ಹಾಗಾಗಿ ಪ್ರಕೃತಿಯನ್ನೇ ಮೂಲವಾಗಿರಿಸಿ ಕೋಣೆಯನ್ನು ವಿನ್ಯಾಸ ಮಾಡಲಾಗಿದೆ” ಎಂದಿದ್ದಾರೆ ಉಪಾಸನಾ ಕೋನಿಡೆಲಾ.

ರಾಮ್ ಚರಣ್ ಹಾಗೂ ಉಪಾಸನಾ ಮದುವೆಯಾಗಿ 11 ವರ್ಷಗಳ ಬಳಿಕ ಪೋಷಕರಾಗಿದ್ದಾರೆ. ಕಳೆದ ತಿಂಗಳು ಅವರಿಗೆ ಹೆಣ್ಣು ಮಗು ಜನಿಸಿದ್ದು, ಮಗುವಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟಿದ್ದಾರೆ. ಈ ಹೆಸರು ಲಲಿತಾ ಸಹಸ್ರನಾಮದಿಂದ ಪ್ರೇರಿತವಾದ ಹೆಸರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ