ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟ ರಾಮ್ ಚರಣ್-ಉಪಾಸನಾ: ಹೆಸರಿನ ಅರ್ಥವೇನು?

Ram Charan-Upasana: ತಮ್ಮ ಮುದ್ದಾದ ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟಿದ್ದಾರೆ ರಾಮ್ ಚರಣ್-ಉಪಾಸನಾ. ಕ್ಲಿನ್ ಕಾರಾ ಹೆಸರಿನ ಅರ್ಥವೇನು?

ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟ ರಾಮ್ ಚರಣ್-ಉಪಾಸನಾ: ಹೆಸರಿನ ಅರ್ಥವೇನು?
ಕ್ಲಿನ್ ಕಾರಾ
Follow us
|

Updated on:Jun 30, 2023 | 4:51 PM

ರಾಮ್ ಚರಣ್ ತೇಜ (Ram Charan Teja) ಹಾಗೂ ಉಪಾಸನಾ ಕೋನಿಡೆಲಾ (Upasana Konidela) ಇತ್ತೀಚೆಗೆ ಪೋಷಕರಾಗಿದ್ದಾರೆ. ಜೂನ್ 20ರ ಮುಂಜಾವು ಉಪಾಸನಾ, ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ ಹನ್ನೊಂದನೇ ದಿನವಾದ ಇಂದು (ಜೂನ್ 30) ಮಗುವಿನ ತೊಟ್ಟಿಲ ಶಾಸ್ತ್ರ ಹಾಗೂ ನಾಮಕರಣ ಶಾಸ್ತ್ರವನ್ನು ರಾಮ್ ಚರಣ್ ಹಾಗೂ ಉಪಾಸನಾ ಹಾಗೂ ಎರಡೂ ಕಡೆಯ ಕುಟುಂಬದವರು ಸೇರಿ ಮುಗಿಸಿದ್ದಾರೆ. ರಾಮ್ಉಪಾಸನಾ ತಮ್ಮ ಮುದ್ದಾದ ಹೆಣ್ಣು ಮಗುವಿಗೆ ಆದಿವಾಸಿ ದೇವತೆ ಚೆಂಚುದೇವಿ ಹಾಗು ಬೋರಮ್ಮ ದೇವಿಯವರ ಆಶೀರ್ವಾದದೊಂದಿಗೆ ಕ್ಲಿನ್ ಕಾರಾ ಕೋನಿಡೇಲಾ ಎಂದು ಹೆಸರಿಟ್ಟಿದ್ದಾರೆ.

ಕ್ಲಿನ್ ಕಾರಾ ಎಂಬುದು ವಿದೇಶಿ ಹೆಸರಿನಂತೆ ಕೇಳುತ್ತದೆಯಾದರೂ ಹೆಸರಿನ ಹಿಂದೆ ಒಂದು ವಿಶೇಷತೆ ಇದೆ. ಸ್ವತಃ ಉಪಾಸನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವಂತೆ, ಕ್ಲಿನ್ ಕಾರಾ ಎಂಬ ಹೆಸರನ್ನು ಲಲಿತಾ ಸಹಸ್ರನಾಮದಿಂದ ತೆಗೆದುಕೊಂಡಿದ್ದಾರಂತೆ. ಕ್ಲಿನ್ ಕಾರಾ ಹೆಸರು ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ ಹಾಗೂ ಶುದ್ಧೀಕರಿಸುವ ಶಕ್ತಿಯನ್ನು ಸೂಚಿಸುತ್ತದೆ ಎಂದು ವಿವರಣೆ ನೀಡಿದ್ದಾರೆ ಉಪಾಸನಾ. ಜೊತೆಗೆ ಮಗುವಿನ ಅಜ್ಜ-ಅಜ್ಜಿಯರಿಗೆ ಧನ್ಯವಾದವನ್ನು, ಪ್ರೀತಿಯನ್ನು ಅರ್ಪಿಸಿದ್ದಾರೆ.

ಉಪಾಸನಾ ಕೋನಿಡೆಲಾ, ಅಧ್ಯಾತ್ಮಕದ ಬಗ್ಗೆ, ಪಾಸಿಟಿವಿಟಿ ಬಗ್ಗೆ ಆಸಕ್ತಿವುಳ್ಳವರಾಗಿದ್ದಾರೆ. ಆಗಾಗ್ಗೆ ಅಧ್ಯಾತ್ಮದ ವಿಷಯಗಳನ್ನು, ಪಾಸಿಟಿವಿಟಿ ಬಗ್ಗೆ, ದೇಹಾರೋಗ್ಯ, ಮಾನಸಿಕ ಆರೋಗ್ಯದ ಬಗ್ಗೆ ಪೋಸ್ಟ್​ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ರಾಮ್ ಚರಣ್ ಸಹ ಅಧ್ಯಾತ್ಮದಲ್ಲಿ ಪಾಸಿಟಿವ್ ಎನರ್ಜಿಯಲ್ಲಿ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದರು ಇಬ್ಬರೂ ಸೇರಿ ತಮ್ಮ ಆಲೋಚನೆಗಳಿಗೆ ಹೊಂದುವ ಹೆಸರನ್ನೇ ಮಗಳಿಗೆ ಇರಿಸಿದ್ದಾರೆ. ‘ಕ್ಲೀಂಕಾರೀ’ ಹೆಸರು ಲಲಿತಾ ಸಹಸ್ರನಾಮದ 125 ನೇ ಪಾದದಲ್ಲಿ ಬರುತ್ತೆ, ಅದರಿಂದಲೇ ಸ್ಪೂರ್ತಿ ಪಡೆದು ಕ್ಲಿನ್ ಕಾರಾ ಎಂದು ಮಗಳಿಗೆ ಹೆಸರಿಟ್ಟಿದ್ದಾರೆ ರಾಮ್-ಉಪಾಸನಾ.

ಉಪಾಸನಾರ ಇನ್​ಸ್ಟಾಗ್ರಾಂಗೆ ಪ್ರತಿಕ್ರಿಯಿಸಿರುವ ಹಲವರು ಶುಭಾಷಯಗಳನ್ನು ಕೋರಿದ್ದಾರೆ. ಇನ್ನು ಕೆಲವರು ಇದೆಂಥಹಾ ಹೆಸರು ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಮಂತ್ರಗಳ ರೀತಿಯಲ್ಲಿಯೇ ತುಸು ಕ್ಲಿಷ್ಟವಾಗಿದೆ ಎಂದಿದ್ದಾರೆ. ಇನ್ನು ಕೆಲವರು ಸುಮ್ಮನೆ ನೇರವಾಗಿ ಲಲಿತಾ ಎಂದೇ ಇಟ್ಟು ಬಿಡಬಹುದಾಗಿತ್ತಲ್ಲ ಎಂದು ಸಲಹೆ ಕೊಟ್ಟಿದ್ದಾರೆ.

ರಾಮ್ ಚರಣ್ ಹಾಗೂ ಉಪಾಸನಾ ಮದುವೆಯಾಗಿ 11 ವರ್ಷದ ಬಳಿಕ ಜನಿಸಿದ ಮಗು ಇದಾಗಿದೆ. ಮೆಗಾಸ್ಟಾರ್ ಕುಟುಂಬ ಹಾಗೂ ಉಪಾಸನಾರ ಕಮ್ಮಿನೇನಿ ಕುಟುಂಬವು ರಾಮ್-ಉಪಾಸನಾ ಮೇಲೆ ಬಹಳ ಒತ್ತಡ ಹೇರುತ್ತಲೇ ಬಂದಿದ್ದರು. ಆದರೆ ಇಬ್ಬರೂ ಮೊದಲೇ ನಿಶ್ಚಯಿಸಿ ಮಗುವನ್ನು ಹೊಂದದಿರಲು ನಿರ್ಧರಿಸಿದ್ದರು. ಆದರೆ 11 ವರ್ಷದ ಬಳಿಕ ಮನಸ್ಸು ಬದಲಿಸಿ ಪೋಷಕರಾಗಿದ್ದಾರೆ.

ಮಗು ಜನಿಸಿದ ದಿನ ಮಾತನಾಡಿದ್ದ ರಾಮ್ ಚರಣ್ ತಂದೆ ಮೆಗಾಸ್ಟಾರ್ ಚಿರಂಜೀವಿ, ”ಮಗು ಬಹಳ ಒಳ್ಳೆಯ ಸಮಯದಲ್ಲಿ ಜನಿಸಿದೆ ಎನ್ನುತ್ತಿದ್ದಾರೆ ದೊಡ್ಡವರು. ಮಗು ಬಹಳ ಅದೃಷ್ಟ ತರಲಿದೆ. ಈಗಾಗಲೇ ರಾಮ್ ಚರಣ್ ವೃತ್ತಿಯಲ್ಲ ಬಹಳ ಔನ್ನತ್ಯ ಸಾಧಿಸಿದ್ದಾರೆ. ವರುಣ್ ತೇಜ್ ಮದುವೆ ನಿಶ್ಚಯವಾಗಿದೆ. ಇನ್ನೂ ಕೆಲವು ಒಳ್ಳೆಯ ಕಾರ್ಯಗಳು ಮನೆಯಲ್ಲಿ ಆಗುತ್ತಿವೆ. ಮಗುವಿನ ಆಗಮನದಿಂದ ಎಲ್ಲವೂ ಶುಭ ಆಗುತ್ತಿದೆ” ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Fri, 30 June 23

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ