ಮಗಳ ತೊಟ್ಟಿಲ ಶಾಸ್ತ್ರದ ಸಂಭ್ರಮದಲ್ಲಿ ರಾಮ್ ಚರಣ್-ಉಪಾಸನಾ

Ram Charan-Upasana: ರಾಮ್ ಚರಣ್ ಹಾಗೂ ಉಪಾಸನಾ ಕಮ್ಮಿನೇನಿ ಕೋನಿಡೆಲಾರ ಮಗಳಿಗೆ ಇಂದು ತೊಟ್ಟಿಲ ಶಾಸ್ತ್ರ.

ಮಗಳ ತೊಟ್ಟಿಲ ಶಾಸ್ತ್ರದ ಸಂಭ್ರಮದಲ್ಲಿ ರಾಮ್ ಚರಣ್-ಉಪಾಸನಾ
ರಾಮ್ ಚರಣ್-ಉಪಾಸನಾ
Follow us
ಮಂಜುನಾಥ ಸಿ.
|

Updated on: Jun 30, 2023 | 3:23 PM

ರಾಮ್ ಚರಣ್ (Ram Charan) ಹಾಗೂ ಉಪಾಸನಾ (Upasana) 11 ವರ್ಷದ ಬಳಿಕ ಪೋಷಕರಾಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಉಪಾಸನಾ ಕಮ್ಮಿನೇನಿ ಕೋನಿಡೆಲಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಭಿಮಾನಿಗಳು ಮೆಗಾ ಪ್ರಿನ್ಸೆಸ್ ಎಂದು ಮಗುವನ್ನು ಕರೆಯುತ್ತಿದ್ದಾರೆ. ಮಗುವಿನೊಟ್ಟಿಗೆ ಕೆಲವು ದಿನಗಳ ಹಿಂದಷ್ಟೆ ಆಸ್ಪತ್ರೆಯಿಂದ ಮನೆಗೆ ತೆರಳಿದ ರಾಮ್ ಚರಣ್ ಹಾಗೂ ಉಪಾಸನಾ ಇದೀಗ ಸಂಭ್ರಮದಿಂದ ಮಗುವಿನ ತೊಟ್ಟಿಲ ಶಾಸ್ತ್ರ ಮಾಡುತ್ತಿದ್ದಾರೆ.

ಇಂದು (ಜೂನ್ 30) ರಾಮ್ ಚರಣ್ ನಿವಾಸದಲ್ಲಿ ಶಾಸ್ತ್ರೋಪ್ತವಾಗಿ ತೊಟ್ಟಿಲ ಶಾಸ್ತ್ರ ನೆರವೇರಿಸಿದ್ದಾರೆ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ. ಈ ಸಂಭ್ರಮದಲ್ಲಿ ಮೆಗಾಸ್ಟಾರ್ ಕುಟುಂಬದವರು ಹಾಗೂ ಉಪಾಸನಾ ಅವರ ಕಮ್ಮಿನೇನಿ ಕುಟುಂಬದವರು ಭಾಗಿಯಾಗಿದ್ದಾರೆ. ಇಂದೇ ನಾಮಕರಣವೂ ನಡೆಯಲಿದೆ ಎಂಬ ಮಾತುಗಳಿವೆಯಾದರೂ ಅದು ಖಾತ್ರಿ ಆಗಿಲ್ಲ.

ಹೈದರಾಬಾದ್​ನ ಮನೆಯಲ್ಲಿಯೇ ತೊಟ್ಟಿಲ ಶಾಸ್ತ್ರ ನಡೆಯುತ್ತಿದ್ದು ಕಾರ್ಯಕ್ರಮದ ತಯಾರಿಯ ವಿಡಿಯೋವನ್ನು ಉಪಾಸನಾ ಕೋನಿಡೇಲ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಚಿರಂಜೀವಿ ಮನೆಯ ಮಧ್ಯದಲ್ಲಿರುವ ಮರಕ್ಕೆ ವಿಶೇಷ ಅಲಂಕಾರ ಮಾಡಲಾಗಿದ್ದು ಅದರ ಮುಂದೆಯೇ ತೊಟ್ಟಿಲು ತೂಗು ಹಾಕಲು ಕಂಬಗಳನ್ನು ನೆಟ್ಟು ಹೂವುಗಳಿಂದ ಅಲಂಕರಿಸಲಾಗಿದೆ. ಅತಿಥಿಗಳಿಗಾಗಿ ವಿಶೇಷ ಕುರ್ಚಿಗಳು ಹಾಗೂ ಭೋಜನ ವ್ಯವಸ್ಥೆಯನ್ನು ಮಾಡಿರುವ ದೃಶ್ಯಗಳು ಉಪಾಸನಾ ಹಂಚಿಕೊಂಡಿರುವ ವಿಡಿಯೋದಲ್ಲಿದೆ.

ಇದನ್ನೂ ಓದಿ:Ram Charan Rich Wife: ಚಿರಂಜೀವಿ ಪುತ್ರ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಆಸ್ತಿ ಸಾವಿರ ಕೋಟಿಗೂ ಹೆಚ್ಚು; ಹೇಗೆ ಬಂತು ಇಷ್ಟು ಆಸ್ತಿ?

ಆಸ್ಪತ್ರೆಯಿಂದ ಮನೆಗೆ ಮಗುವನ್ನು ಕೊಂಡೊಯ್ಯುವಾಗ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ರಾಮ್ ಚರಣ್, ”ನಾನು ಹಾಗೂ ಉಪಾಸನಾ ಈಗಾಗಲೇ ಮಗುವಿಗೆ ಕೆಲವು ಹೆಸರುಗಳನ್ನು ಯೋಚಿಸಿದ್ದೇವೆ. ಹುಟ್ಟಿದ 13ನೇ ದಿನ ಅಥವಾ 15ನೇ ದಿನಕ್ಕೆ ನಾಮಕರಣ ಶಾಸ್ತ್ರ ಮಾಡುತ್ತಾರಂತೆ, ನನಗೆ ಆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಆದರೆ ಹೆಸರು ಇಟ್ಟ ಕೂಡಲೇ ನಾನೇ ಖುದ್ದಾಗಿ ಎಲ್ಲರಿಗೂ ವಿಷಯ ತಿಳಿಸುತ್ತೇನೆ” ಎಂದಿದ್ದರು. ರಾಮ್ ಚರಣ್ ಅಂದು ಹೇಳಿದ್ದಂತೆ ಮಗುವಿನ ಜನನವಾಗಿ ಇನ್ನೂ 13 ದಿನ ಆಗಿಲ್ಲ.

ರಾಮ್ ಚರಣ್ ಹಾಗೂ ಉಪಾಸನಾಗೆ ಜೂನ್ 20 ರಂದು ಮುಂಜಾವಿಗೆ ಮುನ್ನ 1:40ಕ್ಕೆ ಮಗು ಜನಿಸಿದೆ. ರಾಮ್ ಚರಣ್ ಹಾಗೂ ಉಪಾಸನಾ ಮದುವೆಯಾಗಿ 11 ವರ್ಷದ ಬಳಿಕ ಜನಿಸಿದ ಮಗು ಇದಾಗಿದ್ದು, ಮೆಗಾಸ್ಟಾರ್ ಕುಟುಂಬದ ಹಲವರು ಅಂದು ಆಸ್ಪತ್ರೆಗೆ ಭೇಟಿ ನೀಡಿ ಮಗುವನ್ನು ಕಂಡು ಶುಭಾಷಯಗಳನ್ನು ಕೋರಿದ್ದರು. ನಟ ಚಿರಂಜೀವಿ ಸಹ ಪೋಷಕರಾಗಿ, ರಾಮ್ ಹಾಗೂ ಉಪಾಸನಾ ಪೋಷಕರಾಗಬೇಕು ಎಂಬುದು ನಮ್ಮ ಬಹುವರ್ಷಗಳ ಆಸೆಯಾಗಿತ್ತು ಎಂದಿದ್ದರು. ಅಲ್ಲದೆ, ”ಮಗು ಬಹಳ ಒಳ್ಳೆಯ ಸಮಯದಲ್ಲಿ ಜನಿಸಿದೆ ಎನ್ನುತ್ತಿದ್ದಾರೆ ದೊಡ್ಡವರು. ಮಗು ಬಹಳ ಅದೃಷ್ಟ ತರಲಿದೆ. ಈಗಾಗಲೇ ರಾಮ್ ಚರಣ್ ವೃತ್ತಿಯಲ್ಲ ಬಹಳ ಔನ್ನತ್ಯ ಸಾಧಿಸಿದ್ದಾರೆ. ವರುಣ್ ತೇಜ್ ಮದುವೆ ನಿಶ್ಚಯವಾಗಿದೆ. ಇನ್ನೂ ಕೆಲವು ಒಳ್ಳೆಯ ಕಾರ್ಯಗಳು ಮನೆಯಲ್ಲಿ ಆಗುತ್ತಿವೆ. ಮಗುವಿನ ಆಗಮನದಿಂದ ಎಲ್ಲವೂ ಶುಭ ಆಗುತ್ತಿದೆ” ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ