Ram Charan’s Rich Wife: ಚಿರಂಜೀವಿ ಪುತ್ರ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಆಸ್ತಿ ಸಾವಿರ ಕೋಟಿಗೂ ಹೆಚ್ಚು; ಹೇಗೆ ಬಂತು ಇಷ್ಟು ಆಸ್ತಿ?

Upasana Kamineni Net Worth Rs 1,370 Cr: ಟಾಲಿವುಡ್ ಸೂಪರ್​ಸ್ಟಾರ್ ಚಿರಂಜೀವಿ ಮಗ ರಾಮಚರಣ್ ಅವರ ಪತ್ನಿ ಉಪಾಸನಾ ಕಾಮಿನೇನಿ ಒಟ್ಟು ಆಸ್ತಿ ಸದ್ಯ 1,370 ಕೋಟಿ ರೂ. ಇವರು ಇಷ್ಟೊಂದು ಆಸ್ತಿ ಹೇಗೆ ಸಂಪಾದಿಸಿದರು? ಇವರ ಹಿನ್ನೆಲೆ ಏನು?

Ram Charan's Rich Wife: ಚಿರಂಜೀವಿ ಪುತ್ರ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಆಸ್ತಿ ಸಾವಿರ ಕೋಟಿಗೂ ಹೆಚ್ಚು; ಹೇಗೆ ಬಂತು ಇಷ್ಟು ಆಸ್ತಿ?
ಉಪಾಸನಾ ರಾಮ ಚರಣ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 22, 2023 | 1:30 PM

ಹೈದರಾಬಾದ್: ತೆಲುಗು ಸಿನಿಮಾ ನೋಡುವವರಿಗೆ ರಾಮ್ ಚರಣ್ ಹೆಸರು ಚಿರಪರಿಚಿತ. ಅಪ್ಪ ಚಿರಂಜೀವಿ ಅವರಂತೆ ಸೂಪರ್ ಸ್ಟಾರ್ ಆಗುವ ಹಾದಿಯಲ್ಲಿ ರಾಮ್ ಚರಣ್ (Ram Charan) ಇದ್ದಾರೆ. ಆರ್​ಆರ್​ಆರ್ ಸಿನಿಮಾ ಮೂಲಕ ಜೂನಿಯರ್ ಎನ್​ಟಿಆರ್ ಜೊತೆ ರಾಮಚರಣ್ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅತಿಹೆಚ್ಚು ಸಂಭಾವಣೆ ಪಡೆಯುವ ನಟರಲ್ಲಿ ಅವರೂ ಒಬ್ಬರು. ಚಲನಚಿತ್ರಗಳ ಮೂಲಕವೇ ಸಾವಿರಕ್ಕೂ ಹೆಚ್ಚು ಕೋಟಿ ರೂಗಳ ಸಂಪಾದನೆ ಮಾಡಿದ್ದಾರೆ ರಾಮಚರಣ್. ಈಗ ಅವರ ಪತ್ನಿ ಕೂಡ ಆಸ್ತಿಸಂಪಾದನೆಯಲ್ಲಿ ರಾಮಚರಣ್​ಗೆ ಸರಿಸಮಾನವಾಗಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ (Upasana Kamineni) ಹೊಂದಿರುವ ಆಸ್ತಿಮೌಲ್ಯ 1,370 ಕೋಟಿ ರೂ. ಈ ಜೋಡಿಗಳ ಆಸ್ತಿ ಸೇರಿಸಿದರೆ 2,500 ಕೋಟಿಗೂ ಹೆಚ್ಚಾಗುತ್ತದೆ.

ರಾಮಚರಣ್ ಪತ್ನಿ ಉಪಾಸನಾ ಕಾಮಿನೇನಿ ಯಾರು?

ಉಪಾಸನಾ ಕಾಮಿನೇನಿ ಉದ್ಯಮ ಕುಟುಂಬದ ಹಿನ್ನೆಲೆಯವರು ಎಂಬುದು ಇಲ್ಲಿ ಗಮನಾರ್ಹ. ಇವರ ತಾತ ಪ್ರತಾಪ್ ಸಿ ರೆಡ್ಡಿ. ಇವರ ಸಾಧನೆ ಬಗ್ಗೆ ಟಿವಿ9 ಕನ್ನಡ ಜಾಲತಾಣದಲ್ಲಿ ಹಿಂದೊಮ್ಮೆ ವರದಿ ಪ್ರಕಟಿಸಿದ್ದೆವು. ಇವರು ಅಪೋಲೋ ಆಸ್ಪತ್ರೆ ಸಮೂಹದ ಸಂಸ್ಥಾಪಕರು. ಪ್ರತಾಪ್ ರೆಡ್ಡಿಯ ಮಗಳ ಮಗಳು ಉಪಾಸನಾ ಕಾಮಿನೇನಿ. ಅಪೋಲೋ ಆಸ್ಪತ್ರೆಯ ಎಕ್ಸಿಕ್ಯೂಟಿವ್ ವೈಸ್ ಛೇರ್ಮನ್ ಆಗಿರುವ ಶೋಭನಾ ಈಕೆಯ ತಾಯಿ. ಉಪಾಸನಾ ಕೂಡ ಅಪೋಲೋ ಆಸ್ಪತ್ರೆಯ ಉಪಾಧ್ಯಕ್ಷೆಯಾಗಿದ್ದಾರೆ. ಅಷ್ಟೇ ಅಲ್ಲ ಹಲವು ಕಂಪನಿಗಳಲ್ಲಿ ಅವರು ಪ್ರಮುಖ ಜವಾಬ್ದಾರಿ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿInspiration: ವಯಸ್ಸು 90 ವರ್ಷ… ಕೋಟಿ ಕೋಟಿಯ ಕುಬೇರನಾದರೂ ನಿತ್ಯ ಕಚೇರಿಗೆ ಹೋಗಿ ಕೆಲಸ; ಮೊಮ್ಮಕ್ಕಳಿಗೆ ಅಧಿಕಾರ ಬಿಟ್ಟುಕೊಡುವವರೆಗೂ ಸುಮ್ಮನಿರದು ಈ ಹಿರಿಜೀವ

ಪ್ರತಾಪ್ ಸಿ ರೆಡ್ಡಿ ಅವರು ದೇಶದ ಟಾಪ್ 100 ಶ್ರೀಮಂತರಲ್ಲಿ ಒಬ್ಬರು. ಅವರ ಅಪೋಲೋ ಆಸ್ಪತ್ರೆ ಭಾರತದ ಮೊದಲ ಹಾಸ್ಟಿಟಲ್ ಚೈನ್ ಎನಿಸಿದೆ. ಅದರ ಒಟ್ಟು ಆಸ್ತಿ ಮೌಲ್ಯ 21,000 ಕೋಟಿ ರೂ ಇದೆ. ಉಪಾಸನಾ ಅವರು ಅಪೋಲೋ ಆಸ್ಪತ್ರೆಗೆ ಉಪಾಧ್ಯಕ್ಷೆ ಮಾತ್ರವಲ್ಲದೇ, ಬಿ ಪಾಸಿಟಿವ್ ಎಂಬ ಹೆಲ್ತ್ ಮ್ಯಾಗಝಿನ್​ನ ಎಡಿಟರ್ಇನ್ಚೀಫ್ ಆಗಿದ್ದಾರೆ. ಹಾಗೆಯೇ, ಅವರು ಟಿಪಿಎ ಎಂಬ ಫ್ಯಾಮಿಲಿ ಹೆಲ್ತ್ ಇನ್ಷೂರೆನ್ಸ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಕೂಡ ಆಗಿದ್ದಾರೆ.

ಇಷ್ಟು ಮಾತ್ರವಲ್ಲದೇ, ಉಪಾಸನಾ ಅವರ ತಂದೆ ಅನಿಲ್ ಕಾಮಿನೇನಿ ಸಂಸ್ಥಾಪಿಸಿದ ಕೆಇಐ ಗ್ರೂಪ್ ಎಂಬ ಕಂಪನಿಯಲ್ಲಿ ಉಪಾಸನಾ ಕೂಡ ಒಬ್ಬ ಬೋರ್ಡ್ ಸದಸ್ಯೆಯಾಗಿದ್ದಾರೆ.

ಇದನ್ನೂ ಓದಿApollo Hospital Bengaluru: ಅಪೊಲೊ ಆಸ್ಪತ್ರೆಯಲ್ಲಿ ವಿಶಿಷ್ಟ ಶ್ವಾಸಕೋಶದ ಕಸಿ ಯಶಸ್ಸು

11 ವರ್ಷದ ದಾಂಪತ್ಯದಲ್ಲಿ ಉಪಾಸನಾ ರಾಮ ಚರಣ್

ಪ್ರಮುಖ ಉದ್ಯಮಿಗಳ ಕುಟುಂಬದಲ್ಲಿ ಜನಿಸಿದ ಉಪಾಸನಾ ಅವರು ಮೊದಮೊದಲು ಫ್ಯಾಷನ್ ಡಿಸೈನರ್ ಆಗಬೇಕೆಂದು ಆಸೆ ಪಟ್ಟಿದ್ದರು. ಆದರೆ, ತಮ್ಮ ಕುಟುಂಬದ ಉದ್ಯಮದಲ್ಲಿ ತೊಡಗಿಸಿಕೊಂಡಾಗ ಮನಸು ಬದಲಾಯಿಸಿಕೊಂಡು ಬ್ಯುಸಿನೆಸ್ ಓದಿದರು. ಇಂಟರ್ನ್ಯಾಷನಲ್ ಬ್ಯುಸಿನೆಸ್ ಮಾರ್ಕೆಟಿಂಗ್ ಅಂಡ್ ಮ್ಯಾನೇಜ್ಮೆಂಟ್​ನಲ್ಲಿ ಪದವರಿ ಪಡೆದರು. ಹೀಗಾಗಿ, ತಮ್ಮ ಕುಟುಂಬದ ವಿವಿಧ ಉದ್ಯಮಗಳಲ್ಲಿ ಅವರು ಸಮರ್ಥವಾಗಿ ತೊಡಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2012 ಜೂನ್ 14ರಂದು ರಾಮಚರಣ್ ಅವರನ್ನು ವಿವಾಹವಾದ ಉಪಾಸನಾಗೆ ಒಬ್ಬ ಹೆಣ್ಮಗಳಿದ್ದಾಳೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:26 pm, Thu, 22 June 23

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ