Lip Lock: 18 ವರ್ಷದಿಂದ ‘ನೋ ಲಿಪ್ ಲಾಕ್’ ಎನ್ನುತ್ತಿದ್ದ ತಮನ್ನಾ; ಇನ್ನೂ ಯಾರೆಲ್ಲ ಇದ್ದಾರೆ ಈ ರೀತಿ?
Tamanna Bhatia: ತಮನ್ನಾ ಭಾಟಿಯಾ ಅವರು ವಿಜಯ್ ವರ್ಮಾ ಜೊತೆಗಿನ ಲಿಪ್ ಲಾಕ್ ಕಾರಣಕ್ಕೆ ಸಖತ್ ಸುದ್ದಿ ಆಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆ ನಟಿಯರ ಬಗ್ಗೆಯೂ ಚರ್ಚೆ ಆಗುತ್ತಿದೆ.
ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳು ಸಹಜ. ಅಂಥ ಸೀನ್ಗಳ ಮೂಲಕವೇ ಫೇಮಸ್ ಆದ ನಟಿಯರು ಹಲವರಿದ್ದಾರೆ. ಮಲ್ಲಿಕಾ ಶೆರಾವತ್, ತನುಶ್ರೀ ದತ್ತ ಮುಂತಾದ ನಟಿಯರು ಬೋಲ್ಡ್ ಆಗಿ ನಟಿಸಿ ಸೈ ಎನಿಸಿಕೊಂಡರು. ಆದರೆ ಎಲ್ಲ ಹೀರೋಯಿನ್ಗಳು ಈ ಸಾಲಿಗೆ ಸೇರುವವರಲ್ಲ. ಸಹ-ನಟರಿಗೆ ಕಿಸ್ (Kiss) ಮಾಡಬೇಕು ಎಂದಾಗ ಕೆಲವು ನಟಿಯರು ‘ನೋ’ ಎನ್ನುತ್ತಾರೆ. ಪಾತ್ರ ಹೇಗಿದ್ದರೂ, ಕಥೆಗೆ ಎಷ್ಟೇ ಅವಶ್ಯಕ ಎನಿಸಿದರೂ ಕೂಡ ಲಿಪ್ ಲಾಕ್ (Lip Lock) ಮಾಡಲು ಈ ಸುಂದರಿಯರು ಒಪ್ಪಿಕೊಳ್ಳುವುದೇ ಇಲ್ಲ. ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಇಂಥ ನಿಯಮ ಹಾಕಿಕೊಂಡಿದ್ದರು. ಆದರೆ ಅವರು ಇತ್ತೀಚಿನ ದಿನಗಳಲ್ಲಿ ಈ ನಿಯಮ ಮುರಿದುಕೊಂಡರು. ಆ ಹಿನ್ನೆಲೆಯಲ್ಲಿ ‘ನೋ ಕಿಸ್’ ಪಾಲಿಸಿ ಅನುಸರಿಸುತ್ತಿರುವ ಕೆಲವು ನಟಿಯರ ಬಗ್ಗೆ ಚರ್ಚೆ ಶುರುವಾಗಿದೆ.
ತಮನ್ನಾ ಭಾಟಿಯಾ:
ನಟಿ ತಮನ್ನಾ ಭಾಟಿಯಾ ಅವರು ಕಳೆದ 18 ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈವರೆಗೂ ಅವರು ಯಾವುದೇ ಹೀರೋ ಜೊತೆ ಲಿಪ್ ಲಾಕ್ ಮಾಡಿರಲಿಲ್ಲ. ಆದರೆ ‘ಲಸ್ಟ್ ಸ್ಟೋರೀಸ್ 2’ ಚಿತ್ರದಲ್ಲಿ ಅವರು ನಟ ವಿಜಯ್ ವರ್ಮಾ ಜೊತೆ ಕಿಸ್ ಮಾಡುವ ಮೂಲಕ ಸಖತ್ ಸುದ್ದಿ ಆಗಿದ್ದಾರೆ. ಈ ವಿಚಾರವನ್ನೇ ಇಟ್ಟುಕೊಂಡು ಪ್ರಚಾರ ಮಾಡಿದ್ದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದೆ. ನಿಜಜೀವನದಲ್ಲಿ ವಿಜಯ್ ವರ್ಮಾ ಮತ್ತು ತಮನ್ನಾ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ. ತಮನ್ನಾ ಅವರು ಇನ್ಮುಂದೆ ಬೇರೆ ನಟರ ಜೊತೆಗೆ ಲಿಪ್ ಲಾಕ್ ಮಾಡುತ್ತಾರಾ ಅಥವಾ ವಿಜಯ್ ವರ್ಮಾ ಅವರ ವಿಚಾರದಲ್ಲಿ ಮಾತ್ರ ಈ ನಿಯಮ ಸಡಿಲ ಮಾಡಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಇದನ್ನೂ ಓದಿ: ರವಿ ತೇಜ ಜೊತೆಗಿನ ಕಿಸ್ಸಿಂಗ್ ದೃಶ್ಯ ವೈರಲ್; ಮೊದಲ ಬಾರಿಗೆ ಮೌನ ಮುರಿದ ನಟಿ ಮೀನಾಕ್ಷಿ
ಸೋನಾಕ್ಷಿ ಸಿನ್ಹಾ:
ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಆದರೆ ಅವರು ಲಿಪ್ ಲಾಕ್ ಮಾಡಲು ಹಿಂದೇಟು ಹಾಕಿದ್ದಾರೆ. ಇಂಥ ದೃಶ್ಯಗಳಲ್ಲಿ ನಟಿಸಲು ತಮಗೆ ಮುಜುಗರ ಆಗುತ್ತದೆ ಎಂದು ಹೇಳಿಕೊಂಡ ಬಗ್ಗೆ ವರದಿ ಆಗಿತ್ತು. ಹಾಗಾಗಿ ಅವರು ಲಿಪ್ ಲಾಕ್ ದೃಶ್ಯದಲ್ಲಿ ನಟಿಸಲು ನಿರಾಕರಿಸುತ್ತ ಬಂದಿದ್ದಾರೆ.
ಇದನ್ನೂ ಓದಿ: ದೀಪಿಕಾ ಹುಟ್ಟುಹಬ್ಬದ ದಿನವೇ ಕಿಸ್ಸಿಂಗ್ ಫೋಟೋ ವೈರಲ್; ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್
ಶಿಲ್ಪಾ ಶೆಟ್ಟಿ:
ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಶಿಲ್ಪಾ ಶೆಟ್ಟಿ ಅವರು ಹಿಂದೇಟು ಹಾಕಿಲ್ಲ. ಆದರೆ ಲಿಪ್ ಲಾಕ್ ವಿಷಯ ಬಂದಾಗ ಅವರು ‘ನೋ’ ಎನ್ನುತ್ತಾರೆ. ಯಾವುದೇ ಸಿನಿಮಾಗೆ ಸಹಿ ಮಾಡುವಾಗಲೂ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ತಾವು ನಟಿಸುವ ದೃಶ್ಯಗಳಲ್ಲಿ ಲಿಪ್ ಲಾಕ್ ಇರಬಾರದು ಎಂದು ಅವರು ಮೊದಲೇ ತಾಕೀತು ಮಾಡುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: Shilpa Shetty: ಕಿಸ್ಸಿಂಗ್ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಗೆ ರಿಲೀಫ್ ನೀಡಿದ ಕೋರ್ಟ್
ಜನ್ನತ್ ಝುಬೈರ್:
ಹಿಂದಿ ಕಿರುತೆರೆಯಲ್ಲಿ ಫೇಮಸ್ ಆಗಿರುವವರು ನಟಿ ಜನ್ನತ್ ಝುಬೈರ್. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 4.7 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಾರೆ. ಇವರು ಕೂಡ ಲಿಪ್ ಲಾಕ್ ವಿಚಾರದಲ್ಲಿ ಮಡಿವಂತಿಕೆ ಪಾಲಿಸುತ್ತಾರೆ. ಎಷ್ಟೇ ಬೇಡಿಕೆ ಇದ್ದರೂ ಕೂಡ ಇಂಥ ದೃಶ್ಯದಲ್ಲಿ ನಟಿಸುವುದಿಲ್ಲ ಎಂಬುದು ಜನ್ನತ್ ಝುಬೈರ್ ಅವರ ಪಾಲಿಸಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.