ರಾಮ್ ಚರಣ್ ತೊಟ್ಟಿರುವ ಕೈಗಡಿಯಾರದ ಬೆಲೆ ಎಷ್ಟು ಗೊತ್ತೆ?

Ram Charan: ನಟ ರಾಮ್ ಚರಣ್ ಧರಿಸಿರುವ ವಾಚ್​ನ ಬೆಲೆ ಎಷ್ಟು ಗೊತ್ತೆ? ಯಾವ ಬ್ರ್ಯಾಂಡ್​ನ ವಾಚ್ ಇದು?

ರಾಮ್ ಚರಣ್ ತೊಟ್ಟಿರುವ ಕೈಗಡಿಯಾರದ ಬೆಲೆ ಎಷ್ಟು ಗೊತ್ತೆ?
ರಾಮ್ ಚರಣ್ ವಾಚು
Follow us
ಮಂಜುನಾಥ ಸಿ.
|

Updated on: Jun 25, 2023 | 7:52 PM

ರಾಮ್ ಚರಣ್ (Ram Charan) ಹುಟ್ಟುತ್ತಲೆ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿದವರು. ರಾಮ್ ಚರಣ್ ತೇಜ ಜನಿಸುವ ವೇಳೆಗೆಲ್ಲ ಅವರ ತಂದೆ ಚಿರಂಜೀವಿ (Chiranjeevi) ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಆಗಿದ್ದರು. ಇದೀಗ ರಾಮ್ ಚರಣ್, ತಂದೆಯನ್ನು ಮೀರಿಸುವಂತೆ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಆರ್​ಆರ್​ಆರ್ ಸಿನಿಮಾ ಮೂಲಕ ರಾಮ್ ಚರಣ್ ಖ್ಯಾತಿ ವಿಶ್ವದೆಲ್ಲೆಡೆ ಪಸರಿಸಿದೆ. ಸಿನಿಮಾ ಒಂದಕ್ಕೆ ಭಾರಿ ಸಂಭಾವನೆ ಪಡೆವ ರಾಮ್ ಚರಣ್, ಅದಕ್ಕೆ ತಕ್ಕಂತೆ ಐಶಾರಾಮಿ ಬದುಕು ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೆ ಹೆಣ್ಣು ಮಗುವಿನ ತಂದೆಯಾಗಿರುವ ರಾಮ್ ಚರಣ್, ಮಗುವಿನೊಟ್ಟಿಗೆ ಆಸ್ಪತ್ರೆಯಿಂದ ಮನೆಗೆ ತೆರಳುವಾಗ ಫೋಟೊಗಳಿಗೆ ಫೋಸು ನೀಡಿದರು. ಆ ವೇಳೆ ರಾಮ್ ಚರಣ್ ಕೈಗಡಿಯಾರ ಎಲ್ಲರ ಗಮನ ಸೆಳೆದಿದೆ. ಆ ಗಡಿಯಾರ ಯಾವುದು? ಬೆಲೆ ಎಷ್ಟು? ಮುಂದೆ ಓದಿ.

ರಾಮ್ ಚರಣ್, ಪತ್ನಿ ಉಪಾಸನಾ ಹಾಗೂ ನವಜಾತ ಹೆಣ್ಣುಮಗುವಿನೊಟ್ಟಿಗೆ ಆಸ್ಪತ್ರೆಯಿಂದ ಮನೆಗೆ ಹೋಗುವಾಗ ಸರಳವಾಗಿ ಬಿಳಿ ಶರ್ಟ್ ಹಾಗೂ ಸಾಧಾರಣದಂತೆ ಕಾಣುವ ಪ್ಯಾಂಟ್ ಹಾಗೂ ಗಾಗಲ್ಸ್ ಹಾಕಿಕೊಂಡರು ಜೊತೆಗೆ ರಬ್ಬರ್ ಬೆಲ್ಟ್ ಉಳ್ಳ ವಾಚ್ ಒಂದನ್ನು ಕಟ್ಟಿಕೊಂಡಿದ್ದರು. ಕಪ್ಪು ಪಟ್ಟಿಯ ಸಿಮೆಂಟ್ ಬಣ್ಣದ ಡಯಲ್ ಒಳಗೊಂಡಿದ್ದ ಆ ವಾಚ್ ನೋಡಲು ಬಹಳ ಸರಳವಾಗಿ ಕಾಣುತ್ತಿತ್ತಾದರೂ ಸರಳವಾದ ವಾಚ್ ಅದಲ್ಲ. ಭಾರಿ ದುಬಾರಿ ವಾಚ್ ಅದು.

ರಾಮ್ ಚರಣ್ ಅಂದು ಧರಿಸಿದ್ದು ರಿಚರ್ಡ್ ಮೈಲ್ ಬ್ರ್ಯಾಂಡ್​ನ ವಾಚ್ ಅನ್ನು. ಈ ಬ್ರ್ಯಾಂಡ್​ನ ವಾಚುಗಳ ಬೆಲೆ ತೀರಾ ಎನ್ನುವಷ್ಟು ದುಬಾರಿ. ಅದರಲ್ಲಿಯೂ ರಾಮ್ ಚರಣ್ ಧರಿಸಿರುವುದು ರಿಚರ್ಡ್ ಮೈಲ್​ನ ಆರ್​ಎಂ 29 ಸರಣಿಯ ವಾಚು. ಈ ವಾಚಿನ ಬೆಲೆ ಭಾರತದಲ್ಲಿ 1.65 ಕೋಟಿ ರೂಪಾಯಿಗಳಿವೆ. ವಾಚು ನೋಡಲು ಸರಳವಾಗಿದೆ. ವಾಚಿನ ಡಯಲ್ ಪಾರದರ್ಶಕವಾಗಿದ್ದು, ಕೈಗಡಿಯಾರದ ಮುಳ್ಳುಗಳನ್ನು ತಿರುಗಿಸುವ ಒಳಗಿನ ಮೆಕ್ಯಾನಿಸಮ್ ಹೊರಕ್ಕೆ ಕಾಣಿಸುವಂತೆ ಡಿಸೈನ್ ಮಾಡಲಾಗಿದೆ. ಮಣಿಕಟ್ಟಿಗೆ ಕಟ್ಟಲು ರಬ್ಬರ್ ಪಟ್ಟಿಗಳನ್ನು ನೀಡಲಾಗಿದ್ದು ವಿಶೇಷ ಫೀಚರ್​ಗಳಿಲ್ಲದ ಡಿಜಿಟಲ್ ಅಲ್ಲದ ಸಾಮಾನ್ಯ ಅನಾಲಾಗ್ ವಾಚ್ ಇದಾಗಿದೆ. ಆದರೆ ಇದರ ಬೆಲೆ ಮಾತ್ರ ಗಗನದಲ್ಲಿದೆ.

ಇದನ್ನೂ ಓದಿ:Ram Charan Rich Wife: ಚಿರಂಜೀವಿ ಪುತ್ರ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಆಸ್ತಿ ಸಾವಿರ ಕೋಟಿಗೂ ಹೆಚ್ಚು; ಹೇಗೆ ಬಂತು ಇಷ್ಟು ಆಸ್ತಿ?

ರಿಚರ್ಡ್ ಮೈಲ್ ಸಂಸ್ಥೆಯು ವಿಶ್ವದ ಅತ್ಯಂತ ದುಬಾರಿ ವಾಚುಗಳನ್ನು ತಯಾರಿಸುವ ಸಂಸ್ಥೆಗಳಲ್ಲಿ ಅಗ್ರ ಐದರ ಪಟ್ಟಿಯಲ್ಲಿ ಬರುತ್ತದೆ. ಈ ಸಂಸ್ಥೆಯ ಬಹುತೇಕ ಎಲ್ಲ ವಾಚ್ ಸರಣಿಗಳು ಬಹಳ ದುಬಾರಿಯೇ. ಅದರಲ್ಲಿಯೂ ರಿಚರ್ಡ್ ಮೈಲ್​ನ ಟೂರ್ ಬಿಲಿಯನ್ ಸರಣಿಯ ಒಂದು ವಾಚ್​ನ ಬೆಲೆ 6 ಕೋಟಿಗೂ ಹೆಚ್ಚು. ಈ ಬ್ರ್ಯಾಂಡ್​ನ ಅತ್ಯಂತ ಕಡಿಮೆ ಬೆಲೆಯ ವಾಚ್ ಕೊಳ್ಳಲು ಸಹ ಒಂದು ಕೋಟಿ ರೂಪಾಯಿ ಬೇಕಾಗುತ್ತದೆ.

ರಾಮ್ ಚರಣ್​ಗೆ ವಾಚ್​ ಕಲೆಕ್ಷನ್ ಖಯಾಲಿಯಿದೆ. ರಿಚರ್ಡ್ ಮೈಲ್ ಮಾತ್ರವೇ ಅಲ್ಲದೆ ಹಲವು ಅತ್ಯಂತ ದುಬಾರಿ ವಾಚ್​ಗಳನ್ನು ರಾಮ್ ಚರಣ್ ಧರಿಸುತ್ತಾರೆ. ರಾಮ್ ಚರಣ್ ಮಾತ್ರವೇ ಅಲ್ಲದೆ ಜೂ ಎನ್​ಟಿಆರ್ ಬಳಿಯೂ ಅತ್ಯಂತ ದುಬಾರಿ ಬೆಲೆಯ ರಿಚರ್ಡ್ ಮೈಲ್ ವಾಚು ಇದೆ. ನಟ ಚಿರಂಜೀವಿ, ರಾಣಾ ದಗ್ಗುಬಾಟಿ ಬಳಿ ಸಹ ದುಬಾರಿ ರಿಚರ್ಡ್ ಮೈಲ್ ವಾಚು ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ