AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪ್ಪನಾದ ಬಳಿಕ ಮೊದಲ ಬಾರಿ ಮಾಧ್ಯಮಗಳ ಮುಂದೆ ಬಂದ ರಾಮ್ ಚರಣ್: ಕೈ ಮುಗಿದಿದ್ದು ಯಾರಿಗೆ?

Ram Charan: ತಂದೆಯಾದ ಖುಷಿಯನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡ ನಟ ರಾಮ್ ಚರಣ್.

ಅಪ್ಪನಾದ ಬಳಿಕ ಮೊದಲ ಬಾರಿ ಮಾಧ್ಯಮಗಳ ಮುಂದೆ ಬಂದ ರಾಮ್ ಚರಣ್: ಕೈ ಮುಗಿದಿದ್ದು ಯಾರಿಗೆ?
ರಾಮ್ ಚರಣ್
Follow us
ಮಂಜುನಾಥ ಸಿ.
|

Updated on: Jun 23, 2023 | 5:09 PM

ತೆಲುಗಿನ ಸ್ಟಾರ್ ನಟ ರಾಮ್ ಚರಣ್ (Ram Charan) ಇತ್ತೀಚೆಗಷ್ಟೆ ಅಪ್ಪನಾಗಿದ್ದಾರೆ. ಅವರ ಪತ್ನಿ ಉಪಾಸನಾ ಕಮ್ಮಿನೇನಿ ಕೋನಿಡೆಲಾ (Upasana Konidela) ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜೂನ್ 20ರಂದು ಮಗು ಜನಿಸಿದ್ದು, ಇಂದು (ಜೂನ್ 23) ರಾಮ್ ಚರಣ್ ಹಾಗೂ ಉಪಾಸನಾ ತಮ್ಮ ಮುದ್ದಾದ ಮಗುವಿನೊಟ್ಟಿಗೆ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ರಾಮ್ ಚರಣ್ ಅಭಿಮಾನಿಗಳು ಹಾಗೂ ಸ್ನೇಹಿರತು, ಹಿತೈಷಿಗಳು ಇಂದು ಆಸ್ಪತ್ರೆ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರು, ಈ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ರಾಮ್ ಚರಣ್ ತೇಜ ಮಾತನಾಡಿದ್ದಾರೆ.

”ನನಗೆ ಸಂಪ್ರದಾಯಗಳ ಬಗ್ಗೆ ಹೆಚ್ಚು ಗೊತ್ತಿಲ್ಲ ಮಗುವಿಗೆ ಹೆಸರನ್ನು 12 ಅಥವಾ 13ನೇ ದಿನವು ಇಡುತ್ತಾರೆ. ಆ ದಿನ ನಾನೇ ಎಲ್ಲರಿಗೂ ನಾನೇ ಹೇಳುತ್ತೇನೆ. ಈಗಾಗಲೇ ನಾನು ಹಾಗೂ ಉಪಾಸನಾ ಹೆಸರುಗಳ ಬಗ್ಗೆ ಯೋಚನೆ ಮಾಡಿದ್ದೇವೆ. ಆದರೆ ಸಂಪ್ರದಾಯ ಬದ್ಧವಾಗಿ ಕಾರ್ಯಕ್ರಮ ನಡೆದಾಗ ಹೆಸರು ಇಡುತ್ತೇವೆ. ಅಂದು ನಾನೇ ಮೊದಲು ಮಾಧ್ಯಮಗಳಿಗೆ ತಿಳಿಸುತ್ತೇನೆ” ಎಂದಿದ್ದಾರೆ ರಾಮ್ ಚರಣ್.

ಮಗುವನ್ನು ಮೊದಲ ಬಾರಿಗೆ ಎತ್ತಿಕೊಂಡಾಗ ಆದ ಅನುಭವ ಹೇಗಿತ್ತು ಎಂಬ ಬಗ್ಗೆ ಮಾತನಾಡಿದ ರಾಮ್ ಚರಣ್, ”ಅದೊಂದು ವಿಶೇಷ ಅನುಭವ. ಎಲ್ಲ ತಂದೆಯರಿಗೂ ಆಗುವಂಥಹದ್ದೇ, ನಾನು ಅದನ್ನು ವಿವರಿಸಲು ಹೋದರೆ ಸಿನಿಮೀಯ ಎನಿಸುತ್ತದೆ, ಸ್ಕ್ರಿಪ್ಟ್ ರೀತಿ ಅನಿಸುತ್ತದೆ” ಎಂದರು. ”ಆದರೆ ಎಲ್ಲರೂ ಸಂತೋಷವಾಗಿದ್ದಾರೆ. ಬಹಳ ವರ್ಷಗಳಿಂದ ಅಂದುಕೊಂಡಿದ್ದೆವು. ಸರಿಯಾದ ಸಮಯದಲ್ಲಿ ಆ ದೇವರು ನಮಗೆ ಆಶೀರ್ವಾದ ಮಾಡಿದ್ದಾನೆ” ಎಂದಿದ್ದಾರೆ ರಾಮ್ ಚರಣ್.

ಇದನ್ನೂ ಓದಿ:Ram Charan Rich Wife: ಚಿರಂಜೀವಿ ಪುತ್ರ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಆಸ್ತಿ ಸಾವಿರ ಕೋಟಿಗೂ ಹೆಚ್ಚು; ಹೇಗೆ ಬಂತು ಇಷ್ಟು ಆಸ್ತಿ?

ಮಗುವಿಗೆ ಯಾರ ಹೋಲಿಕೆ ಇದೆ, ಅಮ್ಮನದ್ದಾ-ಅಪ್ಪನದ್ದಾ ಎಂದಿದ್ದಕ್ಕೆ ಖಂಡಿತ ನನ್ನದೇ ಹೋಲಿಕೆ ಎಂದು ನಕ್ಕಿದ್ದಾರೆ ರಾಮ್ ಚರಣ್. ಉಪಾಸನಾ ಹಾಗೂ ರಾಮ್ ಚರಣ್ 2012 ರಲ್ಲಿಯೇ ವಿವಾಹವಾಗಿದ್ದರು. ಆದರೆ ಇಬ್ಬರು ಸಹ ಪೋಷಕರಾಗುವ ನಿರ್ಧಾರ ಮಾಡಿರಲಿಲ್ಲ. ಹಿಂದೊಮ್ಮೆ ಉಪಾಸನಾ, ತಾವು ಉದ್ದೇಶಪೂರ್ವಕವಾಗಿಯೇ ಮಗು ಹೊಂದುತ್ತಿಲ್ಲ. ಇದು ನಮ್ಮಿಬ್ಬರ ನಿರ್ಣಯ ಎಂದು ಸಹ ಹೇಳಿದ್ದರು. ಆದರೆ ಮೆಗಾಸ್ಟಾರ್ ಕುಟುಂಬ ಹಾಗೂ ಉಪಾಸನಾರ ಕಮ್ಮಿನೇನಿ ಕುಟುಂಬ ಇಬ್ಬರ ಮೇಲೂ ಒತ್ತಡ ಹೇರುತ್ತಲೇ ಬಂದಿತ್ತು. ಇದೀಗ ಕೊನೆಗೂ ಮದುವೆಯಾದ 11 ವರ್ಷಗಳ ಬಳಿಕ ಪೋಷಕರಾಗಿದ್ದಾರೆ.

ಮಗು ಜನಿಸಿದ ದಿನ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ನಟ ಚಿರಂಜೀವಿ, ”ಹೆಣ್ಣು ಮಗು ಜನಿಸಿರುವುದು ಬಹಳ ಸಂತೋಷ ತಂದಿದೆ. ಮಗು ಬಹಳ ಒಳ್ಳೆಯ ಸಮಯದಲ್ಲಿ ಹುಟ್ಟಿದೆ ಎಂದು ದೊಡ್ಡವರು ಹೇಳುತ್ತಿದ್ದಾರೆ. ಮಗು ಸಹ ದೊಡ್ಡ ಅದೃಷ್ಟವನ್ನೇ ತಂದಿದೆ. ಮೊದಲಿನಿಂದಲೂ ಆ ಶುಭವನ್ನು ತೋರಿಸುತ್ತಲೇ ಬಂದಿದೆ. ರಾಮ್ ಚರಣ್ ವೃತ್ತಿಯಲ್ಲಿ ಆಗುತ್ತಿರುವ ಪ್ರಗತಿ ಆಗಿರಬಹುದು, ವರುಣ್ ತೇಜ್ ಲಾವಣ್ಯ ನಿಶ್ಚಿತಾರ್ಥ ಇರಬಹುದು ಒಟ್ಟಾರೆ ನಮ್ಮ ಮನೆಯಲ್ಲಿ ಒಂದರ ಮೇಲೊಂದು ಶುಭ ಸಮಾಚಾರಗಳು ನಡೆಯುತ್ತಲೇ ಇವೆ” ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಗರ್ಲ್​ಫ್ರೆಂಡ್​ ಜತೆ ಸುತ್ತುತ್ತಿದ್ದ ಮಗ, ಇಬ್ಬರಿಗೂ ಬಿತ್ತು ಏಟು
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ
ಕಳೆದು ಹೋದ ಮೊಬೈಲ್ ಕೊರಗಜ್ಜನ ಕೃಪೆಯಿಂದ ಸಿಕ್ತು: ನಟಿ ಇಳಾ ವಿಟ್ಲಾ