ರಾಮ್ ಚರಣ್-ಉಪಾಸನಾ ಪುತ್ರಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟಿದ್ದು ಯಾರು?

Ram Charan-Upasana: ರಾಮ್ ಚರಣ್ ಹಾಗೂ ಉಪಾಸನಾರ ಮಗಳಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟಿದ್ದು ಯಾರು?

ರಾಮ್ ಚರಣ್-ಉಪಾಸನಾ ಪುತ್ರಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟಿದ್ದು ಯಾರು?
ಉಪಾಸನಾ-ಶೋಭನಾ
Follow us
ಮಂಜುನಾಥ ಸಿ.
|

Updated on: Jul 01, 2023 | 8:13 PM

ನಟ ರಾಮ್ ಚರಣ್ (Ram Charan) ಹಾಗೂ ಉದ್ಯಮಿ ಉಪಾಸನಾ ಕಮ್ಮಿನೇನಿ ಕೋನಿಡೇಲಾ (Upasana Kammineni) ಇತ್ತೀಚೆಗಷ್ಟೆ ಪೋಷಕರಾಗಿದ್ದಾರೆ. ರಾಮ್ ಹಾಗೂ ಉಪಾಸನಾ ದಂಪತಿಗಳಿಗೆ ಮುದ್ದಾದ ಹೆಣ್ಣು ಮಗು ಕೆಲವು ದಿನಗಳ ಹಿಂದೆಯಷ್ಟೆ ಜನಿಸಿದೆ. ನಿನ್ನೆ (ಜೂನ್ 30) ಈ ಮಗುವಿನ ತೊಟ್ಟಿಲ ಶಾಸ್ತ್ರ ಹಾಗೂ ನಾಮಕರಣ ಅದ್ಧೂರಿಯಾಗಿ ನಡೆದಿದೆ. ಮಗುವಿಗೆ ಕ್ಲಿನ್ ಕಾರಾ ಎಂದು ಹೆಸರಿಡಲಾಗಿದೆ. ಈ ವಿಶಿಷ್ಟವಾದ ಹೆಸರಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದೆ. ಅಂದಹಾಗೆ ಮಗುವಿಗೆ ಈ ಹೆಸರು ಇಟ್ಟಿದ್ದು ಯಾರು?

ಅಸಲಿಗೆ ರಾಮ್ ಚರಣ್ ಹಾಗೂ ಉಪಾಸನಾರ ಮಗಳಿಗೆ ಕ್ಲಿನ್ ಕಾರಾ ಎಂದು ಹೆಸರಿಟ್ಟಿರುವುದು ಉಪಾಸನಾರ ತಾಯಿ ಶೋಭನಾ ಕಾಮಿನೇನಿ. ಜನಪ್ರಿಯ ಉದ್ಯಮಿಯಾಗಿರುವ ಶೋಭನಾ ಕಾಮಿನೇನಿ ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ”ಉಪಾಸನಾ, ನೀನು ಜನಿಸಿದಾಗ ನಿನಗೆ ಕ್ಲಿನ್ ಕಾರಾ ಎಂದು ಹೆಸರು ಇಡಬೇಕು ಎಂದುಕೊಂಡಿದ್ದೆ ಆದರೆ ಆಗ ಸಾಧ್ಯವಾಗಿರಲಿಲ್ಲ. ರಾಮ್ ಚರಣ್ ಹಾಗೂ ಉಪಾಸನಾ ನಿಮಗೆ ಅಭಿನಂದನೆಗಳು, ನಿಮಗೆ ಸೂಕ್ತವಾದ ಮಗು ನಿಮ್ಮ ಪ್ರೇಮದಿಂದ ಲಭಿಸಿದೆ. ಆ ಮಗು ನಮ್ಮ ಭವಿಷ್ಯದ ರೂಪಾಂತರದ ಶಕ್ತಿಯಾಗಿದೆ. ನಾವು ನಿನ್ನನ್ನು ಪ್ರೀತಿಸುತ್ತೇವೆ ಕಾರಾ” ಎಂದು ಪ್ರೇಮದಿಂದ ಬರೆದುಕೊಂಡಿರುವ ಜೊತೆಗೆ ತೊಟ್ಟಿಲ ಶಾಸ್ತ್ರದ ಕೆಲವು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ಗೆ ಪ್ರತಿಕ್ರಿಯಿಸಿರುವ ಉಪಾಸನಾ ಧನ್ಯವಾದ ಅಮ್ಮ ಎಂದು ಬರೆದುಕೊಂಡಿದ್ದಾರೆ.

ಜೂನ್ 30 ರಂದು ಉಪಾಸನಾರ ತವರು ಮನೆಯಲ್ಲಿ ನಾಮಕರಣ ಶಾಸ್ತ್ರ ನಡೆದಿದೆ. ಕಾರ್ಯಕ್ರಮದಲ್ಲಿ ರಾಮ್ ಚರಣ್ ತಂದೆ ತಾಯಿಯಾದ ಮೆಗಾಸ್ಟಾರ್ ಚಿರಂಜೀವಿ ಹಾಗೂ ಸುರೇಖಾ ಕೋನಿಡೆಲಾ ಹಾಗೂ ಇನ್ನೂ ಕೆಲವು ಆಪ್ತ ಬಂಧುಗಳು ಭಾಗವಹಿಸಿದ್ದರು.

ಇದನ್ನೂ ಓದಿ:Ram Charan’s Rich Wife: ಚಿರಂಜೀವಿ ಪುತ್ರ ರಾಮ್ ಚರಣ್ ಪತ್ನಿ ಉಪಾಸನಾ ಕಾಮಿನೇನಿ ಆಸ್ತಿ ಸಾವಿರ ಕೋಟಿಗೂ ಹೆಚ್ಚು; ಹೇಗೆ ಬಂತು ಇಷ್ಟು ಆಸ್ತಿ?

ಹೆಣ್ಣು ಮಗುವಿಗೆ ಆದಿವಾಸಿ ದೇವತೆ ಚೆಂಚುದೇವಿ ಹಾಗು ಬೋರಮ್ಮ ದೇವಿಯವರ ಆಶೀರ್ವಾದದೊಂದಿಗೆ ಕ್ಲಿನ್ ಕಾರಾ ಕೋನಿಡೇಲಾ ಎಂದು ಹೆಸರಿಡಲಾಗಿದೆ ಎಂದು ರಾಮ್ ಚರಣ್ ತಿಳಿಸಿದ್ದಾರೆ. ಕ್ಲಿನ್ ಕಾರಾ ಎಂಬುದು ವಿದೇಶಿ ಹೆಸರಿನಂತೆ ಕೇಳುತ್ತದೆಯಾದರೂ ಹೆಸರಿನ ಹಿಂದೆ ವಿಶೇಷತೆ ಇದೆ. ಕ್ಲಿನ್ ಕಾರಾ ಹೆಸರನ್ನು ಲಲಿತಾ ಸಹಸ್ರನಾಮದಿಂದ ತೆಗೆದುಕೊಂಡಿದ್ದಾರಂತೆ. ಕ್ಲಿನ್ ಕಾರಾ ಹೆಸರು ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ ಹಾಗೂ ಶುದ್ಧೀಕರಿಸುವ ಶಕ್ತಿಯನ್ನು ಸೂಚಿಸುತ್ತದೆ ಎಂದು ವಿವರಣೆ ನೀಡಿದ್ದಾರೆ ಉಪಾಸನಾ. ‘ಕ್ಲೀಂಕಾರೀ’ ಹೆಸರು ಲಲಿತಾ ಸಹಸ್ರನಾಮದ 125 ನೇ ಪಾದದಲ್ಲಿ ಬರುತ್ತೆ, ಅದರಿಂದಲೇ ಸ್ಪೂರ್ತಿ ಪಡೆದು ಕ್ಲಿನ್ ಕಾರಾ ಎಂದು ಮಗಳಿಗೆ ಹೆಸರಿಟ್ಟಿದ್ದಾರೆ.

ರಾಮ್ ಚರಣ್ ಹಾಗೂ ಉಪಾಸನಾ ಕಮ್ಮಿನೇನಿ 2012 ರ ಜೂನ್ ತಿಂಗಳಿನಲ್ಲಿ ವಿವಾಹವಾಗಿದ್ದರು. ಮದುವೆಯಾದ 11 ವರ್ಷದ ಬಳಿಕ ಇಬ್ಬರೂ ಪೋಷಕರಾಗುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನಾವು ಪೋಷಕರಾಗುತ್ತಿಲ್ಲ ಎಂದು ಉಪಾಸನಾ ಈ ಹಿಂದೆ ಹೇಳಿಕೊಂಡಿದ್ದರು. ಮಗು ಆದ ದಿನ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಚಿರಂಜೀವಿ, ನಮ್ಮ ಕೈಗೆ ಮೊಮ್ಮಕ್ಕಳನ್ನು ಕೊಡಬೇಕು ಎಂಬುದು ನಮ್ಮ ಬಹು ವರ್ಷದ ಆಸೆಯಾಗಿತ್ತು ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ