ಜೂ ಎನ್ಟಿಆರ್ ಸಿನಿಮಾದಲ್ಲಿ ನನಗೆ ಅನ್ಯಾಯ: ನಟಿ ಇಶಾ ಅಸಮಾಧಾನ
ಜೂ ಎನ್ಟಿಆರ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದ ನಟಿ, ಈಗ ಆ ಸಿನಿಮಾದಿಂದ ತಮಗೆ ಅನ್ಯಾಯವಾಗಿದೆಯೆಂದು ಆರೋಪ ಮಾಡಿದ್ದಾರೆ.
ಜೂ ಎನ್ಟಿಆರ್ (Jr NTR) ಸಿನಿಮಾ ಒಂದರಲ್ಲಿ ನಟಿಸಿದ್ದ ನಟಿ ಈಗ ತಮಗೆ ಆ ಸಿನಿಮಾದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ‘ಲೈಫ್ ಈಸ್ ಬ್ಯೂಟಿಫುಲ್’, ‘ಅಂತಕ ಮುಂದು ಆ ತರವಾತ’, ‘ಓಯ್’ ಇನ್ನೂ ಹಲವು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಇಶಾ ರೆಬ್ಬಾ ಜೂ ಎನ್ಟಿಆರ್ ನಟಿಸಿರುವ ಸೂಪರ್ ಹಿಟ್ ಸಿನಿಮಾನಲ್ಲಿ ನಟಿಸಿದ್ದರು. ಆದರೆ ಆ ಸಿನಿಮಾದಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ನಟಿ ಆರೋಪ ಮಾಡಿದ್ದಾರೆ. ವಿಶೇಷವಾಗಿ ನಿರ್ದೇಶಕ ತ್ರಿವಿಕ್ರಮ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಜೂ ಎನ್ಟಿಆರ್ ನಟಿಸಿ, ತ್ರಿವಿಕ್ರಮ್ ನಿರ್ದೇಶನ ಮಾಡಿರುವ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾದಲ್ಲಿ ಇಶಾ ರೆಬ್ಬ ನಟಿಸಿದ್ದರು. ಆ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ತ್ರಿವಿಕ್ರಮ್, ಇಶಾ ರೆಬ್ಬ ಅವರನ್ನು ಸಂಪರ್ಕಿಸಿದಾಗ, ಈ ಸಿನಿಮಾದ ಎರಡನೇ ನಾಯಕಿ ನೀವಾಗಿರುತ್ತೀರ ಎಂದಿದ್ದರಂತೆ. ಸಿನಿಮಾಕ್ಕಾಗಿ ಪ್ರವಾಸವನ್ನು ಮೊಟಕುಗೊಳಿಸಿ ಬಂದಿದ್ದರಂತೆ ಇಶಾ ರೆಬ್ಬ, ಸಿನಿಮಾದಲ್ಲಿ ಜೂ ಎನ್ಟಿಆರ್ ಜೊತೆಗೆ ಒಂದು ಹಾಡನ್ನು ಸಹ ಶೂಟ್ ಮಾಡಲಾಗಿತ್ತಂತೆ. ಹಾಡಿಗಾಗಿ ಬುಲೆಟ್ ಚಲಾಯಿಸುವುದನ್ನು ಸಹ ಇಶಾ ಕಲಿತರಂತೆ ಆದರೆ ಸಿನಿಮಾ ಬಿಡುಗಡೆ ಆದಾಗ ಅವರ ಪಾತ್ರಕ್ಕೆ ವಿಪರೀತ ಕತ್ತರಿ ಪ್ರಯೋಗ ಮಾಡಲಾಗಿತ್ತಂತೆ.
ಇದನ್ನೂ ಓದಿ:ಆಸ್ತಿ ವಿವಾದ, ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ ಜೂ ಎನ್ಟಿಆರ್
ನಾಯಕಿ ಅರವಿಂದ (ಪೂಜಾ ಹೆಗ್ಡೆ)ಯ ಸಹೋದರಿ ಪಾತ್ರದಲ್ಲಿ ಇಶಾ, ಆ ಸಿನಿಮಾನಲ್ಲಿ ನಟಿಸಿದ್ದರು. ನಾಯಕನ ಮೇಲೆ ಪ್ರೀತಿ ಇಟ್ಟುಕೊಳ್ಳುವ ಪಾತ್ರವದು, ಸಿನಿಮಾದ ಚಿತ್ರೀಕರಣ ನಡೆದಾಗ ಜೂ ಎನ್ಟಿಆರ್ ಹಾಗೂ ಇಶಾ ನಡುವೆ ಹಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗಿತ್ತಂತೆ. ಹಲವು ಹಾಸ್ಯ ದೃಶ್ಯಗಳು, ರೊಮ್ಯಾಂಟಿಕ್ ದೃಶ್ಯಗಳು ಸಹ ಇದ್ದವಂತೆ. ಆದರೆ ನಿರ್ದೇಶಕರು ಹಲವಾರು ದೃಶ್ಯಗಳಿಗೆ ಕತ್ತರಿ ಹಾಕಿದರಂತೆ. ಸಿನಿಮಾ ನೋಡಿದವರು ಇಶಾ ಪಾತ್ರಕ್ಕೆ ಪ್ರಾಮುಖ್ಯತೆಯೇ ಇಲ್ಲ ಎಂದಿದ್ದರಂತೆ. ಇದು ಇಶಾಗೆ ಬಹಳ ಬೇಸರ ತರಿಸಿತ್ತಂತೆ.
ತಮ್ಮ ದೃಶ್ಯಗಳಿಗೆ ಕತ್ತರಿ ಹಾಕಿರುವ ಬಗ್ಗೆ ಇಶಾ, ನಿರ್ದೇಶಕ ತ್ರಿವಿಕ್ರಮ್ ಬಳಿ ಖುದ್ದಾಗಿ ಪ್ರಶ್ನೆ ಮಾಡಿದರಂತೆ, ಅದಕ್ಕೆ ತ್ರಿವಿಕ್ರಮ್, ‘ನಿಮ್ಮನ್ನು ಸಿನಿಮಾದ ಎರಡನೇ ನಾಯಕಿ ಎಂದು ಪ್ರಚಾರ ಮಾಡುತ್ತಿದ್ದೀವಿ ಅಷ್ಟು ಸಾಲದೆ’ ಎಂದು ಉತ್ತರಿಸಿದ್ದರು ಎಂದಿದ್ದಾರೆ ನಟಿ ಇಶಾ. ‘ಅರವಿಂದ ಸಮೇತ ವೀರ ರಾಘವ’ ಸಿನಿಮಾ 2018ರಲ್ಲಿ ಬಿಡುಗಡೆ ಆಗಿತ್ತು. ರಾಯಲಸೀಮ ಕುಟುಂಬ ದ್ವೇಷದ ಕುರಿತಾದ ಕತೆಯನ್ನು ಆ ಸಿನಿಮಾ ಒಳಗೊಂಡಿತ್ತು. ತಲೆ ತಲಾಂತರಗಳಿಂದಲೂ ಇರುವ ದ್ವೇಷವನ್ನು ಅಂತ್ಯ ಮಾಡುವ ವ್ಯಕ್ತಿಯ ಪಾತ್ರದಲ್ಲಿ ಜೂ ಎನ್ಟಿಆರ್ ನಟಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ