AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ತಿ ವಿವಾದ, ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ ಜೂ ಎನ್​ಟಿಆರ್

ತಮ್ಮದೇ ಕುಟುಂಬದ ಪಕ್ಷವಾದ ಟಿಡಿಪಿ ಪರವಾಗಿ ಪ್ರಚಾರಕ್ಕೂ ಸಹ ಹೋಗದೆ ತಾವಾಯಿತು, ತಮ್ಮ ಕೆಲಸವಾಯ್ತು ಎಂದು ಸುಮ್ಮನಿರುವ ಜೂ ಎನ್​ಟಿಆರ್ ಅವರನ್ನು ವಿವಾದವೊಂದು ಹುಡುಕಿಕೊಂಡು ಬಂದಿದೆ.

ಆಸ್ತಿ ವಿವಾದ, ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ ಜೂ ಎನ್​ಟಿಆರ್
ಮಂಜುನಾಥ ಸಿ.
|

Updated on: May 17, 2024 | 3:47 PM

Share

ಟಾಲಿವುಡ್ (Tollywood) ನಟ ಜೂ ಎನ್​ಟಿಆರ್ (Jr NTR), ತಾವಾಯ್ತು, ತಮ್ಮ ಸಿನಿಮಾ ಆಯ್ತೆಯಂದು ತಮ್ಮ ಪಾಡಿಗೆ ತಾವಿದ್ದಾರೆ. ಚುನಾವಣೆಗಳಲ್ಲಿ ತಮ್ಮ ಕುಟುಂಬದ ಟಿಡಿಪಿ ಪಕ್ಷದ ಪರವಾಗಿ ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗುತ್ತಿದ್ದ ಜೂ ಎನ್​ಟಿಆರ್, ಈ ಬಾರಿ ಚುನಾವಣೆಯಿಂದ ಬಹು ದೂರ ಉಳಿದಿಬಿಟ್ಟಿದ್ದರು. ಆದರೆ ವಿವಾದ ಎಂಬುದು ಜೂ ಎನ್​ಟಿಆರ್ ಅವರನ್ನು ಹುಡುಕಿ ಬಂದಂತಿದೆ. 21 ವರ್ಷದ ಹಿಂದೆ ಖರೀದಿಸಿದ್ದ ಜಾಗದ ವಿಷಯವಾಗಿ ವಿವಾದವೊಂದು ಸೃಷ್ಟಿಯಾಗಿದ್ದು, ಪ್ರಕರಣ ಸಂಬಂಧವಾಗಿ ಜೂ ಎನ್​ಟಿಆರ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಜೂ ಎನ್​ಟಿಆರ್ ಅವರು 2003 ರಲ್ಲಿ ಹೈದರಾಬಾದ್​ನ ಜೂಬ್ಲಿ ಹಿಲ್ಸ್​ನಲ್ಲಿ 6165 ಚದರ ಅಡಿಯ ಜಾಗವನ್ನು 34 ಲಕ್ಷ ರೂಪಾಯಿ ನೀಡಿ ಸುಂಕು ಗೀತಾ ಲಕ್ಷ್ಮಿ ಎಂಬುವರಿಂದ ಖರೀದಿ ಮಾಡಿದ್ದರು. ಆ ಜಮೀನಿನ ಈಗಿನ ಮೌಲ್ಯ ಸುಮಾರು 24 ಕೋಟಿ ರೂಪಾಯಿಗಳು. ಖರೀದಿಸಿದ್ದ ಜಾಗದಲ್ಲಿ ಜೂನ ಎನ್​ಟಿಆರ್ ಅದ್ಧೂರಿಯಾಗಿ ಮನೆಯನ್ನು ಸಹ ನಿರ್ಮಿಸಿದ್ದಾರೆ. ಈಗ ಈ ಜಮೀನು ವಿವಾದಕ್ಕೆ ಕಾರಣಾಗಿದೆ.

1996 ರಲ್ಲಿ ಜಮೀನನ್ನು ಅಡಮಾನವಿಟ್ಟು ಸಾಲ ಪಡೆಯಲಾಗಿತ್ತು. ಸಾಲದ ಪ್ರತಿಯಾಗಿ ಒತ್ತೆಯಿಡಲಾಗಿರುವ ಜಮೀನನ್ನು ವಶಪಡಿಸಿಕೊಳ್ಳಲು ಅನುಮತಿಗಾಗಿ ನಾಲ್ಕು ಬ್ಯಾಂಕ್​ಗಳು ಡೆಟ್ ರಿಕವರಿ ಟ್ರಿಬ್ಯುನಲ್​ ಗೆ ಮನವಿ ಮಾಡಿತ್ತು. ವಿಚಾರಣೆ ಆಲಿಸಿದ ಟ್ರಿಬ್ಯೂನಲ್ ಈಗ ಬ್ಯಾಂಕ್​ಗಳ ಪರವಾಗಿ ಆದೇಶ ನೀಡಿದೆ. ಬಳಿಕ ಬ್ಯಾಂಕ್​ನವರು ಜೂ ಎನ್​ಟಿಆರ್ ಈಗ ವಾಸವಿರುವ ಜಮೀನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ನೊಟೀಸ್ ನೀಡಿದ್ದಾರೆ. ತಮ್ಮ ಬಳಿ ಇರುವ ಜಮೀನಿನ ದಾಖಲೆಗಳನ್ನು ಸಹ ನೀಡಿದ್ದಾರೆ.

ಇದನ್ನೂ ಓದಿ:ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

ಇದೇ ಪ್ರಕರಣವಾಗಿ ತೆಲಂಗಾಣ ಹೈಕೋರ್ಟ್​ಗೆ ಮನವಿ ಸಲ್ಲಿಸಿರುವ ಜೂ ಎನ್​ಟಿಆರ್, ತಮ್ಮ ಬಳಿ ಇರುವ ಹಾಗೂ ಬ್ಯಾಂಕ್​ನವರು ಸಲ್ಲಿಸಿರುವ ದಾಖಲೆಗಳನ್ನು ಫೊರೆನ್ಸಿಕ್​ ಪರೀಕ್ಷೆಗೆ ಕಳಿಸಲಾಗಿದ್ದು, ನನ್ನ ಬಳಿ ಇರುವ ದಾಖಲೆಗಳು ಒರಿಜಿನಲ್ ಎಂದು ವರದಿ ಬಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜೂ ಎನ್​ಟಿಆರ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ‘ಜೂ ಎನ್​ಟಿಆರ್ ಏಕೆ ಈ ವಿಷಯವನ್ನು ಹೈಕೋರ್ಟ್​ಗೆ ತಂದರು, ಡೆಟ್ ರಿಕವರಿ ಟ್ರಿಬ್ಯುನಲ್​ಗೆ ಏಕೆ ಮನವಿ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಆದರೆ ಜೂ ಎನ್​ಟಿಆರ್ ಪರ ವಕೀಲರು ಡಿಆರ್​ಟಿಯ ಆದೇಶದಲ್ಲಿರುವ ಒಂದು ತಾಂತ್ರಿಕ ಸಮಸ್ಯೆ ಬಗ್ಗೆ ಗಮನ ಸೆಳೆದು ಈ ಕಾರಣಕ್ಕಾಗಿ ನಾವು ಹೈಕೋರ್ಟ್​ಗೆ ಮನವಿ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಪ್ರಕರಣವನ್ನು ಜೂನ್ 6 ಕ್ಕೆ ಮುಂದೂಡಲಾಗಿದೆ.

2003 ರಲ್ಲಿ ಜಮೀನು ಖರೀದಿಸಿದ ಜೂ ಎನ್​ಟಿಆರ್, 2007ರಲ್ಲಿ ಅದೇ ಜಮೀನಿನಲ್ಲಿ ಅದ್ಧೂರಿಯಾಗಿ ಮನೆ ಸಹ ನಿರ್ಮಿಸಿದರು. ಈಗಲೂ ಅವರು ಅದೇ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದಾರೆ. ಜೂ ಎನ್​ಟಿಆರ್ ಸಾಕಷ್ಟು ರಿಯಲ್ ಎಸ್ಟೇಟ್ ಹೂಡಿಕೆಗಳನ್ನು ಮಾಡಿದ್ದಾರೆ. ಆಂಧ್ರ, ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಜೂಎನ್​ಟಿಆರ್ ಜಮೀನು ಹೊಂದಿದ್ದಾರೆ. ಕೆಲವು ಕಮರ್ಶಿಯಲ್ ಬಿಲ್ಡಿಂಗ್​ಗಳನ್ನು ಸಹ ಅವರು ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್