AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಲಿವುಡ್​ಗೂ ಬಂತು ಬರಗಾಲ, 400 ಚಿತ್ರಮಂದಿರಗಳು ಏಕಾ-ಏಕಿ ಬಂದ್

ನೆರೆಯ ತೆಲುಗು ಚಿತ್ರರಂಗದಲ್ಲಿಯೂ ಸಹ ಕನ್ನಡ ಚಿತ್ರರಂಗಕ್ಕಿದ ಸಮಸ್ಯೆಗಳೇ ತುಂಬಿವೆ. ಅಲ್ಲಿಯೂ ಸಹ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಂಕಷ್ಟದಲ್ಲಿದ್ದು, ಒಮ್ಮೆಲೆ 400 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಾಗಿಲು ಹಾಕುತ್ತಿವೆ.

ಟಾಲಿವುಡ್​ಗೂ ಬಂತು ಬರಗಾಲ, 400 ಚಿತ್ರಮಂದಿರಗಳು ಏಕಾ-ಏಕಿ ಬಂದ್
ಮಂಜುನಾಥ ಸಿ.
|

Updated on: May 15, 2024 | 3:18 PM

Share

ಕರ್ನಾಟಕದಲ್ಲಿ ಒಂದರ ಮೇಲೊಂದರಂತೆ ಸಿಂಗಲ್ ಸ್ಕ್ರೀನ್ (Single Screen) ಚಿತ್ರಮಂದಿರಗಳು ಬಾಗಿಲು ಹಾಕುತ್ತಿವೆ. ಬೆಂಗಳೂರಿನಂಥಹಾ ಜನಸಂದಣಿ ಇರುವ ನಗರಗಳಲ್ಲಿಯೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಉಳಿಯುವುದು ಕಷ್ಟವಾಗುತ್ತಿದೆ. ಕನ್ನಡದಲ್ಲಿ ಮಾತ್ರವಲ್ಲ, ಬೇರೆ ಕೆಲವು ಚಿತ್ರರಂಗಗಳಲ್ಲಿಯೂ ಇದೇ ಪರಿಸ್ಥಿತಿ. ಕನ್ನಡಕ್ಕೆ ಹೋಲಿಸಿದರೆ ದುಪ್ಪಟ್ಟು ಯಶಸ್ವಿ ಚಿತ್ರರಂಗವಾದ ನೆರೆಯ ತೆಲುಗು ಚಿತ್ರರಂಗದ ಸಹ ಪರಿಸ್ಥಿತಿ ಭಿನ್ನವಾಗಿಲ್ಲ. ಅಲ್ಲಿ ಒಂದೇ ಬಾರಿಗೆ 400 ಚಿತ್ರಮಂದಿರಗಳನ್ನು ಮುಚ್ಚಲಾಗುತ್ತಿದೆ.

ತೆಲಂಗಾಣದ ಸುಮಾರು 400 ಚಿತ್ರಮಂದಿರಗಳನ್ನು ಹತ್ತು ದಿನಗಳ ಕಾಲದ ವರೆಗೆ ಬಂದ್ ಮಾಡಲು ನಿಶ್ಚಯಿಸಲಾಗಿದೆ. ತೆಲಂಗಾಣ ರಾಜ್ಯ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಮಾಲೀಕರ ಸಂಘ ಈ ನಿರ್ಧಾರ ತೆಗೆದುಕೊಂಡಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಆಗುತ್ತಿರುವ ನಷ್ಟದ ಕಾರಣದಿಂದಾಗಿ ಈ ನಿರ್ಧಾರವನ್ನು ಸಂಘವು ತೆಗೆದುಕೊಂಡಿದೆ. ಐಪಿಎಲ್, ಲೋಕಸಭೆ ಚುನಾವಣೆ ಹಾಗೂ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗಳು ಇದ್ದ ಕಾರಣ ತೆಲುಗು ಚಿತ್ರರಂಗದಿಂದ ಯಾವುದೇ ದೊಡ್ಡ ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಾಗಿ ಚಿತ್ರಮಂದಿರಗಳನ್ನು ನಡೆಸುವುದು ಕಷ್ಟವಾಗಿದ್ದು, ಹತ್ತು ದಿನಗಳ ಕಾಲ ಚಿತ್ರಮಂದಿರ ಮುಚ್ಚಿ ದಿನವಹಿ ಖರ್ಚನ್ನಾದರೂ ಉಳಿಸುವ ಲೆಕ್ಕಾಚಾರ ಮಾಲೀಕರದ್ದು.

ಇದನ್ನೂ ಓದಿ:‘ಸ್ಟಾರ್ ನಟರು ಎರಡು ವರ್ಷಕ್ಕೊಂದು ಸಿನಿಮಾ ಮಾಡಿದರೆ ಚಿತ್ರಮಂದಿರಗಳು ಉಳಿಯಲ್ಲ’

ಮೇ 17ರಿಂದ ತೆಲಂಗಾಣದಾದ್ಯಂತ ಎಲ್ಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಬಂದ್ ಆಗಿರಲಿವೆ. ಮೇ 25ಕ್ಕೆ ಮತ್ತೆ ಎಲ್ಲ ಚಿತ್ರಮಂದಿರಗಳು ಕಾರ್ಯಾರಂಭ ಮಾಡಲಿವೆ. ಆ ವೇಳೆಗಾಗಲೆ ಹೊಸ ಸಿನಿಮಾಗಳ ರಿಲೀಸ್ ಶುರುವಾಗಿರುತ್ತದೆ. ಮೂರನೇ ಹಂತದ ನಾಯಕರ ಕೆಲವು ಸಿನಿಮಾಗಳು ಆ ವೇಳೆಗೆ ಬಿಡುಗಡೆ ಆಗಲಿವೆ. ‘ಗ್ಯಾಂಗ್ಸ್ ಆಫ್ ಗೋಧಾವರಿ’, ‘ಹರೋಂ ಹರ’, ‘ಲವ್ ಮೀ’, ‘ಸತ್ಯಭಾಮ’ ಸಿನಿಮಾಗಳು ಆ ವೇಳೆಗೆ ಬಿಡುಗಡೆ ಆಗಲಿರುವ ಕಾರಣ ಮೇ 25ಕ್ಕೆ ಚಿತ್ರಮಂದಿರಗಳು ಮತ್ತೆ ಕಾರ್ಯಾರಂಭ ಮಾಡಲಿವೆ.

‘ಒಳ್ಳೆಯ ಸಿನಿಮಾಗಳು ಬರದೇ ಇರುವುದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಮಸ್ಯೆಗೆ ಕಾರಣ. ಇತ್ತೀಚೆಗೆ ಬಂದ ಯಾವೊಂದು ಸಿನಿಮಾ ಸಹ ಒಳ್ಳೆಯ ಕಲೆಕ್ಷನ್ ಮಾಡಲಿಲ್ಲ. ಚುನಾವಣೆ, ಐಪಿಎಲ್ ಕಾರಣದಿಂದ ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆ ತೀರ ಇಳಿಮುಖವಾಗಿದೆ. ಸಿಂಗಲ್ ಸ್ಕ್ರೀನ್ ನವರಿಗೆ ಸಿಬ್ಬಂದಿಗಳಿಗೆ ಸಂಬಳ ಕೊಡುವುದು ಕಷ್ಟವಾಗಿದೆ. ಆಗುತ್ತಿರುವ ಖರ್ಚು ಉಳಿಸಲೆಂದು ಹೀಗೆ ಹತ್ತು ದಿನಗಳ ರಜೆ ಘೋಷಿಸಲಾಗಿದೆ’ ಎಂದಿದ್ದಾರೆ ತೆಲಂಗಾಣ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಂಘದ ಅಧ್ಯಕ್ಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ