AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್​​ಕಿಡ್​ನಿಂದ ಆಫರ್ ಹೋಯ್ತು ಅನ್ನೋದು ಸುಳ್ಳು ಎಂದ ಕರಣ್; ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ರಾಜ್​ಕುಮಾರ್ ರಾವ್

‘ಮಾಧ್ಯಮಗಳಲ್ಲಿ ಹೆಡ್​ಲೈನ್ ಆಗಬೇಕು ಎನ್ನುವ ಕಾರಣಕ್ಕೆ ಕೆಲವರು ಈ ರೀತಿಯ ತಂತ್ರ ಬಳಕೆ ಮಾಡಿಕೊಳ್ಳುತ್ತಾರೆ. ನನ್ನನ್ನು ಹೊರಗಿನವರಂತೆ ನೋಡಿದರು, ಸ್ಟಾರ್​ ಕಿಡ್​ಗಾಗಿ ಆಫರ್ ಕಳೆದುಕೊಂಡೆ ಎಂದು ಯಶಸ್ಸು ಕಂಡವರು ಹೇಳುತ್ತಾರೆ’ ಎಂದರು ಕರಣ್. ಇದಕ್ಕೆ ರಾಜ್​ಕುಮಾರ್ ರಾವ್ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.

ಸ್ಟಾರ್​​ಕಿಡ್​ನಿಂದ ಆಫರ್ ಹೋಯ್ತು ಅನ್ನೋದು ಸುಳ್ಳು ಎಂದ ಕರಣ್; ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ರಾಜ್​ಕುಮಾರ್ ರಾವ್
ರಾಜ್​ಕುಮಾರ್-ಕರಣ್
ರಾಜೇಶ್ ದುಗ್ಗುಮನೆ
|

Updated on: May 20, 2024 | 7:01 AM

Share

‘ಮಿಸ್ಟರ್ ಮಾಹಿ ಆ್ಯಂಡ್ ಮಿಸಸ್ ಮಾಹಿ’ ಸಿನಿಮಾ (Mr And Ms Mahi) ರಿಲೀಸ್​ಗೆ ರೆಡಿ ಇದೆ. ರಾಜ್​ಕುಮಾರ್ ರಾವ್ ಹಾಗೂ ಜಾನ್ವಿ ಕಪೂರ್ ಇದರಲ್ಲಿ ನಟಿಸಿದ್ದು, ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಸಿನಿಮಾ ಬಗ್ಗೆ ಮಾತನಾಡೋಕೆ ಜಾನ್ವಿ, ರಾಜ್​ಕುಮಾರ್ ರಾವ್​ ಹಾಗೂ ಕರಣ್ ಒಂದೆಡೆ ಸೇರಿದ್ದರು. ಈ ವೇಳೆ ರಾಜ್​ಕುಮಾರ್ ರಾವ್ ಅವರು ಬಾಲಿವುಡ್​​ನ ಕರಾಳ ಸತ್ಯಗಳ ಬಗ್ಗೆ ಹೇಳಿದ್ದಾರೆ.

ನೆಪೋಟಿಸಂ ಬಗ್ಗೆ ಮಾತನಾಡಿದರು ಕರಣ್. ‘ಮಾಧ್ಯಮಗಳಲ್ಲಿ ಹೆಡ್​ಲೈನ್ ಆಗಬೇಕು ಎನ್ನುವ ಕಾರಣಕ್ಕೆ ಕೆಲವರು ಈ ರೀತಿಯ ತಂತ್ರ ಬಳಕೆ ಮಾಡಿಕೊಳ್ಳುತ್ತಾರೆ. ನನ್ನನ್ನು ಹೊರಗಿನವರಂತೆ ನೋಡಿದರು, ಸ್ಟಾರ್​ ಕಿಡ್​ಗಾಗಿ ಆಫರ್ ಕಳೆದುಕೊಂಡೆ ಎಂದು ಯಶಸ್ಸು ಕಂಡವರು ಹೇಳುತ್ತಾರೆ. ನಾನು ಪಾರ್ಟಿ ಅಟೆಂಡ್ ಮಾಡಿಲ್ಲ ಹೀಗಾಗಿ, ಅವಕಾಶ ಸಿಗಲಿಲ್ಲ ಎನ್ನುತ್ತಾರೆ. ಯಾವ ಪಾರ್ಟಿಗಳಲ್ಲಿ ಸಿನಿಮಾ ಅವಕಾಶ ಸಿಗುತ್ತದೆ ಅನ್ನೋದು ನನಗಂತೂ ಗೊತ್ತಿಲ್ಲ’ ಎಂದರು ಕರಣ್.

ಕರಣ್ ಅವರ ಮಾತಿಗೆ ರಾಜ್​ಕುಮಾರ್ ಉತ್ತರಿಸಿದರು. ‘ಎಲ್ಲರ ಜೊತೆ ಸಂಪರ್ಕ ಬೆಳೆಸಿಕೊಳ್ಳೋದು ಸಮಸ್ಯೆ ಅಲ್ಲ. ಆದರೆ, ಪಾರ್ಟಿಗೆ ಅಟೆಂಡ್ ಆಗಿ ನಾನು ಇಲ್ಲಿ ಕಾಂಟ್ಯಾಕ್ಟ್ ಬೆಳೆಸಿಕೊಳ್ಳಲು ಬಂದಿದ್ದೇನೆ ಅನ್ನೋದು ಸಮಸ್ಯೆ. ನಾನು ಒಂದು ಸಿನಿಮಾ ಮಾಡಬೇಕಿತ್ತು. ಆದರೆ ರತ್ರೋರಾತ್ರಿ ಸಿನಿಮಾ ಆಫರ್ ಹೋಯಿತು. ಸ್ಟಾರ್​ ಕಿಡ್​ಗೆ ಆಫರ್ ಸಿಕ್ಕಿತು. ನನಗೇಕೋ ಅದು ಸರಿ ಎನಿಸಲಿಲ್ಲ. ನೀವು ಎಲ್ಲವನ್ನೂ ನಿಯಂತ್ರಿಸಬಹುದು, ನಿಮಗೆ ಎಲ್ಲರೂ ಗೊತ್ತು, ನೀವು ಕರೆ ಮಾಡಿ ಏನು ಬೇಕಾದರೂ ಹೇಳಿ ಬದಲಿಸಬಹುದು ಎನ್ನುವ ಕಾರಣಕ್ಕೆ ಈ ರೀತಿ ಮಾಡೋದು ಸರಿ ಅಲ್ಲ. ಹೊರಗಿನವರೂ ಕೂಡ ಬಂದು ಸಿನಿಮಾ ಮಾಡಿ ತಮ್ಮ ಕಲೆ ತೋರಿಸಬಹುದು’ ಎಂದಿದ್ದಾರೆ ರಾಜ್​ಕುಮಾರ್ ರಾವ್. ಅವರ ಉತ್ತರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಪಠಾಣ್​’ ಚಿತ್ರದಿಂದ ಶಾರುಖ್​​ ಗೆದ್ದಿದ್ದಕ್ಕೆ ಎಲ್ಲರಿಗೂ ಖುಷಿ ಆಗಿದ್ದೇಕೆ? ರಾಜ್​ಕುಮಾರ್​ ರಾವ್​ ನೀಡಿದ ಉತ್ತರ ಇಲ್ಲಿದೆ

ಮೊದಲಿನಿಂದಲೂ ಈ ಬಗ್ಗೆ ಚರ್ಚೆ ಜೋರಿದೆ. ಸ್ಟಾರ್ ಕಿಡ್​ಗಾಗಿ ಆಫರ್ ಕಳೆದುಕೊಂಡೆ ಎಂದು ಅನೇಕರು ಹೇಳಿದ್ದು ಇದೆ. ಇದಕ್ಕೆಲ್ಲ ಕರಣ್ ಜೋಹರ್ ತಲೆಕೆಡಿಸಿಕೊಂಡಿಲ್ಲ. ಅವರು ಮೊದಲಿನಿಂದಲೂ ಸೆಲೆಬ್ರಿಟಿಗಳ ಮಕ್ಕಳಿಗೆ ಮಣೆ ಹಾಕುತ್ತಲೇ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಇಂದು ಶೃಂಗೇರಿ ಬಂದ್, ಖಾಸಗಿ ಶಾಲೆ-ಕಾಲೇಜಿಗೂ ರಜೆ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಗ್ಯಾಂಗ್​ಸ್ಟರ್ ಸಂದೀಪ್​ಗೆ ಡ್ರಮ್ ಬಾರಿಸಿ ಸ್ವಾಗತ ಕೋರಿದ ಗ್ರಾಮಸ್ಥರು
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ಬೆಂಗಳೂರಿನ ಹಲವೆಡೆ ತಡರಾತ್ರಿ ಮಳೆ ಅಬ್ಬರ: ವಾಹನ ಸವಾರರ ಪರದಾಟ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ರವಿ ಕನ್ಯಾ, ಚಂದ್ರ ಧನು ರಾಶಿಯಲ್ಲಿ ಸಂಚಾರ: 12 ರಾಶಿಗಳ ಇಂದಿನ ದಿನ ಭವಿಷ್ಯ
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಕೋಮು ಸೌಹಾರ್ದತೆ ಮೆರೆದ ಮುಸ್ಲಿಂ ಬಾಂಧವರು
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್