AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪಠಾಣ್​’ ಚಿತ್ರದಿಂದ ಶಾರುಖ್​​ ಗೆದ್ದಿದ್ದಕ್ಕೆ ಎಲ್ಲರಿಗೂ ಖುಷಿ ಆಗಿದ್ದೇಕೆ? ರಾಜ್​ಕುಮಾರ್​ ರಾವ್​ ನೀಡಿದ ಉತ್ತರ ಇಲ್ಲಿದೆ

Shah Rukh Khan | Rajkummar Rao: ‘ಪಠಾಣ್​ ಸಿನಿಮಾ ಗೆದ್ದಾಗ ನಮಗೆಲ್ಲರಿಗೂ ಖುಷಿ ಆಯಿತು. ಆ ಗೆಲುವಿಗೆ ಶಾರುಖ್​ ಖಾನ್​ ಅರ್ಹರು’ ನಟ ಎಂದು​ ರಾಜ್​ಕುಮಾರ್​ ರಾವ್​ ಹೇಳಿದ್ದಾರೆ.

‘ಪಠಾಣ್​’ ಚಿತ್ರದಿಂದ ಶಾರುಖ್​​ ಗೆದ್ದಿದ್ದಕ್ಕೆ ಎಲ್ಲರಿಗೂ ಖುಷಿ ಆಗಿದ್ದೇಕೆ? ರಾಜ್​ಕುಮಾರ್​ ರಾವ್​ ನೀಡಿದ ಉತ್ತರ ಇಲ್ಲಿದೆ
ಶಾರುಖ್​ ಖಾನ್​, ರಾಜ್​ಕುಮಾರ್​ ರಾವ್​
ಮದನ್​ ಕುಮಾರ್​
|

Updated on: Mar 31, 2023 | 10:39 AM

Share

ನಟ ಶಾರುಖ್​ ಖಾನ್​ (Shah Rukh Khan) ಅವರು ಹಲವು ವರ್ಷಗಳ ಕಾಲ ಬ್ಯಾಕ್​ ಟು ಬ್ಯಾಕ್​ ಸೋಲು ಕಂಡಿದ್ದರು. ಆದರೆ ಈ ವರ್ಷ ಆರಂಭದಲ್ಲೇ ಅವರಿಗೆ ಭರ್ಜರಿ ಗೆಲುವು ಸಿಕ್ಕಿತು. ಶಾರುಖ್​ ಖಾನ್​ ನಟನೆಯ ಪಠಾಣ್​’ ಸಿನಿಮಾ (Pathaan Movie) ಜನವರಿ 25ರಂದು ಬಿಡುಗಡೆಯಾಗಿ ದೊಡ್ಡ ಓಪನಿಂಗ್​ ಪಡೆದುಕೊಂಡಿತು. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡುವ ಮೂಲಕ ಈ ಚಿತ್ರ ಶಾರುಖ್​ ಪಾಲಿಗೆ ಭಾರಿ ಯಶಸ್ಸು ತಂದುಕೊಟ್ಟಿತು. ಈ ಸಿನಿಮಾದಿಂದ ಗೆದ್ದಿದ್ದು ಶಾರುಖ್​ ಆದರೂ ಕೂಡ ಖುಷಿಪಟ್ಟಿದ್ದು ಮಾತ್ರ ಬಾಲಿವುಡ್​ನ ಅನೇಕರು. ಹೀಗೇಕೆ ಎಂಬುದಕ್ಕೆ ನಟ ರಾಜ್​ಕುಮಾರ್ ರಾವ್​ (Rajkummar Rao) ಅವರು ಉತ್ತರ ನೀಡಿದ್ದಾರೆ. ತಮ್ಮ ಮತ್ತು ಶಾರುಖ್​ ನಡುವಿನ ಒಡನಾಟವನ್ನು ಅವರು ಮೆಲುಕು ಹಾಕಿದ್ದಾರೆ. ‘ಹ್ಯೂಮನ್ಸ್​ ಆಫ್​ ಬಾಂಬೆ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಾಜ್​ಕುಮಾರ್​ ರಾವ್​ ಮತ್ತು ಶಾರುಖ್​ ಖಾನ್​ ಅವರು ಮೊದಲ ಬಾರಿಗೆ ನೇರವಾಗಿ ಭೇಟಿ ಆಗಿದ್ದು 2021ರಲ್ಲಿ. ಆಗ ‘ಶಾಹಿದ್​’ ಸಿನಿಮಾದಲ್ಲಿನ ನಟನೆಗಾಗಿ ರಾಜ್​ಕುಮಾರ್​ ರಾವ್​ ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಆಗ ಶಾರುಖ್​ ಖಾನ್​ ಅವರು ಅಭಿನಂದನೆ ಸಲ್ಲಿಸಿದ್ದರು. ಅವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ರಾಜ್​ಕುಮಾರ್​ ರಾವ್​ ವಿವರಿಸಿದ್ದಾರೆ.

ಇದನ್ನೂ ಓದಿ: ‘ಕಥೆಯಿಲ್ಲದ ವಿಡಿಯೋ ಗೇಮ್​ ರೀತಿ ಇದೆ ಪಠಾಣ್​’: ಪಾಕಿಸ್ತಾನದ ಮಂದಿಯಿಂದ ಕೇಳಿಬಂತು ಟೀಕೆ

ಇದನ್ನೂ ಓದಿ
Image
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Image
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Image
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
Image
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

‘ಶಾರುಖ್​ ಖಾನ್​ ಅವರಿಂದ ಕಲಿಯುವುದು ಸಾಕಷ್ಟು ಇದೆ. ಎಲ್ಲರನ್ನೂ ಅವರು ಗೌರವಿಸುತ್ತಾರೆ. ನಿಮಗೆ ಅವರು ಪೂರ್ತಿ ಗಮನ ನೀಡುತ್ತಾರೆ. ಅದು ಅವರ ದೊಡ್ಡ ಗುಣ. ಪ್ರತಿ ಬಾರಿ ಅವರ ಮನೆಯ ಪಾರ್ಟಿಗೆ ಬಂದ ಅತಿಥಿಗಳು ಹೊರಡುವಾಗ ಮೂರನೇ ಮಹಡಿಯಿಂದ ಕೆಳಗೆ ಇಳಿದು, ಗೇಟ್​ ತನಕ ಅವರು ಬರುತ್ತಾರೆ. ಅವರೇ ಕಾರಿನ ಬಾಗಿಲು ತೆರೆದು, ನಿಮ್ಮನ್ನು ಕೂರಿಸುತ್ತಾರೆ. ಇದನ್ನೆಲ್ಲ ಅವರು ಮಾಡಬೇಕು ಅಂತೇನೂ ಇಲ್ಲ. ಈ ಕಾರಣದಿಂದಲೇ ಅವರು ವಿಶೇಷ ಎನಿಸುತ್ತಾರೆ. ಅದಕ್ಕಾಗಿಯೇ ನಾವೆಲ್ಲ ಅವರನ್ನು ಇಷ್ಟಪಡುತ್ತೇವೆ. ಹಾಗಾಗಿಯೇ ಪಠಾಣ್​ ಚಿತ್ರ ಗೆದ್ದಾಗ ನಮಗೆಲ್ಲರಿಗೂ ಖುಷಿ ಆಗಿದ್ದು. ಅವರು ಆ ಗೆಲುವಿಗೆ ಅರ್ಹರು’ ಎಂದು ರಾಜ್​ಕುಮಾರ್​ ರಾವ್​ ಹೇಳಿದ್ದಾರೆ.

ಇದನ್ನೂ ಓದಿ: ‘ಪಠಾಣ್​’ ಗೆಲುವಿನ ಬಳಿಕ 10 ಕೋಟಿ ರೂ. ಕಾರು ಖರೀದಿಸಿದ ಶಾರುಖ್ ಖಾನ್; ನಂಬರ್​ ಪ್ಲೇಟ್ ಹೇಗಿದೆ ನೋಡಿ

ಹಲವು ಸಿನಿಮಾಗಳಲ್ಲಿ ರಾಜ್​ಕುಮಾರ್​ ರಾವ್​ ಬ್ಯುಸಿ ಆಗಿದ್ದಾರೆ. ಅವರು ನಟಿಸಿದ ‘ಬೀಡ್​’ ಚಿತ್ರ ಇತ್ತೀಚೆಗೆ ಬಿಡುಗಡೆ ಆಗಿದೆ. ‘ಮಿಸ್ಟರ್​ ಆ್ಯಂಡ್​ ಮಿಸಸ್​ ಮಾಹಿ’ ಸಿನಿಮಾದಲ್ಲಿ ಅವರು ಜಾನ್ವಿ ಕಪೂರ್​ ಜೊತೆ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ‘ಧರ್ಮ ಪ್ರೊಡಕ್ಷನ್ಸ್’ ಬಂಡವಾಳ ಹೂಡುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ