ಕೆಸರಿನಲ್ಲಿ ಮುಳುಗಿ ಸಾವು ಬದುಕಿನ ನಡುವೆ ಹೋರಾಡ್ತಿದ್ದ ವ್ಯಕ್ತಿ ರಕ್ಷಿಸಿದ ಪೊಲೀಸರು
ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಹೇಶ್ ಹಾಗೂ ಹೊಯ್ಸಳ ಕಾರು ಚಾಲಕ ಬಸವರಾಜು ಎಂಬುವವರು ಕೆರೆಯ ಕೆಸರಿನಲ್ಲಿ ಮುಳುಗ್ತಿದ್ದ ವ್ಯಕ್ತಿಯನ್ನ ರಕ್ಷಣೆ ಮಾಡಿದ್ದಾರೆ. ಪೊಲೀಸರ ಸಮಯ ಪ್ರಜ್ಞೆಗೆ ತುಮಕೂರು ಎಸ್‌ಪಿ ಅಶೋಕ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ತುಮಕೂರು, ಮೇ.24: ಕೆಸರಿನಲ್ಲಿ ಮುಳುಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವ್ಯಕ್ತಿಯನ್ನ ಕ್ಯಾತ್ಸಂದ್ರ ಠಾಣೆ ಪೊಲೀಸರು ರಕ್ಷಿಸಿದ ಘಟನೆ ತುಮಕೂರಿನ ಹೊರವಲಯ ದೇವರಾಯಪಟ್ಟಣದ ಕೆರೆಕೋಡಿಯಲ್ಲಿ ನಡೆದಿದೆ. ಕೆರೆಕೋಡಿಹಳ್ಳದ ಕೆಸರಿನಲ್ಲಿ ಅಪರಿಚಿತ ವ್ಯಕ್ತಿ ಸಿಲುಕಿ ಒದ್ದಾಡುತ್ತಿದ್ದ. ಈ ಕುರಿತು ಕ್ಯಾತ್ಸಂದ್ರ ಠಾಣೆ ಪೊಲೀಸರಿಗೆ ಸ್ಥಳೀಯ ನಿವಾಸಿಗಳು ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿ ಖುದ್ದು ಪೊಲೀಸರೇ ಕೆಸರಿಗಿಳಿದು ಶೋಧಕಾರ್ಯ ನಡೆಸಿದ್ದರು. ಹುಡುಕಾಟದ ವೇಳೆ ಕೆಸರಿನಲ್ಲಿ ಮುಳುಗುತ್ತಿದ್ದ ವ್ಯಕ್ತಿಯ ಕೈ ಮಾತ್ರ ಕಾಣಿಸಿದೆ. ಕೂಡಲೇ ಕೆಸರಿನಿಂದ ಆತನನ್ನ ಮೇಲಕ್ಕೆತ್ತಿ ಸಾವಿನ ದವಡೆಯಿಂದ ಸಿಬ್ಬಂದಿ ಪಾರು ಮಾಡಿದ್ದಾರೆ.
ವ್ಯಕ್ತಿಯನ್ನ ರಕ್ಷಿಸಿ ಕರ್ತವ್ಯ ಪ್ರಜ್ಞೆ ಮೆರೆದ ಪೊಲೀಸರು
ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಹೇಶ್ ಹಾಗೂ ಹೊಯ್ಸಳ ಕಾರು ಚಾಲಕ ಬಸವರಾಜು ಎಂಬುವವರು ಮುಳುಗ್ತಿದ್ದ ವ್ಯಕ್ತಿಯನ್ನ ರಕ್ಷಣೆ ಮಾಡಿದ್ದಾರೆ. ಅಸ್ವಸ್ಥ ಅಪರಿಚಿತ ವ್ಯಕ್ತಿಗೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರ ಸಮಯ ಪ್ರಜ್ಞೆಗೆ ತುಮಕೂರು ಎಸ್‌ಪಿ ಅಶೋಕ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಘಟನೆ
ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ