ಚಿಕ್ಕಮಗಳೂರಿನ ಬಣಕಲ್ ಬಳಿ ನಡೆದ ಭೀಕರ ರಸ್ತೆ ಅಫಘಾತದಲ್ಲಿ ನಾಲ್ವರ ದುರ್ಮರಣ, ಮೂವರ ಸ್ಥಿತಿ ಗಂಭೀರ

ಚಿಕ್ಕಮಗಳೂರಿನ ಬಣಕಲ್ ಬಳಿ ನಡೆದ ಭೀಕರ ರಸ್ತೆ ಅಫಘಾತದಲ್ಲಿ ನಾಲ್ವರ ದುರ್ಮರಣ, ಮೂವರ ಸ್ಥಿತಿ ಗಂಭೀರ

ಅರುಣ್​ ಕುಮಾರ್​ ಬೆಳ್ಳಿ
|

Updated on: May 24, 2024 | 6:21 PM

ಎದುರಿನಿಂದ ಬರುತ್ತಿದ್ದ ಲಾರಿಯೊಂದಕ್ಕೆ ಮುಖಾಮುಖಿಯಾಗಿ ಢಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ. ಕಾರಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಚಿತ್ರದುರ್ಗ ಮೂಲದವರೆಂದು ಗೊತ್ತಾಗಿದೆ.

ಚಿಕ್ಕಮಗಳೂರು: ಓಮ್ನಿ ಕಾರಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರನ್ನು ಬಲಿ ಪಡೆದ ಇದು ನಿಸ್ಸಂದೇಹವಾಗಿ ಭೀಕರ ಅಪಘಾತ. ಮಂಜುನಾಥನ ದರ್ಶನಕ್ಕೆಂದು ಧರ್ಮಸ್ಥಳ ಹೋಗಿದ್ದ ನತದೃಷ್ಟರು ದರ್ಶನ ಪಡೆದು ವಾಪಸ್ಸು ತಮ್ಮೂರು ಚಿತ್ರದುರ್ಗಕ್ಕೆ ಬರುವಾಗ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಲಾರಿಯೊಂದಕ್ಕೆ ಮುಖಾಮುಖಿಯಾಗಿ ಢಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ. ಕಾರಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಚಿತ್ರದುರ್ಗ ಮೂಲದವರೆಂದು ಗೊತ್ತಾಗಿದೆ. ಲಾರಿಗೆ ಗುದ್ದಿರುವ ಓಮ್ನಿ ಕಾರಿನ ಸ್ಥಿತಿ ನೋಡಿ. ಮೃತಪಟ್ಟವರ ಹೆಸರುಗಳು ಇನ್ನೂ ತಿಳಿದುಬಂದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜಸ್ಥಾನದಲ್ಲಿ ಭೀಕರ ಅಪಘಾತ; ಟ್ರಕ್​ಗೆ ಬಸ್ ಡಿಕ್ಕಿ ಹೊಡೆದು ಐವರು ಸಾವು, 12 ಜನರ ಸ್ಥಿತಿ ಗಂಭೀರ