ಭಾರೀ ಮಳೆ: ಅರ್ಜುನನ ಸಮಾಧಿ ರಕ್ಷಣೆಗೆ ಮುಂದಾದ ಅರಣ್ಯ ಇಲಾಖೆ; ಇಲ್ಲಿದೆ ವಿಡಿಯೋ
ವೀರಮರಣವನ್ನಪ್ಪಿದ್ದ ಅರ್ಜುನ(Arjuna)ನ ಸಮಾಧಿ ರಕ್ಷಣೆಗೆ ಅರಣ್ಯ ಇಲಾಖೆ(Forest Department) ಸ್ಲ್ಯಾಬ್ ಹಾಕುತ್ತಿದೆ. ಮಳೆ ಆರಂಭ ಹಿನ್ನೆಲೆಯಲ್ಲಿ ಸಮಾಧಿ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಇತ್ತ 25 ಕ್ಕೂ ಹೆಚ್ಚು ಸಿಬ್ಬಂದಿ ಶ್ರಮದಾನದ ಮೂಲಕ ಸಮಾಧಿ ರಕ್ಷಣಾ ಕಾರ್ಯ ಮುಂದುವರೆದಿದೆ.
ಹಾಸನ, ಮೇ.23: ವೀರಮರಣವನ್ನಪ್ಪಿದ್ದ ಅರ್ಜುನ(Arjuna)ನ ಸಮಾಧಿ ರಕ್ಷಣೆಗೆ ಅರಣ್ಯ ಇಲಾಖೆ(Forest Department) ಸ್ಲ್ಯಾಬ್ ಹಾಕುತ್ತಿದೆ. ನಿನ್ನೆ(ಮೇ.22) ನಟ ದರ್ಶನ್ ಅಭಿಮಾನಿಗಳು 30 ಸಾವಿರ ರೂ. ಮೌಲ್ಯದ ಕಲ್ಲುಗಳನ್ನು ಕಳಿಸಿದ್ದರು. ಅರಣ್ಯ ಇಲಾಖೆ ಅನುಮತಿ ಪಡೆಯದೆ ಸ್ಮಾರಕ ನಿರ್ಮಾಣಕ್ಕೆ ಕಲ್ಲುಗಳ ಕಳಿಸಿದ್ದ ಹಿನ್ನಲೆ ಕಲ್ಲುಗಳಿಗೆ ನೀಡಿದ್ದ 30 ಸಾವಿರ ರೂಪಾಯಿಯನ್ನ ದರ್ಶನ್ ಆಪ್ತ ನವೀನ್ ಎಂಬುವವರ ಅಕೌಂಟ್ಗೆ ಪುನಃ ಅರಣ್ಯ ಇಲಾಖೆ ಆರ್ಎಫ್ಓ ಫೋನ್ ಪೇ ಮಾಡಿದ್ದಾರೆ. ಇನ್ನು ಜನರು ಬಂದು ಹೋಗುವ ಸ್ಥಳದಲ್ಲಿಸ್ಮಾರಕ ನಿರ್ಮಾಣಕ್ಕೆ ಈಗಾಗಲೇ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಕಳಿಸಿದೆ. ಈ ನಡುವೆ ಮಳೆ ಆರಂಭ ಹಿನ್ನೆಲೆಯಲ್ಲಿ ಸಮಾಧಿ ರಕ್ಷಣೆಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದ್ದು, ಇತ್ತ 25 ಕ್ಕೂ ಹೆಚ್ಚು ಸಿಬ್ಬಂದಿ ಶ್ರಮದಾನದ ಮೂಲಕ ಸಮಾಧಿ ರಕ್ಷಣಾ ಕಾರ್ಯ ಮುಂದುವರೆದಿದೆ. ಖುದ್ದು ಎಸಿಎಫ್ ಮಹದೇವ್, ವಲಯ ಅರಣ್ಯ ಅಧಿಕಾರಿ ಅಮ್ರೇಕರ್ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದೆ. ಮಳೆಯಿಂದ ಅರ್ಜುನನ ಸಮಾಧಿಗೆ ಯಾವುದೇ ಹಾನಿಯಾಗದಂತೆ ನಿಗಾವಹಿಸಲಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ

ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ

ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್ನಲ್ಲಿ ಇಂದು ನಡೆದ ವಾದವೇನು?
