4 ವರ್ಷಗಳಿಂದ ವಿದ್ಯಾರ್ಥಿಗಳ ಮೇಲೆ ಮೌಲ್ವಿಯಿಂದ ಲೈಂಗಿಕ ದೌರ್ಜನ್ಯ, ಮಕ್ಕಳೆಲ್ಲಾ ಸೇರಿ ಕೊಂದೇ ಬಿಟ್ರು

ರಾಜಸ್ಥಾನದ ಮಸೀದಿಯ ಮೌಲ್ವಿ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳು ಹೊರಬಿದ್ದಿವೆ. ಮೌಲ್ವಿಯನ್ನು ಕೊಂದಿದ್ದು ಮಕ್ಕಳೇ ಎಂಬುದು ತಿಳಿದುಬಂದಿದೆ.

4 ವರ್ಷಗಳಿಂದ ವಿದ್ಯಾರ್ಥಿಗಳ ಮೇಲೆ ಮೌಲ್ವಿಯಿಂದ ಲೈಂಗಿಕ ದೌರ್ಜನ್ಯ, ಮಕ್ಕಳೆಲ್ಲಾ ಸೇರಿ ಕೊಂದೇ ಬಿಟ್ರು
ಬಂಧನ

Updated on: May 13, 2024 | 9:35 AM

ರಾಜಸ್ಥಾನದ ಅಜ್ಮೀರದ ಮೊಹಮ್ಮದಿ ಮದೀನಾ ಮಸೀದಿ ಮೌಲ್ವಿ ಮೊಹಮ್ಮದ್​ ತಾಹಿರ್​ನನ್ನು ವಿದ್ಯಾರ್ಥಿಗಳು ಹತ್ಯೆ(Murder) ಮಾಡಿರುವ ಘಟನೆ ನಡೆದಿದೆ. ಮೌಲ್ವಿ ಕಳೆದ 4 ವರ್ಷಗಳಿಂದ ತಮ್ಮ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದರು ಹೀಗಾಗಿ ನಾವೇ ಅವರನ್ನು ಕೊಲೆ ಮಾಡಿದ್ದೇವೆ ಎಂದು ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರೆ. ರಾಜಸ್ಥಾನದ ಅಜ್ಮೀರ್‌ನಲ್ಲಿ ಮೌಲಾನಾ ಹತ್ಯೆ ಆರೋಪದ ಮೇಲೆ ಆರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ.

ಮೌಲಾನಾ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಮೌಲಾನಾ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅತ್ಯಾಚಾರವೆಸಗುತ್ತಿದ್ದರಯ, ಇದರಿಂದ ಬೇಸರಗೊಂಡ ಮಕ್ಕಳು ಈ ದೊಡ್ಡ ಹೆಜ್ಜೆ ಇಟ್ಟಿದ್ದಾರೆ.
ಇಂಡಿಯನ್ ಎಕ್ಸ್‌ಪ್ರೆಸ್‌ನ ಸುದ್ದಿ ಪ್ರಕಾರ, ಈ ಘಟನೆ ಏಪ್ರಿಲ್ 26 ರ ರಾತ್ರಿ ನಡೆದಿದೆ. ಮೂವತ್ತು ವರ್ಷದ ಮೌಲಾನಾ ಮೊಹಮ್ಮದ್ ತಾಹಿರ್ ಎಂಬಾತನನ್ನು ಹೊಡೆದು ಕೊಂದಿದ್ದಾರೆ.

ಮೌಲಾನಾ ಮೊಬೈಲ್ ನಲ್ಲಿ ಮಕ್ಕಳಿಗೆ ಅಶ್ಲೀಲ ಚಿತ್ರಗಳನ್ನು ತೋರಿಸಿ ಬಳಿಕ ಅತ್ಯಾಚಾರ ಎಸಗುತ್ತಿದ್ದರು.
ಕಳೆದ ನಾಲ್ಕು ವರ್ಷಗಳಿಂದ ಇದನ್ನೇ ಮಾಡುತ್ತಿದ್ದರು. ಇದರಿಂದ ಮನನೊಂದ ಮಕ್ಕಳು ರಾಯತಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಮೌಲಾನಾಗೆ ನೀಡಿದ್ದಾರೆ.

ಮತ್ತಷ್ಟು ಓದಿ: ಅನೈತಿಕ ಸಂಬಂಧ: ಮನಬಂದಂತೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಮಲಗಿದ್ದ ಆತನ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ, ಬಳಿಕ ಹಗ್ಗದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಅಜ್ಮೀರ್‌ನ ಕಾಂಚನ್ ನಗರದಲ್ಲಿರುವ ಮೊಹಮ್ಮದಿ ಮದೀನಾ ಮಸೀದಿಗೆ ಸೇರಿದವರು. ಮೌಲಾನಾ ತಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದರು ಎಂದು ಮಕ್ಕಳು ಹೇಳಿದ್ದು, ಕೊಲೆ ಮಾಡಿದ್ದನ್ನು ಒಪ್ಪಿಕೊಂಡರು. ಇದೀಗ ಈ ಸಂಬಂಧ 6 ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ.

ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗಾದರೂ ಹೇಳಲು ಪ್ರಯತ್ನಿಸಿದರೆ, ಮೌಲ್ವಿ ತಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಮಕ್ಕಳು ಹೇಳಿದ್ದಾರೆ. ಮೌಲಾನಾ ಜೊತೆ 15 ಮಕ್ಕಳು ವಾಸಿಸುತ್ತಿದ್ದರು. ಅದರಲ್ಲಿ 10 ಮಕ್ಕಳು ಈದ್‌ ದಿನ ತಮ್ಮ ಮನೆಗೆ ಹೋಗಿದ್ದರು. ಮತ್ತು ಕೇವಲ ಐದು ಮಕ್ಕಳು ಮಾತ್ರ ಅಲ್ಲಿಯೇ ಇದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us