AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೈತಿಕ ಸಂಬಂಧ: ಮನಬಂದಂತೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಆ ತಂದೆ ತಾಯಿಗೆ ಆತ ಒಬ್ಬನೇ ಮಗ. ತಂದೆ ರೈತನಾಗಿದ್ದರಿಂದ ಅಪ್ಪನ ಜೊತೆ ಜಮೀನು ಕೆಲಸ ಮಾಡುತ್ತಿದ್ದ. ನಿನ್ನೆಯೂ ಅಪ್ಪನನ್ನ ಬೈಕ್ ಮೇಲೆ ಕುರಿಸಿಕೊಂಡು ಜಮೀನಿಗೆ ಹೋಗಿದ್ದ. ತಂದೆಯನ್ನ ಜಮೀನಿನಲ್ಲಿ ಬಿಟ್ಟು ವಾಪಸ್ ಬರುತ್ತಿದ್ದಂತೆ ಡೆಡ್ಲಿ ಅಟ್ಯಾಕ್ ನಡೆದಿತ್ತು. ಕ್ಷಣಾರ್ಧದಲ್ಲಿ ಆ ಯುವಕ ರಕ್ತದ ಮಡುವಿನಲ್ಲಿ ಬಿದ್ದು ಉಸಿರು ಚೆಲ್ಲಿದ್ದ. ಹಾಗಾದರೆ ಅಲ್ಲಾಗಿದ್ದೇನು?, ಈ ಸ್ಟೋರಿ ಓದಿ.

ಅನೈತಿಕ ಸಂಬಂಧ: ಮನಬಂದಂತೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ
ಮೃತ ಯುವಕ
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on: May 12, 2024 | 4:31 PM

Share

ಕಲಬುರಗಿ, ಮೇ.12: ಜಿಲ್ಲೆಯ ಅಫಜಲಪುರ(Afzalpur) ತಾಲೂಕಿನ ಭೀಮಾ ತೀರದ ಗ್ರಾಮದ ಮಣ್ಣೂರಿನಲ್ಲಿ ರಂಜಾನ್ ಮೆಹಬೂಬ್ ತಾರಾ ವ್ಯಕ್ತಿಯ ಭೀಕರ ಹತ್ಯೆಯಾಗಿತ್ತು. ಕೇವಲ 24 ವರ್ಷದ ಯುವಕ ಮಾಡಬಾರದ ಕೆಲಸಕ್ಕೆ ಮಸಣ ಸೇರಿದ್ದಾನೆ. ಅಷ್ಟಕ್ಕೂ ಈ ರಂಜಾನ್ ಹತ್ಯೆಯಾಗಿದ್ದು,ಅನೈತಿಕ ಸಂಬಂಧಕ್ಕಂತೆ. ಅದೇ ಗ್ರಾಮದ ವಿವಾಹಿತ ಮಹಿಳೆಯೊಬ್ಬಳ ಜೊತೆ ಈ ರಂಜಾನ್ ಮೆಹಬೂಬ್ ಅನೈತಿಕ ಸಂಬಂಧ ಹೊಂದ್ದಿದ್ದ. ಆಕೆ ಗಂಡ ದುಬೈನಲ್ಲಿ ಇರುವುದರಿಂದ ಈ ರಂಜಾನ್ ಜೊತೆ ಕದ್ದು ಮುಚ್ಚಿ ಇಬ್ಬರು ಸೇರುತ್ತಿದ್ದರಂತೆ. ಇದನ್ನ ನೋಡಿದ್ದ ಮಹಿಳೆ ಕುಟುಂಬಸ್ಥರು ಹತ್ತಾರು ಭಾರಿ ಕರೆದು ರಾಜಿ ಪಂಚಾಯಿತಿ ಮಾಡಿದ್ದಾರೆ. ಈತ ಮಾತ್ರ ಕ್ಯಾರೆ ಎನ್ನದೇ ತನ್ನ ಚಟ ಮುಂದುವರೆಸಿದ್ದ.

ಮನಬಂದಂತೆ ಚಾಕುವಿನಿಂದ ಇರಿದು ಕೊಲೆ

ಹೀಗಾಗೇ ಇದಕ್ಕೆ ಒಂದು ಗತಿ ಕಾಣಿಸಬೇಕೆಂದೆ ಆಕೆಯ ಕುಟುಂಬಸ್ಥರು ಪಕ್ಕಾ ಫ್ಲ್ಯಾನ್ ಮಾಡಿದ್ದರು. ನಿನ್ನೆ(ಮೇ.11) ಸಂಜೆ ಆತ ಬೈಕ್ ಮೇಲೆ ಹೊಲಕ್ಕೆ ಹೋಗಿದ್ದನ್ನ ನೋಡಿದ್ದ ಹಂತಕರು, ಆತ ಒಬ್ಬನೇ ವಾಪಸ್ ಬರುತ್ತಿದ್ದಂತೆ ಅಟ್ಯಾಕ್ ಮಾಡಿ, ಗ್ರಾಮದ ಹೊರವಲಯದಲ್ಲಿ ಮನಬಂದಂತೆ ಚಾಕುವಿನಿಂದ ಇರಿದು ಕೊಂದಿದ್ದಾರೆ. ಇನ್ನು ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ, ತಂದೆ ಓಡೋಡಿ ಬಂದಿದ್ದಾರೆ. ಅಲ್ಲದೇ ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾವಾಗ ಭೀಮಾ ತೀರದಲ್ಲಿ ನೆತ್ತರು ಹರಿದಿದೆ ಎನ್ನುವ ವಿಷಯ ಖಾಕಿ ಕಿವಿ ಬಡಿಯಿತೋ, ತಕ್ಷಣವೇ ಅಲರ್ಟ್​ ಆದ ಎಸ್ಪಿ ಅಕ್ಷಯ್, ಹಾಗೂ ತಂಡ ಸ್ಥಳಕ್ಕೆ ಧಾವಿಸಿ ಪರೀಶಿಲನೆ ನಡೆಸುತ್ತಿದ್ದರೆ, ಅತ್ತ ಮತ್ತೊಂದು ತಂಡ ಹಂತಕರನ್ನ ವಶಕ್ಕೆ ಪಡೆದಿತ್ತು.

ಇದನ್ನೂ ಓದಿ:ತೃತೀಯ ಲಿಂಗಿ ಹತ್ಯೆ ಪ್ರಕರಣ; ಓರ್ವ ಮಹಿಳೆ ಬಂಧನ, ಹತ್ಯೆಗೆ ಕಾರಣವೇನು ಗೊತ್ತಾ?

ಸಧ್ಯ ಅಫಜಲಪುರ ಪೊಲೀಸರು ಸಂತೋಷ್, ರಾಕೇಶ್, ಆಕಾಶ್, ಪ್ರದೀಪ್ ಎನ್ನುವ ನಾಲ್ವರನ್ನ ವಶಕ್ಕೆ  ಪಡೆದಿದ್ದಾರೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಆರೋಪಿ ಸಂತೋಷನ ಅತ್ತಿಗೆಯ ಜೊತೆ ಈ ರಂಜಾನ್ ಅನೈತಿಕ ಸಂಬಂಧ ಹೊಂದಿದ್ದು, ಅದಕ್ಕಾಗಿಯೇ ಕೊಲೆ ಮಾಡಲಾಗಿದೆಯಂತೆ. ಸಧ್ಯ‌ ಪ್ರಕರಣ ದಾಖಲಿಸಿಕೊಂಡಿರುವ ಅಫಜಲಪುರ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. ಮೆಲ್ನೋಟಕ್ಕೆ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎನ್ನೋದು ಗೊತ್ತಾಗಿದೆ. ಅದೇ ಏನೆ ಇರಲಿ ಮನೆಗೆ ಒಬ್ಬನೇ ಮಗನಾಗಿದ್ದ ರಂಜಾನ್, ಬೀದಿ ಹೆಣವಾಗಿದ್ದು ನಿಜಕ್ಕೂ ದುರಂತವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್