ತೃತೀಯ ಲಿಂಗಿ ಹತ್ಯೆ ಪ್ರಕರಣ; ಓರ್ವ ಮಹಿಳೆ ಬಂಧನ, ಹತ್ಯೆಗೆ ಕಾರಣವೇನು ಗೊತ್ತಾ?

ಇದೇ ಮೇ. 3ರಂದು ಜೆ.ಬಿ ನಗರ ಪೊಲೀಸ್ ಠಾಣಾ(JB Nagar Police Station) ವ್ಯಾಪ್ತಿಯ ಮನೆಯೊಂದರಲ್ಲಿ ಮಂಜಿ ಬಾಯ್ ಅಲಿಯಾಸ್​ ಮಂಜ ನಾಯ್ಕ್ (42) ಎಂಬ ತೃತೀಯ ಲಿಂಗಿ ಕೊಲೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಹತ್ಯೆಗೆ ಕಾರಣ ಬಿಚ್ಚಿಟ್ಟಿದ್ದಾರೆ.

ತೃತೀಯ ಲಿಂಗಿ ಹತ್ಯೆ ಪ್ರಕರಣ; ಓರ್ವ ಮಹಿಳೆ ಬಂಧನ, ಹತ್ಯೆಗೆ ಕಾರಣವೇನು ಗೊತ್ತಾ?
ಮೃತ ತೃತೀಯ ಲಿಂಗಿ, ಕೊಲೆ ಆರೋಪಿ ಪ್ರೇಮ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:May 10, 2024 | 4:52 PM

ಬೆಂಗಳೂರು, ಮೇ.10: ತೃತೀಯ ಲಿಂಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರೇಮ (51) ಆರೋಪಿ ಮಹಿಳೆ. ಇದೇ ಮೇ. 3ರಂದು ಜೆ.ಬಿ ನಗರ ಪೊಲೀಸ್ ಠಾಣಾ(JB Nagar Police Station) ವ್ಯಾಪ್ತಿಯ ಮನೆಯೊಂದರಲ್ಲಿ ಮಂಜಿ ಬಾಯ್ ಅಲಿಯಾಸ್​ ಮಂಜ ನಾಯ್ಕ್ (42) ಎಂಬ ತೃತೀಯ ಲಿಂಗಿ ಕೊಲೆಯಾಗಿತ್ತು. ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಶವದ ಕುರಿತು ಪೊಲೀಸರು ಮೊದಲಿಗೆ UDR ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.

ತನಿಖೆ ವೇಳೆ ಸತ್ಯಾಂಶ ಬಯಲು

ನಂತರ ಮರಣೋತ್ತರ ಪರೀಕ್ಷೆ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಯಲಾಗಿದೆ. ಈ ಹಿನ್ನೆಲೆ ತೃತೀಯ ಲಿಂಗಿ ಜೊತೆ ವಾಸವಿದ್ದ ಮಹಿಳೆ ಪ್ರೇಮ ಎಂಬುವವರನ್ನು ಬಂಧಿಸಿದ್ದ ಪೊಲೀಸರು, ತಮ್ಮ ಭಾಷೆಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿ ಮಹಿಳೆ ಕೊಲೆಗೆ ಕಾರಣ ಬಿಚ್ಚಿಟ್ಟಿದ್ದಾರೆ. ‘ಪತಿ ಮೃತರಾದ ಮೇಲೆ 20 ವರ್ಷದಿಂದ ತೃತೀಯ ಲಿಂಗಿಯ ಜೊತೆ ವಾಸವಿದ್ದ ಮಹಿಳೆ ಪ್ರೇಮಾ, ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು. ಇತ್ತ ಮೃತ ಮಂಜಿ ಬಾಯ್, ಕಂಪನಿಯೊಂದರ ಕ್ಯಾಂಟಿನ್​ನಲ್ಲಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ:ಗಂಡ-ಹೆಂಡತಿ ಜಗಳ: ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಪತ್ನಿಯ ಭೀಕರ ಕೊಲೆ

ಇನ್ನು ಹೀಗಿದ್ದವರ ನಡುವೆ ಕಳೆದ ಏಪ್ರಿಲ್​.26 ರಂದು ಮನೆಯಲ್ಲಿ ಇಬ್ಬರ ನಡುವೆ ಜಗಳ ಆಗಿತ್ತು. ಈ ವೇಳೆ ಮಹಿಳೆಗೆ ಚಾಕುವಿನಿಂದ ಚುಚ್ಚಲು ತೃತೀಯ ಲಿಂಗಿ ಮುಂದಾಗಿದ್ದರು. ಇದರಿಂದ ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರೇಮ, ಟವಲ್​ ತೆಗೆದುಕೊಂಡು ಮಂಜಿಬಾಯ್ ಕುತ್ತಿಗೆಯನ್ನು ಬೀಗಿಯಾಗಿ ಬಿಗಿದು ಕೊಲೆ ಮಾಡಿದ್ದಾರೆ. ಸದ್ಯ ಆರೋಪಿತೆ ಪ್ರೇಮರನ್ನು ಬಂಧಿಸಿ, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪೂರ್ವ ಡಿಸಿಪಿ ಕುಲದೀಪ್ ಜೈನ್ ಹೇಳಿದ್ದಿಷ್ಟು

ಇನ್ನು ಘಟನೆ ಕುರಿತು ಮಾತನಾಡಿದ ಡಿಸಿಪಿ ಕುಲದೀಪ್​ ಜೈನ್​, ‘ಮೇ. 3 ನೇ ತಾರೀಕು ಮುರುಗೇಶ್ ಪಾಳ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಜು ನಾಯ್ಕ್ ಎಂಬುವರ ಮೃತದೇಹ ಪತ್ತೆಯಾಗಿತ್ತು. ಅನುಮಾನಸ್ಪದ ಸಾವು ಎಂದು ಕೇಸ್ ದಾಖಲಿಸಿಕೊಂಡಿದ್ದೇವೂ, ಬಳಿಕ ಮರಣೋತ್ತರ ಪರೀಕ್ಷೆ ಆಧರಿಸಿ ಕೊಲೆ ಕೇಸ್ ದಾಖಲಿಸಲಾಗಿತ್ತು. ಬಳಿಕ ಮಂಜು ನಾಯ್ಜ್ ಜೊತೆಗಿದ್ದ ಪ್ರೇಮ ಎಂಬುವವರನ್ನು ಪತ್ತೆ ಹಚ್ಚಿ ವಿಚಾರಣೆ ಮಾಡಿದ್ವಿ, ಈ ವೇಳೆ ಕೋಪದಲ್ಲಿ ಬೈಯ್ತಿದ್ದ, ಹಿಂಸೆ ಕೊಡ್ತಿದ್ದ, ಕೊಲೆ ಮಾಡಲು ಮುಂದಾಗಿದ್ದ. ಅಷ್ಟೇ ಅಲ್ಲದೆ 20 ವರ್ಷದಿಂದ ಜೊತೆಗಿದ್ದರೂ ಸಂಶಯ ಪಡೋದು ಸೇರಿದಂತೆ ಇತರ ವಿಚಾರಕ್ಕೆ ಜಗಳ ಆಗುತ್ತಿತ್ತು. ಇದರಿಂದ ಪ್ರೇಮ ಉಸಿರುಗಟ್ಟಿಸಿ ಮಂಜು ನಾಯ್ಕ್ ರನ್ನ ಕೊಲೆ ಮಾಡಿದ್ದಾರೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Fri, 10 May 24

ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್