ಅಮ್ಮ ಮತ್ತೆ ಅಂಕಲ್ ಸೇರಿ ಅಪ್ಪನನ್ನು ಡ್ರಮ್​​ನೊಳಗೆ ಹಾಕುವುದನ್ನು ನಾನು ನೋಡಿದ್ದೆ ಎಂದ ಮಗ

ಅಮ್ಮ ಮತ್ತೆ ಅಂಕಲ್ ಸೇರಿ ಅಪ್ಪನನ್ನು ಡ್ರಮ್​​ನೊಳಗೆ ಹಾಕುವುದನ್ನು ನಾನು ನೋಡಿದ್ದೇನೆ ಎಂದು ಮೃತ ವ್ಯಕ್ತಿಯ 8 ವರ್ಷದ ಮಗ ಹೇಳಿಕೆ ನೀಡಿದ್ದು, ಘಟನೆಗೆ ದೊಡ್ಡ ತಿರುವು ಸಿಕ್ಕಂತಾಗಿದೆ. ರಾಜಸ್ಥಾನದ ಅಲ್ವಾರ್​​ನಲ್ಲಿ ಬಾಡಿಗೆ ಮನೆಯೊಂದರ ತಾರಸಿ ಮೇಲೆ ಡ್ರಮ್​​ನಲ್ಲಿ ಕೊಳೆತ ಶವವೊಂದು ಪತ್ತೆಯಾಗಿತ್ತು. ಆ ಮನೆಯಲ್ಲಿ ಯಾರೂ ಕೂಡ ಕಾಣಿಸಿರಲಿಲ್ಲ, ಆ ಕಡೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು

ಅಮ್ಮ ಮತ್ತೆ ಅಂಕಲ್ ಸೇರಿ ಅಪ್ಪನನ್ನು ಡ್ರಮ್​​ನೊಳಗೆ ಹಾಕುವುದನ್ನು ನಾನು ನೋಡಿದ್ದೆ ಎಂದ ಮಗ
ಡ್ರಮ್
Image Credit source: NDTV

Updated on: Aug 20, 2025 | 9:31 AM

ಅಲ್ವಾರ್, ಆಗಸ್ಟ್​ 20: ಅಮ್ಮ ಮತ್ತೆ ಅಂಕಲ್ ಸೇರಿ ಅಪ್ಪನನ್ನು ಡ್ರಮ್​​ನೊಳಗೆ ಹಾಕುವುದನ್ನು ನಾನು ನೋಡಿದ್ದೇನೆ ಎಂದು ಮೃತ ವ್ಯಕ್ತಿಯ 8 ವರ್ಷದ ಮಗ ಹೇಳಿಕೆ ನೀಡಿದ್ದು, ಹಂಸರಾಜ್ ಕೊಲೆ (Murder) ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಂತಾಗಿದೆ. ರಾಜಸ್ಥಾನದ ಅಲ್ವಾರ್​​ನಲ್ಲಿ ಬಾಡಿಗೆ ಮನೆಯೊಂದರ ತಾರಸಿ ಮೇಲೆ ಡ್ರಮ್​​ನಲ್ಲಿ ಕೊಳೆತ ಶವವೊಂದು ಪತ್ತೆಯಾಗಿತ್ತು.

ಆ ಮನೆಯಲ್ಲಿ ಯಾರೂ ಕೂಡ ಕಾಣಿಸಿರಲಿಲ್ಲ, ಆ ಕಡೆಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಮನೆಯಲ್ಲಾ ಹುಡುಕಿ ಬಳಿಕ ತಾರಸಿ ಮೇಲೆ ಬಂದಾಗ ಅಲ್ಲಿ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್​​ ಇತ್ತು. ಅದನ್ನು ಪೂರ್ತಿಯಾಗಿ ಸೀಲ್ ಮಾಡಲಾಗಿತ್ತು. ತೆರೆದು ನೋಡಿದಾಗ ಕೊಳೆತ ಶವವಿತ್ತು. ಅದು ಆ ಮನೆ ಮಾಲೀಕನದ್ದು ಎಂಬುದು ತಿಳಿದುಬಂದಿತ್ತು.

ಆದರೆ ಮಕ್ಕಳು ಮತ್ತು ಪತ್ನಿ ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಒಂದೊಮ್ಮೆ ಅವರನ್ನೂ ಕೂಡ ಇದೇ ರೀತಿ ಕೊಲೆ ಮಾಡಲಾಗಿದೆಯೇ ಎನ್ನುವ ಅನುಮಾನವೂ ಕಾಡಿತ್ತು. ಆದರೆ ಈಗ ಬಾಲಕ ಹೇಳಿರುವ ಮಾಹಿತಿಯು ಪ್ರಕರಣವನ್ನು ಬೇರೆಡೆ ಕರೆದೊಯ್ದಿದೆ.

ಮತ್ತಷ್ಟು ಓದಿ: ಜೈಪುರ: ಮನೆಯ ತಾರಸಿ ಮೇಲೆ ಡ್ರಮ್​​ನಲ್ಲಿತ್ತು ಮನೆ ಮಾಲೀಕನ ಶವ, ಹೆಂಡತಿ, ಮಕ್ಕಳು ನಾಪತ್ತೆ

ಬಾಲಕನ ತಾಯಿ, ಆಕೆಯ ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಲೆ ಮಾಡಿ ಡ್ರಮ್​​ನೊಳಗೆ ಹಾಕಿರುವುದನ್ನು ಆತ ದೃಢಪಡಿಸಿದ್ದಾನೆ. ಆ ಮನೆ ಮಾಲೀಕರ ಮಗ ಜಿತೇಂದ್ರ ಶರ್ಮಾ ತಾಯಿ ಸುನಿತಾ ಹಾಗೂ ತನ್ನ ತಂದೆ ಮೂವರು ಒಟ್ಟಿಗೆ ಕೂತು ಕುಡಿಯುತ್ತಿದ್ದರು. ಅಂದು ಅಂಕಲ್ ಸ್ವಲ್ಪ ಜಾಸ್ತಿಯೇ ಕುಡಿದಿದ್ದರು. ಕುಡಿದ ಮತ್ತಿನಲ್ಲಿ ತನ್ನ ತಂದೆ ತಾಯಿಗೆ ಹೊಡೆಯಲು ಶುರು ಮಾಡಿದ್ದರು.

ಆಗ ಜೀತೇಂದ್ರ ಅದನ್ನು ತಪ್ಪಿಸಲು ಹೋಗಿದ್ದರು. ನಂತರ ಜೀತೇಂದ್ರ ತನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದ. ನಂತರ ಮಗ ಹರ್ಷಲ್​​ನಿಗೆ ಮಲಗಲು ಒಳಗೆ ಹೋಗುವಂತೆ ಸೂಚಿಸಿದ್ದರು, ಹರ್ಷಲ್​ಗೆ ಎಚ್ಚರವಾದಾಗ ಪಕ್ಕದಲ್ಲಿ ತಂದೆ ಮಲಗಿದ್ದರು.

ಅವರನ್ನು ನೋಡಿ ಮತ್ತೆ ಹರ್ಷಲ್ ನಿದ್ದೆಗೆ ಜಾರಿದ್ದರು. ಆದರೆ ಮತ್ತೆ ಎಚ್ಚರವಾದಾಗ ತಾಯಿ, ಮತ್ತೆ ಅಂಕಲ್ ಅಲ್ಲೇ ಇದ್ದರು ಎಂದು ಹೇಳಿದ್ದಾನೆ. .ಮದ್ಯದ ಅಮಲಿನಲ್ಲಿದ್ದ ಹಂಸರಾಜ್​​ನನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ ಹಾಗೆಯೇ ಬೇಗ ಶವ ಕೊಳೆತುಹೋಗಬೇಕೆಂದು ದೇಹದ ಮೇಲೆ ಉಪ್ಪು ಸಿಂಪಡಿಸಿದ್ದರು.ಕೊಲೆಯ ಬಳಿಕ ಎಲ್ಲರೂ ಊರು ಬಿಟ್ಟು ಓಡಿಹೋಗಿದ್ದರು.

ಇದೇ ರೀತಿಯ ಘಟನೆ ಸ್ವಲ್ಪ ತಿಂಗಳ ಹಿಂದೆ ಮೀರತ್​​ನಲ್ಲಿ ನಡೆದಿತ್ತು. ಒಬ್ಬ ವ್ಯಕ್ತಿಯನ್ನು ಆಕೆಯ ಪತ್ನಿ, ಪ್ರಿಯಕರ ಸೇರಿ ಕೊಂದು ಡ್ರಮ್​​ನೊಳಗೆ ಹಾಕಿ, ಸಿಮೆಂಟ್​ ತುಂಬಿದ್ದರು. ಮಗಳು ಈ ವಿಷಯವನ್ನು ಬಹಿರಂಗಪಡಿಸಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ