AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಬಿರಿಯಾನಿ ತಿನ್ನುತ್ತಿರುವಾಗಲೇ ಯುವಕನ ಕೊಲೆ; 18 ಗಂಟೆಯಲ್ಲೇ ಆರೋಪಿಗಳ ಬಂಧನ

ಗದಗ ಜಿಲ್ಲೆಯ ನರಗುಂದದಲ್ಲಿ ಭೀಕರ ಕೊಲೆ ನಡೆದಿದ್ದು, 22 ವರ್ಷದ ಯುವಕ ನನ್ನು ಹೋಟೆಲ್‌ನಲ್ಲಿ ಕೊಚ್ಚಿ ಕೊಲೆ ಮಾಡಲಾಗಿದೆ. ಪೊಲೀಸರು 18 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೊಲೆ ಹಿಂದಿನ ಕಾರಣ ಜಾತ್ರೆಯಲ್ಲಿ ನಡೆದ ಜಗಳವೆಂದು ಪೊಲೀಸರು ಶಂಕಿಸಿದ್ದಾರೆ. ಘಟನೆಯಿಂದ ಇಡೀ ಪಟ್ಟಣ ಬೆಚ್ಚಿಬಿದ್ದಿದೆ.

ಗದಗ: ಬಿರಿಯಾನಿ ತಿನ್ನುತ್ತಿರುವಾಗಲೇ ಯುವಕನ ಕೊಲೆ; 18 ಗಂಟೆಯಲ್ಲೇ ಆರೋಪಿಗಳ ಬಂಧನ
ಕೊಲೆ ನಡೆದ ಸ್ಥಳ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 15, 2025 | 10:01 AM

Share

ಗದಗ, ಆಗಸ್ಟ್​ 15: ಈಗ ಶ್ರಾವಣ ಮಾಸ. ಮನೆಯಲ್ಲಿ ಮಾಂಸಹಾರ ಸೇವನೆ ಮಾಡಬಾರದು ಅಂತಾ ಆ ಯುವಕ (young boy) ಆಚೆ ಹೋಟೆಲ್​ಗೆ ಹೋಗಿದ್ದ. ಬಿರಿಯಾನಿ ಆರ್ಡರ್ ಮಾಡಿ ಊಟ ಮಾಡುತ್ತಿದ್ದ. ಅಷ್ಟರಲ್ಲಿ ಎಂಟ್ರಿಕೊಟ್ಟ ಹಂತಕರು ರಕ್ತ ಹರಿಸಿದ್ದಾರೆ. ರಕ್ತದಲ್ಲಿ ಮಡುವಿನಲ್ಲಿ ಬಿದ್ದು ವಿಲವಿಲ ಅಂತ ಒದ್ದಾಡುತ್ತಿದ್ದರೂ ಅಮಾನುಷವಾಗಿ ಕೊಲೆ (kill) ಮಾಡಿದ್ದಾರೆ. ಭೀಕರ ಘಟನೆಗೆ ಇಡೀ ನರಗುಂದ ಪಟ್ಟಣವೇ ಬೆಚ್ಚಿ ಬಿದ್ದಿದೆ.

ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಬುಧವಾರ ನಡೆದ ಕೊಲೆ ಪಟ್ಟಣವನ್ನೇ ಬೆಚ್ಚಿ ಬೀಳಿಸಿದೆ. ಮಧ್ಯಾಹ್ನ 3 ಗಂಟೆಗೆ ಪಟ್ಟಣದ ತಾಜ್ ಬಿರಿಯಾನಿ ಹೋಟೆಲ್​ಗೆ ನುಗ್ಗಿದ್ದ ಮೂವರು ಬಸವರಾಜ್ ಮಮ್ಮಟಗೇರಿ ಎಂಬ 22 ವರ್ಷದ ಯುವಕನನ್ನ ಕೊಚ್ಚಿ ಕೊಲೆ ಮಾಡಿದ್ದಾರೆ. ಬಿರಿಯಾನಿ ಹೋಟೆಲ್​ಗೆ ನುಗ್ಗಿದ್ದ ಮೂವರು ದುಷ್ಕರ್ಮಿಗಳು ಬಸವರಾಜ್ ಕಣ್ಣಿಗೆ ಖಾರದಕ ಪುಡಿ ಎರಚಿದ್ದಾರೆ. ಉರಿಯಿಂದ ಬಿದ್ದು ಒದ್ದಾಡ್ತಿದ್ದವನಿಗೆ ಸುತ್ತಿಗೆಯಿಂದ ಹೊಡೆದು, ಕೊಯ್ತಾದಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ.

18 ಗಂಟೆಯಲ್ಲೇ ಆರೋಪಿಗಳ ಬಂಧನ

ರಕ್ತದ ಮಡುವಿನಲ್ಲಿ ಒದ್ದಾಡಿ, ಬಸವರಾಜ್ ಪ್ರಾಣ ಬಿಟ್ಟಿದ್ದಾನೆ. ವಿಷಯ ಗೊತ್ತಾಗ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನರಗುಂದ ಪೊಲೀಸರು ಪರಿಶೀಲನೆ ನಡೆಸಿದರು. ಎಸ್​ಪಿ ರೋಹನ್ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಭೀಭತ್ಸ ಘಟನೆಯ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು 18 ಗಂಟೆಯಲ್ಲೇ ಆರೋಪಿಗಳನ್ನ ಲಾಕ್ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹಾಡಹಗಲೇ ಲೇಡಿಸ್ ಪಿಜಿಗೆ ನುಗ್ಗಿದ ಖದೀಮ; ಚಾಕು ತೋರಿಸಿ ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ

ಕಳೆದ 15 ದಿನಗಳ ಹಿಂದೆ ನರಗುಂದದ ಪತ್ರೀವನ ಮಠದ ಜಾತ್ರೆ ನಡೆದಿತ್ತು. ಜಾತ್ರೆಯಲ್ಲಿ ಬಸವರಾಜ್ ಸಹೋದರ ಭೀಮಪ್ಪನ ಜೊತೆ ನರಗುಂದ ಪಟ್ಟಣದ ರಾಚಯ್ಯ ಏರಿಯಾದ ಮಹಾಂತೇಶ್ ಎಂಬಾತ ಗಲಾಟೆ ತೆಗೆದಿದ್ದ. ವಿಷ್ಯ ಗೊತ್ತಾಗಿ ಸಂಜೆ ಮಹಾಂತೇಶ್ ನನ್ನ ಕರೆಸಿ ಬಸವರಾಜ್ ಹೊಡೆದು ಕಳೆಸಿದ್ದರಂತೆ. ಇದರಿಂದ ಕೋಪಗೊಂಡಿದ್ದ ಮಹಾಂತೇಶ್ ಆ್ಯಂಡ್ ಗ್ಯಾಂಗ್ ಗಲಾಟೆಗೆ ಮುಂದಾಗಿತ್ತು. ಹಿಂದಿನಿಂದಲೂ ರಾಚಯ್ಯ ಏರಿಯಾ, ಕಸಬಾ ಏರಿಯಾ ಹುಡಗರ ಮಧ್ಯೆ ಸಣ್ಣಪುಟ್ಟ ಗಲಾಟೆ ನಡೆದಿತ್ತಂತೆ. ಜಾತ್ರೆಯ ಗಲಾಟೆಯ ನಂತ್ರ ಎರಡೂ ಏರಿಯಾ ಯುವಕರನ್ನ ಕೂರಿಸಿ ಹಿರಿಯರು ರಾಜಿ ಸಂಧಾನ ಮಾಡಿಸಿದ್ದರು.

ಕೆಲ ಕಾಲ ಎರಡು ಗುಂಪು ತಣ್ಣಗಾಗಿದ್ದವು. ಈ ಮಧ್ಯೆ ಗಣೇಶ ಹಬ್ಬದ ನಂತ್ರ ಬಸವರಾಜ್, ಮಹಾಂತೇಶ್ ಮೇಲೆ ಹಲ್ಲೆ ಮಾಡಲಿದ್ದಾನೆ ಅನ್ನೋ ಸುದ್ದಿ ಎದ್ದಿತ್ತಂತೆ. ಹೀಗಾಗಿ ಮಹಾಂತೇಶ್ ತನ್ನ ಸಹಚರರಾದ ರಾಚನಗೌಡ ಅಲಿಯಾಸ್ ಆನಂದ್, ಚಂತದ್ರಶೇಖರ್ ಅಲಿಯಾಸ್ ಚಂದನ್ ಜೊತೆಗೆ ಸೇರಿ ಬಸವರಾಜನನ್ನು ಎತ್ತೋದಕ್ಕೆ ಪ್ಲ್ಯಾನ್ ಮಾಡ್ತಾರೆ. ಬುಧವಾರ ಮಧ್ಯಾಹ್ನ ಊಟಕ್ಕೆ ಹೋಗಿದ್ದ ಬಸವರಾಜ್​ನಿಗೆ ಕಾಲ್ ಮಾಡಿದ್ದ ಮಹಾಂತೇಶ್ ಲೊಕೇಷನ್ ತಿಳಿದುಕೊಂಡಿದ್ದ. ನಂತರ ಆನಂದ್, ಚಂದನ್ ಜೊತೆಗೆ ಎಂಟ್ರಿಕೊಟ್ಟಿದ್ದ ಮಹಾಂತೇಶ್, ಸುತ್ತಿಗೆಯಿಂದ ಹಲ್ಲೆ ಮಾಡಿ ಕೊಯ್ತದಿಂದ ಕುತ್ತಿಗೆ, ಮುಖಕ್ಕೆ ಹೊಡೆದು ಕೊಲೆ ಮಾಡಿದ್ದರು.

ಇನ್ನೂ ರಾಚನಗೌಡ ಅಲಿಯಾಸ್ ಆನಂದ್ ತಾಯಿ ಮಗನ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥ ಮಗ ಯಾರಿಗೂ ಬೇಡ. ಮಗನ ಮುಖ ನೋಡಲ್ಲ. ಅವನಿಗೆ ತಕ್ಕ ಶಿಕ್ಷೆ ಆಗಲಿ ಅಂತ ಪುತ್ರ ಕೃತ್ಯಕ್ಕೆ ಹೆತ್ತ ತಾಯಿ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಮಧ್ಯರಾತ್ರಿ ಎಟಿಎಂ ಕಳವು ಮಾಡುತ್ತಿದ್ದವನ ಹೆಡೆಮುರಿ ಕಟ್ಟಿದ ಪೊಲೀಸ್, ರೋಚಕ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ

ಕೊಲೆಗೆ ಬಳಸಿದ್ದ ಪಲ್ಸರ್ ಬೈಕ್ ಮೇಲೆ ಮದರ್ ಈಸ್ ಕ್ವೀನ್ ಆಫ್ ಎವ್ರಿ ಹೋಮ್ ಅಂತಾ ಬರೆಸಲಾಗಿದೆ. ಅಂದ್ರೆ ತಾಯಿ ಮನೆಯ ರಾಣಿ ಎಂದರ್ಥ. ಏರಿಯಾದಲ್ಲಿ ಹವಾ ಮಾಡ್ಬೇಕು, ಫೀಲ್ಡ್​​ನಲ್ಲಿ ನಂದೇ ಆವಾಜ್ ಇರ್ಬೇಕು ಅಂತಾ ಮೆರದಾಡಿದ ಯುವಕರು ಈಗ ಜೈಲು ಸೇರುವಂತಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:58 am, Fri, 15 August 25