ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಖಾಸಗಿ ಬಸ್ ಸೇತುವೆಯಿಂದ ರೈಲ್ವೆ ಹಳಿ ಮೇಲೆ ಬಿದ್ದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ದೌಸಾ ಕಲೆಕ್ಟರೇಟ್ ಸರ್ಕಲ್ ಬಳಿ ಈ ದುರಂತ ಸಂಭವಿಸಿದೆ. ಹರಿದ್ವಾರದಿಂದ 30 ಮಂದಿ ಪ್ರಯಾಣಿಕರೊಂದಿಗೆ ಜೈಪುರಕ್ಕೆ ತೆರಳುತ್ತಿದ್ದ ಬಸ್, ಜೈಪುರ-ದೆಹಲಿ ರೈಲ್ವೆ ಮಾರ್ಗದಲ್ಲಿ ಸ್ಕಿಡ್ ಆಗಿ ರೈಲು ಹಳಿ ಮೇಲೆ ಬಿದ್ದಿದೆ. ಅಪಘಾತದ ನಂತರ ತಕ್ಷಣವೇ ಅವ್ಯವಸ್ಥೆ ಉಂಟಾಯಿತು.
ಸ್ಥಳೀಯರು ತಕ್ಷಣ ಧಾವಿಸಿ ರಕ್ಷಣೆ ಮಾಡಿದ್ದಾರೆ, ಕೆಲ ನಿಮಿಷದಲ್ಲೇ ಪೊಲೀಸರು, ಆ್ಯಂಬುಲೆನ್ಸ್ ಸ್ಥಳಕ್ಕೆ ಆಗಮಿಸಿತ್ತು. ಗಾಯಗೊಂಡ ಸಂತ್ರಸ್ತರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವರದಿಗಳ ಪ್ರಕಾರ, ಗಾಯಗೊಂಡ ಹಲವರ ಪರಿಸ್ಥಿತಿ ಗಂಭೀರವಾಗಿದೆ. ಗಂಭೀರ ಸ್ಥಿತಿಯಲ್ಲಿದ್ದವರನ್ನು ಜೈಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
#WATCH Rajasthan: Four people died, and several injured after a bus lost its control and fell on the railway track near Dausa Collectorate Circle. All the injured have been taken to the hospital. (05/11) pic.twitter.com/Xge5qLT9My
— ANI (@ANI) November 6, 2023
ಅಪಘಾತದ ನಂತರ, 28 ಜನರನ್ನು ಆಸ್ಪತ್ರೆಗೆ ಕರೆತರಲಾಯಿತು, ಅದರಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಮತ್ತಷ್ಟು ಓದಿ: ಹಳ್ಳಕ್ಕೆ ಬಿದ್ದ ಟೂರಿಸ್ಟ್ ಬಸ್: ಓರ್ವ ಮಹಿಳೆ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
ಲುಧಿಯಾನದಲ್ಲಿ ಟ್ರಕ್‌ಗೆ ಕಾರು ಡಿಕ್ಕಿ: ನಾಲ್ವರು ಸಾವು
ಭಾನುವಾರ ಪಂಜಾಬ್‌ನ ಮೋಗಾ ಜಿಲ್ಲೆಯ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವರ ಮತ್ತು ಅವರ 4 ವರ್ಷದ ಬಾಲಕ ಸೇರಿದಂತೆ ಕನಿಷ್ಠ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು 23 ವರ್ಷದ ಸುಖ್ವಿಂದರ್ ಸಿಂಗ್, 4 ವರ್ಷದ ಅಂಶದೀಪ್ ಕೌರ್, ಅಂಗ್ರೇಜ್ ಸಿಂಗ್ ಮತ್ತು ಸಿಮ್ರಾನ್ ಎಂದು ಗುರುತಿಸಲಾಗಿದೆ.
Published On - 7:54 am, Mon, 6 November 23