AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾದೇವ ಬೆಟ್ಟಿಂಗ್​ ಆ್ಯಪ್ ಸೇರಿ ಇತರೇ 21 ಆ್ಯಪ್​ ನಿಷೇಧ: ಕೇಂದ್ರ ಸರ್ಕಾರದ ಮಹತ್ವದ ಆದೇಶ

Mahadev Online Betting App: ಮಹಾದೇವ ಬೆಟ್ಟಿಂಗ್​ ಆ್ಯಪ್​ ನಿಷೇಧಗೊಳಿಸಿ ಕೇಂದ್ರ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ. ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದು, ಈ ಮಧ್ಯೆ ಮಹದೇವ್ ಬುಕ್ ಆನ್‌ಲೈಲ್​ ಸೇರಿದಂತೆ ಇತರೆ 21 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ವಿರುದ್ಧ ಐಟಿ ಸಚಿವಾಲಯ ಭಾನುವಾರ ನಿರ್ಬಂಧ ಹೇರಿದೆ.

ಮಹಾದೇವ ಬೆಟ್ಟಿಂಗ್​ ಆ್ಯಪ್ ಸೇರಿ ಇತರೇ 21 ಆ್ಯಪ್​ ನಿಷೇಧ: ಕೇಂದ್ರ ಸರ್ಕಾರದ ಮಹತ್ವದ ಆದೇಶ
ಕೇಂದ್ರ ಸರ್ಕಾರ
ಗಂಗಾಧರ​ ಬ. ಸಾಬೋಜಿ
| Edited By: |

Updated on:Nov 06, 2023 | 9:47 AM

Share

ಮಹಾದೇವ ಬೆಟ್ಟಿಂಗ್​ ಆ್ಯಪ್ (Mahadev Betting App)​ ನಿಷೇಧಗೊಳಿಸಿ ಕೇಂದ್ರ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ. ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದು, ಈ ಮಧ್ಯೆ ಮಹದೇವ್ ಬುಕ್ ಆನ್‌ಲೈಲ್​ ಸೇರಿದಂತೆ ಇತರೆ 21 ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ವಿರುದ್ಧ ಐಟಿ ಸಚಿವಾಲಯ ಭಾನುವಾರ ನಿರ್ಬಂಧ ಹೇರಿದೆ. ಇಡಿ ಶಿಫಾರಸಿನ ನಂತರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ.

ಈ ಕುರಿತಾಗಿ ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿಕೆ ನೀಡಿದ್ದು, “ಸೆಕ್ಷನ್ 69 ಎ ಐಟಿ ಕಾಯಿದೆ ಅಡಿಯಲ್ಲಿ ವೆಬ್‌ಸೈಟ್, ಆ್ಯಪ್ ಅನ್ನು ನಿಷೇಧಿಸುವ ಎಲ್ಲಾ ಅಧಿಕಾರವನ್ನು ಛತ್ತೀಸ್‌ಗಢ ಸರ್ಕಾರ ಹೊಂದಿದೆ. ಆದರೆ, ಅವರು ಹಾಗೆ ಮಾಡಿಲ್ಲ. ಕಳೆದ 1.5 ವರ್ಷಗಳಿಂದ ತನಿಖೆ ನಡೆಯುತ್ತಿದ್ದು, ರಾಜ್ಯ ಸರ್ಕಾರದಿಂದ ಅಂತಹ ಯಾವುದೇ ವಿನಂತಿಯನ್ನು ಮಾಡಿಲ್ಲ. ವಾಸ್ತವವಾಗಿ, ED ಯಿಂದ ಮೊದಲ ಮತ್ತು ಏಕೈಕ ಮನವಿ ಸ್ವೀಕರಿಸಲಾಗಿದೆ. ಅದರ ಆಧಾರದ ಮೇಲೆ ಕಾರ್ಯನಿರ್ವಹಿಸಲಾಗಿದೆ ಎಂದರು.

ಇದನ್ನೂ ಓದಿ: ಮಹದೇವ್ ಬೆಟ್ಟಿಂಗ್ ಪ್ರಕರಣ: ₹417 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇಡಿ

ಗಮನಾರ್ಹ ಸಂಗತಿಯೆಂದರೆ, ಮಹಾದೇವ್ ಬೆಟ್ಟಿಂಗ್​ ಆ್ಯಪ್​ ಮಾಲೀಕರನ್ನು ಆಗಸ್ಟ್‌ನಲ್ಲಿ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 19 ರ ಅಡಿಯಲ್ಲಿ ಬಂಧಿಸಲಾಗಿದೆ. ಕಳೆದ ವಾರ, ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್‌ಗೆ ಸುಮಾರು 508 ಕೋಟಿ ರೂ. ನೀಡಿರುವ ಕುರಿತು ಫೋರೆನ್ಸಿಕ್ ವಿಶ್ಲೇಷಣೆ ಮತ್ತು ‘ಕ್ಯಾಶ್ ಕೊರಿಯರ್’ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಇಡಿ ಹೇಳಿಕೊಂಡಿದೆ.

ಇದನ್ನೂ ಓದಿ: ಅದ್ದೂರಿ ಮದುವೆ, ಬಾಲಿವುಡ್ ಸೆಲಬ್ರಿಟಿಗಳ ಪಾತ್ರ, ಪಾಕಿಸ್ತಾನದ ನಂಟು; ಬೆಟ್ಟಿಂಗ್ ಮಾದೇವನ ಕರ್ಮಕಾಂಡ

ಮಹಾದೇವ್ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಲಾದ ಹಣ ವರ್ಗಾವಣೆ ಜಾಲಗಳ ವಿರುದ್ಧ ತನಿಖಾ ಸಂಸ್ಥೆ ರಾಜ್ಯದಲ್ಲಿ ದಾಳಿ ನಡೆಸಿದ ಒಂದು ದಿನದ ನಂತರ ಈ ವಿಚಾರಗಳು ಇದೀಗ ಬೆಳಕಿಗೆ ಬಂದಿವೆ.

ಜಾರಿ ನಿರ್ದೇಶನಾಲಯದ ಪ್ರಕಾರ, ಗಮನಾರ್ಹ ಮೊತ್ತದ ನಗದನ್ನು ತಲುಪಿಸುವ ನಿರ್ದಿಷ್ಟ ಉದ್ದೇಶದೊಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ಕಳುಹಿಸಲಾಗಿದೆ ಎಂದು ಬಂಧಿತ  ಅಸಿಂ ದಾಸ್​​ ವಿಚಾರಣೆ ವೇಳೆ ಹೇಳಿದ್ದಾನೆ. ದಾಸ್ ವಿಚಾರಣೆಯ ಸಂದರ್ಭದಲ್ಲಿ, ರಾಜ್ಯದಲ್ಲಿ ಮುಂಬರುವ ಚುನಾವಣಾ ವೆಚ್ಚವನ್ನು ಬೆಂಬಲಿಸಲು ‘ಬಘೇಲ್‌’ ಎಂದು ಕರೆಯಲ್ಪಡುವ ಪ್ರಮುಖ ರಾಜಕಾರಣಿಗೆ ತಲುಪಿಸುವ ಉದ್ದೇಶದಿಂದ ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್‌ನ ಪ್ರವರ್ತಕರು ತಡೆಹಿಡಿದ ಹಣವನ್ನು ವ್ಯವಸ್ಥೆಗೊಳಿಸಿದ್ದಾರೆ ಎಂದು ಅವರು ತಪ್ಪೊಪ್ಪಿಕೊಂಡಿದ್ದ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:03 pm, Sun, 5 November 23

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?