ಮಹದೇವ್ ಬೆಟ್ಟಿಂಗ್ ಪ್ರಕರಣ: ₹417 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡ ಇಡಿ
Mahadev betting case: ಇಡಿ ಇತ್ತೀಚೆಗೆ ಕೋಲ್ಕತ್ತಾ, ಭೋಪಾಲ್, ಮುಂಬೈ ಮುಂತಾದ ನಗರಗಳಲ್ಲಿ ಮಹಾದೇವ್ ಆ್ಯಪ್ನೊಂದಿಗೆ ಸಂಪರ್ಕ ಹೊಂದಿದ ಮನಿ ಲಾಂಡರಿಂಗ್ ನೆಟ್‌ವರ್ಕ್‌ಗಳ ವಿರುದ್ಧ ವ್ಯಾಪಕ ಶೋಧ ನಡೆಸಿ ದೊಡ್ಡ ಪ್ರಮಾಣದ ದೋಷಾರೋಪಣೆಯ ಸಾಕ್ಷ್ಯಗಳನ್ನು ಪತ್ತೆ ಹಚ್ಚಿದ್ದು, 417 ಕೋಟಿ ರೂಪಾಯಿ ಮೌಲ್ಯದ ಅಪರಾಧದ ಆದಾಯವನ್ನು ವಶಪಡಿಸಿಕೊಂಡಿದೆ ಎಂದ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ದೆಹಲಿ ಸೆಪ್ಟೆಂಬರ್ 15: ಮಹದೇವ್ ಆನ್‌ಲೈನ್ ಬೆಟ್ಟಿಂಗ್ (Mahadev betting case) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ₹417 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ದುಬೈನಿಂದ ಕಾರ್ಯಾಚರಣೆ ನಡೆಸುತ್ತಿದ್ದ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರು ಪ್ರಚಾರ ಮಾಡುತ್ತಿರುವ ಕಂಪನಿಯು ಆನ್‌ಲೈನ್ ಬುಕ್ ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಹೊಸ ಬಳಕೆದಾರರನ್ನು ದಾಖಲಿಸಲು, ಬಳಕೆದಾರರ ಐಡಿಗಳನ್ನು ರಚಿಸಲು ಮತ್ತು ಬೇನಾಮಿ ಬ್ಯಾಂಕ್ ಖಾತೆಗಳ ಲೇಯರ್ಡ್ ವೆಬ್ ಮೂಲಕ ಹಣ ವ್ಯವಹಾರ ಮಾಡಲು ಬಳಸುತ್ತಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಇಡಿ ಇತ್ತೀಚೆಗೆ ಕೋಲ್ಕತ್ತಾ, ಭೋಪಾಲ್, ಮುಂಬೈ ಮುಂತಾದ ನಗರಗಳಲ್ಲಿ ಮಹಾದೇವ್ ಆ್ಯಪ್ನೊಂದಿಗೆ ಸಂಪರ್ಕ ಹೊಂದಿದ ಮನಿ ಲಾಂಡರಿಂಗ್ ನೆಟ್‌ವರ್ಕ್‌ಗಳ ವಿರುದ್ಧ ವ್ಯಾಪಕ ಶೋಧ ನಡೆಸಿ ದೊಡ್ಡ ಪ್ರಮಾಣದ ದೋಷಾರೋಪಣೆಯ ಸಾಕ್ಷ್ಯಗಳನ್ನು ಪತ್ತೆ ಹಚ್ಚಿದ್ದು, 417 ಕೋಟಿ ರೂಪಾಯಿ ಮೌಲ್ಯದ ಅಪರಾಧದ ಆದಾಯವನ್ನು ವಶಪಡಿಸಿಕೊಂಡಿದೆ ಎಂದ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
We have conducted searches against the money laundering networks linked with Mahadev APP in cities like Kolkata, Bhopal, Mumbai etc. and retrieved a large amount of incriminating evidence. We have frozen/seized proceeds of crime worth Rs 417 Crore: Enforcement Directorate pic.twitter.com/OWljWeByMC
— ANI (@ANI) September 15, 2023
ಮಹಾದೇವ್ ಆನ್‌ಲೈನ್ ಬುಕ್ ಆ್ಯಪ್ ಯುಎಇಯ ಕೇಂದ್ರ ಕಚೇರಿಯಿಂದ ನಡೆಸಲ್ಪಡುತ್ತಿದೆ ಎಂದು ಇಡಿ ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
70-30 ಶೇಕಡಾ ಲಾಭದ ಅನುಪಾತದಲ್ಲಿ “ಪ್ಯಾನೆಲ್/ಬ್ರಾಂಚ್‌ಗಳನ್ನು” ಅವರ ತಿಳಿದಿರುವ ಸಹವರ್ತಿಗಳಿಗೆ ಫ್ರಾಂಚೈಸ್ ಮಾಡುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ ಎಂದು ಇಡಿ ಹೇಳಿದೆ.
ಇದನ್ನೂ ಓದಿ: ಪಿಒಕೆಯಲ್ಲಿ ಭಯೋತ್ಪಾದಕರಿಗೆ ಚೀನಾ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆ
ದೊಡ್ಡ ಪ್ರಮಾಣದ ಹವಾಲಾ ಕಾರ್ಯಾಚರಣೆಗಳನ್ನು ಬೇರೆಡೆ ಇರುವ ಖಾತೆಗಳಿಗೆ ಬೆಟ್ಟಿಂಗ್ ಆದಾಯವನ್ನು ಪಡೆಯಲು ಮಾಡಲಾಗುತ್ತದೆ. ಹೊಸ ಬಳಕೆದಾರರು ಮತ್ತು ಫ್ರ್ಯಾಂಚೈಸ್ ಹುಡುಕುವವರನ್ನು ಆಕರ್ಷಿಸಲು ಬೆಟ್ಟಿಂಗ್ ವೆಬ್‌ಸೈಟ್‌ಗಳ ಜಾಹೀರಾತಿಗಾಗಿ ಭಾರತದಲ್ಲಿ ದೊಡ್ಡ ಮೊತ್ತದ ವೆಚ್ಚವನ್ನು ಮಾಡಲಾಗುತ್ತಿದೆ ಎಂದು ಅದು ಹೇಳಿದೆ.
ಕಂಪನಿಯ ಪ್ರವರ್ತಕರು ಛತ್ತೀಸ್‌ಗಢದ ಭಿಲಾಯ್ ಮೂಲದವರು. ಮಹಾದೇವ್ ಆನ್‌ಲೈನ್ ಬುಕ್ ಬೆಟ್ಟಿಂಗ್ ಅಪ್ಲಿಕೇಶನ್ ಅಕ್ರಮ ಬೆಟ್ಟಿಂಗ್ ವೆಬ್‌ಸೈಟ್‌ಗಳನ್ನು ಸಕ್ರಿಯಗೊಳಿಸಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ವ್ಯವಸ್ಥೆ ಮಾಡುವ ಕಂಪನಿ ಆಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Fri, 15 September 23