ಪಿಒಕೆಯಲ್ಲಿ ಭಯೋತ್ಪಾದಕರಿಗೆ ಚೀನಾ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆ
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆ ಚೀನಾ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳಲ್ಲಿರುವ ಉಗ್ರರಿಗೆ ಚೀನಾದಲ್ಲಿ ತಯಾರಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದ ಇಂಟರ್ ಸರ್ವೀಸಸ್ (ಐಎಸ್ಐ)ಒದಗಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಪಾಕ್ ಆಕ್ರಮಿತ ಕಾಶ್ಮೀರ(POK)ದಲ್ಲಿ ಭಯೋತ್ಪಾದಕರಿಗೆ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆ ಚೀನಾ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪಾಕ್ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳಲ್ಲಿರುವ ಉಗ್ರರಿಗೆ ಚೀನಾದಲ್ಲಿ ತಯಾರಾದ ಆಧುನಿಕ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದ ಇಂಟರ್ ಸರ್ವೀಸಸ್ (ಐಎಸ್ಐ)ಒದಗಿಸುತ್ತಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಭಯೋತ್ಪಾದಕರಿಗೆ ನೀಡಲಾಗುತ್ತಿರುವ ಶಸ್ತ್ರಾಸ್ತ್ರಗಳಲ್ಲಿ ಪಿಸ್ತೂಲ್ಗಳು, ಗ್ರೆನೇಡ್ಗಳು, ನೈಟ್ ವಿಷನ್ ಇಕ್ವಿಪ್ಮೆಂಟ್ಗಳು ಸೇರಿವೆ, ಇವುಗಳನ್ನು ಚೀನಾದ ಡ್ರೋನ್ಗಳ ಮೂಲಕ ಭೂಪ್ರದೇಶಕ್ಕೆ ಸಾಗಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೆ, ಭಯೋತ್ಪಾದಕರಿಗೆ ಭೂಪ್ರದೇಶದೊಳಗೆ ನುಸುಳಲು ಸಹಾಯ ಮಾಡಲು ಡಿಜಿಟಲ್ ಮ್ಯಾಪ್ ಶೀಟ್‌ಗಳು ಮತ್ತು ನ್ಯಾವಿಗೇಷನ್ ಸಿಸ್ಟಮ್‌ಗಳನ್ನು ಸಹ ಒದಗಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸುರಕ್ಷಿತ ಸಂವಹನಕ್ಕಾಗಿ ಮತ್ತು ಭಾರತೀಯ ಏಜೆನ್ಸಿಗಳು ತಮ್ಮ ಸಂದೇಶಗಳನ್ನು ಡಿಕೋಡ್ ಮಾಡುವುದನ್ನು ತಡೆಯಲು POK ಮೂಲದ ಭಯೋತ್ಪಾದಕರಿಗೆ ಹೆಚ್ಚು ಎನ್‌ಕ್ರಿಪ್ಟ್ ಮಾಡಲಾದ ಸಂವಹನ ಸಾಧನಗಳನ್ನು ಒದಗಿಸಲಾಗಿದೆ.
ಮತ್ತಷ್ಟು ಓದಿ: Khalistan Terrorist: ಲಾಹೋರ್ನಲ್ಲಿ ಖಲಿಸ್ತಾನಿ ಉಗ್ರ ಪರಮ್ಜಿತ್ ಸಿಂಗ್ನನ್ನು ಗುಂಡಿಕ್ಕಿ ಹತ್ಯೆ
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೀನ್ಯಾದ ನೈರೋಬಿಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಮುಖ ಐಸಿಸ್ ಭಯೋತ್ಪಾದಕ ಸಂಚುಕೋರನನ್ನು ಬಂಧಿಸಿದೆ. ಅರಾಫತ್ ಅಲಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಏಜೆನ್ಸಿಯ ವಕ್ತಾರರು ತಿಳಿಸಿದ್ದಾರೆ.
ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ವಿದೇಶಿ ಮೂಲದ ಇಸ್ಲಾಮಿಕ್ ಸ್ಟೇಟ್ ಮಾಡ್ಯೂಲ್‌ಗಳ ಪಿತೂರಿಯನ್ನು ಬಹಿರಂಗಪಡಿಸುವ ಮತ್ತು ವಿಫಲಗೊಳಿಸುವ ಪ್ರಯತ್ನಗಳಲ್ಲಿ ಎನ್‌ಐಎಗೆ ಸಣ್ಣ ಗೆಲುವು ಸಿಕ್ಕಂತಾಗಿದೆ.
ಅಲಿ 2020 ರಿಂದ ಐಸಿಸ್ ಪ್ರಚಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಮತ್ತು ಭಯೋತ್ಪಾದಕ ಕೃತ್ಯಗಳನ್ನು ಯೋಜಿಸಿದ್ದ ಈ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:25 pm, Fri, 15 September 23