AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಸಿನಿಮಾ ಮಾದರಿಯಲ್ಲಿ ಭಾರೀ ಚಿನ್ನಾಭರಣ ಕಳ್ಳತನ, ಕುಕ್ಕರ್​​ಗೆ ಹಾಕಿ ಹೊಳಪು ನೀಡುತ್ತೇವೆ ಎಂದಿದ್ದರು ಆಗಂತಕರು!

ಚಿನ್ನಾಭರಣ ತಂದುಕೊಟ್ಟರೆ ಅದನ್ನೂ ಹೊಳೆಯುವಂತೆ ಮಾಡಿಕೊಡುತ್ತೇವೆ ಎಂದು ಪುಸಲಾಯಿಸಿದ್ದಾರೆ. ಇದರಿಂದ ಮನವರಿಕೆಯಾದ ರಮೇಶ್ 25 ಚಿನ್ನಾಭರಣಗಳನ್ನು ತಂದು ಇಬ್ಬರು ಯುವಕರಿಗೆ ನೀಡಿದ್ದಾರೆ. ಕುಕ್ಕರ್ ತರುವುದಾಗಿ ಹೇಳಿದ ಯುವಕರು, ರಮೇಶ್ ಕಣ್ಣೆದುರೇ ಕುಕ್ಕರ್ ನೊಳಕ್ಕೆ ಚಿನ್ನಾಭರಣಗಳನ್ನು ಹಾಕಿದ್ದಾರೆ. ಬಳಿಕ ಅರಿಶಿನ ತರಬೇಕು ಎಂದಿದ್ದಾರೆ. ಅದಕ್ಕೆ ರಮೇಶ್ ಮನೆಯೊಳಗೆ ಹೋಗಿದ್ದಾರೆ. ಜಸ್ಟ್​ ಆ ವೇಳೆಯೇ

ತೆಲುಗು ಸಿನಿಮಾ ಮಾದರಿಯಲ್ಲಿ ಭಾರೀ ಚಿನ್ನಾಭರಣ ಕಳ್ಳತನ, ಕುಕ್ಕರ್​​ಗೆ ಹಾಕಿ ಹೊಳಪು ನೀಡುತ್ತೇವೆ ಎಂದಿದ್ದರು ಆಗಂತಕರು!
ತೆಲುಗು ಸಿನಿಮಾ ಮಾದರಿಯಲ್ಲಿ ಭಾರೀ ಚಿನ್ನಾಭರಣ ಕಳ್ಳತನ
ಸಾಧು ಶ್ರೀನಾಥ್​
|

Updated on:Sep 15, 2023 | 12:43 PM

Share

ಗುಂಟೂರು, ಸೆಪ್ಟೆಂಬರ್ 15: ಮೋಸಗಾರರು ಜನರಲ್ಲಿನ ಅಮಾಯಕತ್ವ, ಮುಗ್ಧತೆಯನ್ನು ಲಾಭ ಮಾಡಿಕೊಳ್ಲುತ್ತಾರೆ. ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ ಜನರೂ ಎಚ್ಚೆತ್ತಿಲ್ಲ. ಗುಂಟೂರಿನಲ್ಲಿ ಇಂತಹದ್ದೇ ಘಟನೆ ನಡೆದಿದೆ. ಚಿನ್ನಾಭರಣವನ್ನು (Gold Jewellery) ಕುಕ್ಕರ್‌ನಲ್ಲಿ ಬೇಯಿಸಿ, ಅದರ ಗುಣಮಟ್ಟ (Polishing) ಸುಧಾರಿಸುವುದಾಗಿಯೂ, ಫಳಫಳ ಹೊಳೆಯುವಂತೆ ಮಾಡುವುದಾಗಿಯೂ ಹೇಳಿ ಕಳ್ಳರ ತಂಡ (Gang Of Thieves) ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ.

ಗುಂಟೂರು ನಗರದ ಫಂಡರಿಪುರಂ 5ನೇ ಸಾಲಿನಲ್ಲಿ ರಮೇಶ್ ಎಂಬುವವರ ಮನೆಗೆ ಇಬ್ಬರು ಬಂದಿದ್ದರು. ಮನೆಯಲ್ಲಿ ರಮೇಶ್ ಒಬ್ಬರೇ ಇರುವುದು ಪತ್ತೆಯಾಗಿದೆ. ಮನೆಯ ಬಾಗಿಲು ತಟ್ಟಿ ಒಳಗೆ ಹೋದರು. ಮನೆಯಲ್ಲಿ ಬೆಳ್ಳಿ ಮತ್ತು ತಾಮ್ರದ ಆಭರಣಗಳು ಫಳಫಳ ಹೊಳೆಯುವಂತೆ ಮಾಡುತ್ತೇವೆ ಎಂದು ಹೇಳಿದರು. ನಿಮ್ಮ ಕಣ್ಣೆದುರೇ ಇಲ್ಲೇ ಮಾಡಿಕೊಡುವುದರಿಂದ ಹೆಚ್ಚು ಖರ್ಚು ಬೀಳುವುದಿಲ್ಲ ಎಂದು ಹೇಳಿದರು. ಹೀಗಾಗಿ ರಮೇಶ್ ಅವರು ಮನೆಗೆ ಬಂದಿದ್ದ ಇಬ್ಬರ ಕೈಗೆ ಬೆಳ್ಳಿ ಮತ್ತು ತಾಮ್ರದ ವಸ್ತುಗಳನ್ನು ನೀಡಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ಅದೂಇದೂ ಮಾಡಿ ಬಂದಿದ್ದ ಯುವಕರಿಬ್ಬರು ಹೊಳೆಯುತ್ತಿದ್ದ ತಾಮ್ರ, ಬೆಳ್ಳಿ ವಸ್ತುಗಳನ್ನು ರಮೇಶ್ ಗೆ ಹಿಂತಿರುಗಿಸಿದರು.

ಇಷ್ಟೇ ಅಲ್ಲ ಚಿನ್ನಾಭರಣ ತಂದುಕೊಟ್ಟರೆ ಅದನ್ನೂ ಹೊಳೆಯುವಂತೆ ಮಾಡಿಕೊಡುತ್ತೇವೆ ಎಂದು ಪುಸಲಾಯಿಸಿದ್ದಾರೆ. ಇದರಿಂದ ಮನವರಿಕೆಯಾದ ರಮೇಶ್ 25 ಚಿನ್ನಾಭರಣಗಳನ್ನು ತಂದು ಇಬ್ಬರು ಯುವಕರಿಗೆ ನೀಡಿದ್ದಾರೆ. ಕುಕ್ಕರ್ ತರುವುದಾಗಿ ಹೇಳಿದ ಯುವಕರು, ರಮೇಶ್ ಕಣ್ಣೆದುರೇ ಕುಕ್ಕರ್ ನೊಳಕ್ಕೆ ಚಿನ್ನಾಭರಣಗಳನ್ನು ಹಾಕಿದ್ದಾರೆ. ಬಳಿಕ ಅರಿಶಿನ ತರಬೇಕು ಎಂದಿದ್ದಾರೆ. ಅದಕ್ಕೆ ರಮೇಶ್ ಮನೆಯೊಳಗೆ ಹೋಗಿದ್ದಾರೆ. ಜಸ್ಟ್​ ಆ ವೇಳೆಯೇ ಬಂದಿದ್ದ ಯುವಕರು ಕುಕ್ಕರ್‌ನಲ್ಲಿದ್ದ ಚಿನ್ನಾಭರಣಗಳನ್ನು ತಮ್ಮ ಬ್ಯಾಗ್‌ನಲ್ಲಿ ಹಾಕಿಕೊಂಡಿದ್ದಾರೆ. ಅರಿಶಿನ ತಂದ ರಮೇಶ್ ಕಣ್ಣೆದುರೇ ಕುಕ್ಕರ್ ನೊಳಕ್ಕೆ ಸ್ವಲ್ಪ ಅರಿಶಿಣ ಹಾಕಿದರು. ಹತ್ತು ನಿಮಿಷಗಳ ನಂತರ ಕುಕ್ಕರ್ ತೆರೆಯಿರಿ. ಅದರಲ್ಲಿ ಫಳಫಳ ಹೊಳೆಯುವ ಚಿನ್ನದ ಆಭರಣಗಳನ್ನು ತೆಗೆದುಕೊಳ್ಳಿ ಎಂದಿದ್ದಾರೆ.

Also Read: ಕಳ್ಳತನ ಆರೋಪಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ, ಒಂದೂವರೆ ಕೋಟಿ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದು ಮೃತನ ಪತ್ನಿ

ಅಷ್ಟು ಹೇಳಿ ಇಬ್ಬರು ಯುವಕರು ಅಲ್ಲಿಂದ ಓಡಿ ಹೋದರು. ಆದರೆ ಹತ್ತು ನಿಮಿಷದ ನಂತರ ಕುಕ್ಕರ್ ತೆರೆದಾಗ ಅದರಲ್ಲಿ ಚಿನ್ನಾಭರಣ ಪತ್ತೆಯಾಗಿಲ್ಲ. ರಮೇಶ್ ಪಟ್ಟಾಭಿಪುರಂ ಪೊಲೀಸರನ್ನು ಸಂಪರ್ಕಿಸಿ, ನಡೆದಿದ್ದನ್ನು ಹೇಳಿಕೊಂಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಗಂಗಾನದಿಯಲ್ಲಿ ಅದ್ದಿದರೆ ಚಿನ್ನ ದುಪ್ಪಟ್ಟಾಗುತ್ತದೆ ಎಂದು ಇಂದ್ರ ಚಿತ್ರದಲ್ಲಿ ವಂಚಿಸಿದಂತೆಯೇ ಇಲ್ಲೂ ವಂಚನೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:42 pm, Fri, 15 September 23

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!