ಸಿಂಹದಂಥಾ ಮಗನಿಗೆ ಜನ್ಮ ನೀಡಿದ್ದೇನೆ, ನಾನು ಅಳುವುದಿಲ್ಲ: ಹುತಾತ್ಮ ಯೋಧ ಆಶಿಶ್​ ತಾಯಿಯ ಭಾವುಕ ಮಾತು

ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ನಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಹುತಾತ್ಮರಾದ ಮೇಜರ್ ಆಶಿಶ್ ಅವರ ಪಾರ್ಥಿವ ಶರೀರ ಶುಕ್ರವಾರ ಪಾಣಿಪತ್ ತಲುಪಿದೆ.ಈ ಸಂದರ್ಭದಲ್ಲಿ ಮಾತನಾಡಿದ ಆಶಿಶ್ ಅವರ ತಾಯಿ‘‘ನಾನು ಸಿಂಹದಂಥಾ ಮಗನಿಗೆ ಜನ್ಮ ನೀಡಿದ್ದೇನೆ, ನಾನು ಅಳುವುದಿಲ್ಲ, ಭಯೋತ್ಪಾದಕರಿಗೆ ಬೆನ್ನು ತೋರಿಸಿ ಓಡಿಹೋಗಲಿಲ್ಲ ನನ್ನ ಮಗ, ಆತ ಭಯೋತ್ಪಾದಕರನ್ನು ಎದುರಿಸಿ ಹುತಾತ್ಮನಾಗಿದ್ದಾನೆ, ಆತನ ಬಗ್ಗೆ ಹೆಮ್ಮೆ ಇದೆ’’ ಎಂದರು.

ಸಿಂಹದಂಥಾ ಮಗನಿಗೆ ಜನ್ಮ ನೀಡಿದ್ದೇನೆ, ನಾನು ಅಳುವುದಿಲ್ಲ: ಹುತಾತ್ಮ ಯೋಧ ಆಶಿಶ್​ ತಾಯಿಯ ಭಾವುಕ ಮಾತು
ಮೇಜರ್ ಆಶಿಶ್ Image Credit source: Indian Express
Follow us
ನಯನಾ ರಾಜೀವ್
|

Updated on: Sep 15, 2023 | 10:00 AM

ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್(Anantnag)​ನಲ್ಲಿ ನಡೆದ ಎನ್​ಕೌಂಟರ್(Encounter)​ನಲ್ಲಿ ಹುತಾತ್ಮ(Martyr)ರಾದ ಮೇಜರ್ ಆಶಿಶ್ ಅವರ ಪಾರ್ಥಿವ ಶರೀರ ಶುಕ್ರವಾರ ಪಾಣಿಪತ್ ತಲುಪಿದೆ.ಈ ಸಂದರ್ಭದಲ್ಲಿ ಮಾತನಾಡಿದ ಆಶಿಶ್( Ashish) ಅವರ ತಾಯಿ‘‘ನಾನು ಸಿಂಹದಂಥಾ ಮಗನಿಗೆ ಜನ್ಮ ನೀಡಿದ್ದೇನೆ, ನಾನು ಅಳುವುದಿಲ್ಲ, ಭಯೋತ್ಪಾದಕರಿಗೆ ಬೆನ್ನು ತೋರಿಸಿ ಓಡಿಹೋಗಲಿಲ್ಲ ನನ್ನ ಮಗ, ಆತ ಭಯೋತ್ಪಾದಕರನ್ನು ಎದುರಿಸಿ ಹುತಾತ್ಮನಾಗಿದ್ದಾನೆ, ಆತನ ಬಗ್ಗೆ ಹೆಮ್ಮೆ ಇದೆ’’ ಎಂದರು.

ಪಾಣಿಪತ್‌ನ ಬೀದಿಗಳಲ್ಲಿ ಒಂದೇ ಒಂದು ಘೋಷಣೆ ಪ್ರತಿಧ್ವನಿಸುತ್ತಿತ್ತು.‘ಮೇಜರ್ ಆಶಿಶ್ ಅಮರ್ ರಹೇ’. ಯೋಧನ ಮೃತದೇಹದ ಅಂತಿಮ ದರ್ಶನ ಪಡೆಯಲು ಪಾಣಿಪತ್ ನ ಸೆಕ್ಟರ್ 7ರಲ್ಲಿ ಸಾವಿರಾರು ಜನರು ಜಮಾಯಿಸಿದ್ದರು.

ಅವರ ಅಂತಿಮ ಸಂಸ್ಕಾರವನ್ನು ಅವರ ಹುಟ್ಟೂರು ಬಿಂಜೌಲ್‌ನಲ್ಲಿ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ.ಅವರ ಪಾರ್ಥಿವ ಶರೀರವನ್ನು ಅವರು ನಿರ್ಮಿಸಿದ ಟಿಡಿಐ ಸಿಟಿಯಲ್ಲಿರುವ ಅವರ ಹೊಸ ಮನೆಗೆ ತರಲಾಯಿತು.

ಮತ್ತಷ್ಟು ಓದಿ: ಅನಂತ್​ನಾಗ್​ನಲ್ಲಿ ಮುಂದುವರೆದ ಎನ್​ಕೌಂಟರ್​ನಲ್ಲಿ ಮತ್ತೋರ್ವ ಯೋಧ ಹುತಾತ್ಮ

ಮೇಜರ್ ಆಶಿಶ್ ಸೇನಾ ಪದಕ ಪಡೆದಿದ್ದರು ಮೇಜರ್ ಆಶಿಶ್ ಅವರ ಶೌರ್ಯಕ್ಕಾಗಿ ಈ ವರ್ಷದ ಆಗಸ್ಟ್ 15 ರಂದು ದೇಶದ ಅಧ್ಯಕ್ಷ ದ್ರೌಪದಿ ಮುರ್ಮು ಅವರಿಂದ ಸೇನಾ ಪದಕ ಪಡೆದಿದ್ದರು. ಭಯೋತ್ಪಾದಕರ ವಿರುದ್ಧ ಸರ್ಕಾರ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹುತಾತ್ಮ ಯೋಧ ಆಶಿಶ್ ಅವರ ಸೋದರ ಮಾವ ಸುರೇಶ್ ಹೇಳಿದ್ದಾರೆ.

ಪಾಣಿಪತ್ ನಲ್ಲಿ ಹೊಸ ಮನೆ ಕಟ್ಟಲಾಗಿದೆ. ಆಶಿಶ್ ರಜೆ ಪಡೆದು ಮನೆಗೆ ಮರಳಲು ಮುಂದಾಗಿದ್ದರು. ಅವರ ಹುಟ್ಟುಹಬ್ಬ ಅಕ್ಟೋಬರ್‌ನಲ್ಲಿಯೇ ಇತ್ತು. 23ರಂದು ಅವರ ಹುಟ್ಟುಹಬ್ಬ ಆಚರಿಸಿ, ಅದೇ ದಿನ ಹೊಸ ಮನೆಗೆ ತೆರಳಲು ಕುಟುಂಬಸ್ಥರು ನಿರ್ಧರಿಸಿದ್ದರು. ಆಶಿಶ್ 2012ರಲ್ಲಿ ಸೇನೆಗೆ ಸೇರಿದ್ದರು.

ಆಶಿಶ್ ಮೊದಲಿನಿಂದಲೂ ಸೇನೆಗೆ ಸೇರಲು ಬಯಸಿದ್ದರು, ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು, ಸ್ನಾತಕೋತ್ತರ ಪದವಿವರೆಗೆ ಓದಿದ್ದರು. ಕುಟುಂಬ ಪಾಣಿಪತ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ