Aditya L1 Mission: ಇಂದು ನಾಲ್ಕನೇ ಕಕ್ಷೆ ಬದಲಿಸಿದ ಆದಿತ್ಯ ಎಲ್​1 ಮಿಷನ್, ಸೂರ್ಯನ ಕಡೆಗೆ ಮತ್ತೊಂದು ಹೆಜ್ಜೆ

ಭಾರತದ ಮೊದಲ ಸೂರ್ಯ ಮಿಷನ್ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾದ ಆದಿತ್ಯ L-1(Aditya L1) ಬಾಹ್ಯಾಕಾಶ ನೌಕೆಯು ನಾಲ್ಕನೇ ಕಕ್ಷೆಯ ಬದಲಾವಣೆಯನ್ನು ಪೂರ್ಣಗೊಳಿಸಿದೆ. ಸೆಪ್ಟೆಂಬರ್ 15ರಂದು ಬೆಳಗಿನ ಜಾವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಈ ಕುರಿತು ಟ್ವೀಟ್ ಮಾಡಿದೆ. ಸೂರ್ಯನನ್ನು ಅಧ್ಯಯನ ಮಾಡಲು ಬಾಹ್ಯಾಕಾಶಕ್ಕೆ ಕಳುಹಿಸಲಾದ ಆದಿತ್ಯ L-1, ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ. ಸೂರ್ಯ ಮತ್ತು ಭೂಮಿಯ ನಡುವೆ ಐದು ಲಗ್ರೇಂಜ್ ಪಾಯಿಂಟ್‌ಗಳಿವೆ.

Aditya L1 Mission: ಇಂದು ನಾಲ್ಕನೇ ಕಕ್ಷೆ ಬದಲಿಸಿದ ಆದಿತ್ಯ ಎಲ್​1 ಮಿಷನ್, ಸೂರ್ಯನ ಕಡೆಗೆ ಮತ್ತೊಂದು ಹೆಜ್ಜೆ
ಆದಿತ್ಯ ಎಲ್​1
Follow us
ನಯನಾ ರಾಜೀವ್
|

Updated on: Sep 15, 2023 | 9:07 AM

ಭಾರತದ ಮೊದಲ ಸೂರ್ಯ ಮಿಷನ್ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಲಾದ ಆದಿತ್ಯ L-1(Aditya L1) ಬಾಹ್ಯಾಕಾಶ ನೌಕೆಯು ನಾಲ್ಕನೇ ಕಕ್ಷೆಯ ಬದಲಾವಣೆಯನ್ನು ಪೂರ್ಣಗೊಳಿಸಿದೆ. ಸೆಪ್ಟೆಂಬರ್ 15ರಂದು ಬೆಳಗಿನ ಜಾವ ಭಾರತೀಯ ಬಾಹ್ಯಾಕಾಶ ಸಂಸ್ಥೆ ಈ ಕುರಿತು ಟ್ವೀಟ್ ಮಾಡಿದೆ. ಸೂರ್ಯನನ್ನು ಅಧ್ಯಯನ ಮಾಡಲು ಬಾಹ್ಯಾಕಾಶಕ್ಕೆ ಕಳುಹಿಸಲಾದ ಆದಿತ್ಯ L-1, ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ. ಸೂರ್ಯ ಮತ್ತು ಭೂಮಿಯ ನಡುವೆ ಐದು ಲಗ್ರೇಂಜ್ ಪಾಯಿಂಟ್‌ಗಳಿವೆ.

ಯಾವುದೇ ಗ್ರಹಣ ಅಥವಾ ಅಡೆತಡೆಗಳಿಲ್ಲದೆ ಸೂರ್ಯನನ್ನು ನೋಡಬಹುದಾದ ಸ್ಥಳವೇ ಲಗ್ರೇಂಜ್ ಪಾಯಿಂಟ್. ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಲಗ್ರೇಂಜ್ ಪಾಯಿಂಟ್ 1ಕ್ಕೆ ಕಳುಹಿಸಲಾಗುತ್ತಿದೆ. ಭೂಮಿಯಿಂದ ಲಾಗ್ರೇಂಜ್ ಪಾಯಿಂಟ್ 1 ರ ಅಂತರವು 15 ಲಕ್ಷ ಕಿಲೋಮೀಟರ್‌ಗಳು, ಆದರೆ ಸೂರ್ಯನಿಂದ ಭೂಮಿಯ ದೂರವು 15 ಕೋಟಿ ಕಿಲೋಮೀಟರ್‌ಗಳು. ಸೆಪ್ಟೆಂಬರ್ 2 ರಂದು ಆದಿತ್ಯ ಎಲ್​1 ಮಿಷನ್ ಉಡಾವಣೆಯಾಗಿದ್ದು, ಸೆಪ್ಟೆಂಬರ್ 3ರಂದು ಮೊದಲ ಕಕ್ಷೆ ಬದಲಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು.

ಮತ್ತಷ್ಟು ಓದಿ: ಸನ್ ಮಿಷನ್: ಇಂದು ಮೊದಲ ಕಕ್ಷೆ ಬದಲಿಸಲಿದೆ ಆದಿತ್ಯ ಎಲ್​1

ಸೆಪ್ಟೆಂಬರ್ 5ರಂದು ಎರಡನೇ ಕಕ್ಷೆಯ ಬದಲಾವಣೆಯನ್ನು ಮಾಡಿತ್ತು, ಒಟ್ಟು ಐದು ಬಾರಿ ಕಕ್ಷೆ ಬದಲಾವಣೆ ಮಾಡಿದ ಬಳಿಕ ಅಧ್ಯಯನ ಉದ್ದೇಶಿಸಿರುವ ಲ್ಯಾಂಗ್ರೇಜ್ ಪಾಯಿಂಟ್​ನತ್ತ ಆದಿತ್ಯ ಎಲ್​1 ಮಿಷನ್ ಸಾಗಲಿದೆ. ಲ್ಯಾಂಗ್ರೇಜ್ ಪಾಯಿಂಟ್ ತಲುಪಲು 125 ದಿನಗಳು ಹಿಡಿಯುತ್ತದೆ.

ಇಸ್ರೋದ ಬಾಹ್ಯಾಕಾಶ ನೌಕೆ 16 ದಿನಗಳ ಕಾಲ ಭೂಮಿಯ ಸುತ್ತ ಸುತ್ತಲಿದೆ. ಈ ಕುಶಲತೆಯ ಸಮಯದಲ್ಲಿ, ಮುಂದಿನ ಪ್ರಯಾಣಕ್ಕೆ ಅಗತ್ಯವಾದ ವೇಗವನ್ನು ಸಾಧಿಸಲಾಗುತ್ತದೆ. ಐದನೇ ಭೂಮಿಯ ಬೌಂಡ್ ಮ್ಯಾನ್ಯೂವರ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಆದಿತ್ಯ L-1 ತನ್ನ 110-ದಿನಗಳ ಪ್ರಯಾಣಕ್ಕಾಗಿ ಲಾಗ್ರೇಂಜ್ ಪಾಯಿಂಟ್‌ಗೆ ಹೊರಡಲಿದೆ.

ಬಾಹ್ಯಾಕಾಶ ನೌಕೆಯ ಮೂಲಕ ಸೂರ್ಯನ ಚಲನವಲನಗಳ ಮೇಲೆ ನಿಗಾ ಇಡಲು ಇದು ನೆರವಾಗಲಿದೆ ಎಂದು ಇಸ್ರೋ ಹೇಳಿದೆ. ಆದಿತ್ಯ L-1 ನೊಂದಿಗೆ ಹಲವು ರೀತಿಯ ಸಾಧನಗಳನ್ನು ಕಳುಹಿಸಲಾಗಿದೆ, ಅದರ ಮೂಲಕ ಸೂರ್ಯನನ್ನು ಅಧ್ಯಯನ ಮಾಡಲಾಗುತ್ತದೆ. ಸೌರ ಜ್ವಾಲೆಗಳು, ಸೂರ್ಯನಿಂದ ಹೊರಹೊಮ್ಮುವ ಕರೋನಲ್ ಮಾಸ್ ಎಜೆಕ್ಷನ್‌ಗಳಂತಹ ವಿಷಯಗಳ ಮೇಲೆ ನಿಗಾ ಇಡುವುದು ಬಹಳ ಮುಖ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್