AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aditya L-1 Mission: ಚಂದ್ರಯಾನ ಆಯ್ತು ಈಗ ಸೂರ್ಯನ ಸರದಿ, ಸೆ.2 ರಿಂದ ಆದಿತ್ಯ ಎಲ್​ 1 ಮಿಷನ್ ಆರಂಭ

 ಮೂನ್ ಮಿಷನ್ ಅಡಿಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಇದಾದ ಬಳಿಕ ಮಿಷನ್ ಸನ್ ಅಡಿಯಲ್ಲಿ ಸೂರ್ಯನನ್ನು ತಲುಪಲು ಇಸ್ರೋ ಸಿದ್ಧತೆ ನಡೆಸಿದೆ. ಸೆಪ್ಟೆಂಬರ್ 2 ರಂದು, ಇಸ್ರೋ ಆದಿತ್ಯ-ಎಲ್1 ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಶಾರ್ (SDSC SHAR) ಶ್ರೀಹರಿಕೋಟಾದಿಂದ PSLV ರಾಕೆಟ್ ಮೂಲಕ ಉಡಾವಣೆ ಮಾಡಲಿದೆ.

ಆದಿತ್ಯ ಎಲ್ 1 ಮಿಷನ್
ನಯನಾ ರಾಜೀವ್
|

Updated on: Aug 25, 2023 | 12:07 PM

Share

ಮೂನ್ ಮಿಷನ್ ಅಡಿಯಲ್ಲಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಇದಾದ ಬಳಿಕ ಮಿಷನ್ ಸನ್ ಅಡಿಯಲ್ಲಿ ಸೂರ್ಯನನ್ನು ತಲುಪಲು ಇಸ್ರೋ ಸಿದ್ಧತೆ ನಡೆಸಿದೆ. ಸೆಪ್ಟೆಂಬರ್ 2 ರಂದು, ಇಸ್ರೋ ಆದಿತ್ಯ-ಎಲ್1 ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಶಾರ್ (SDSC SHAR) ಶ್ರೀಹರಿಕೋಟಾದಿಂದ PSLV ರಾಕೆಟ್ ಮೂಲಕ ಉಡಾವಣೆ ಮಾಡಲಿದೆ.

ಇಸ್ರೋದ ಆದಿತ್ಯ ಎಲ್1 ಮಿಷನ್ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅತ್ಯಂತ ಕಷ್ಟಕರವಾದ ಮಿಷನ್ ಆಗಿದೆ. ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಕೂಡ ಇತ್ತೀಚೆಗೆ ಭಾರತವು ಸೂರ್ಯನ ಮೇಲೆ ತಯಾರಿ ನಡೆಸುತ್ತಿದೆ ಎಂದು ಹೇಳಿದ್ದರು. ಕಳೆದ ಕೆಲವು ತಿಂಗಳುಗಳಿಂದ, ಬಾಹ್ಯಾಕಾಶ ಸಂಸ್ಥೆಯ ಗಮನವು ಚಂದ್ರಯಾನ -3 ಮೇಲೆ ಇತ್ತು. ಇಸ್ರೋ ಮುಂದಿನ ತಿಂಗಳುಗಳಲ್ಲಿ ಇತರ ಯೋಜನೆಗಳಲ್ಲಿ ಕೆಲಸ ಮಾಡುತ್ತಿದೆ. ಮಿಷನ್ ಮೂನ್ ನಂತರ ಈ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗುವುದು.

ಮಿಷನ್ ಮೂನ್‌ನ ಐತಿಹಾಸಿಕ ಯಶಸ್ಸಿನ ನಂತರ, ಭಾರತವು ಮುಂದಿನ ಮೂರು ತಿಂಗಳಲ್ಲಿ ಆದಿತ್ಯ ಎಲ್ 1 ಮತ್ತು ಗಗಯಾನ್ ಸೇರಿದಂತೆ ಹಲವಾರು ಪ್ರಮುಖ ಮಿಷನ್‌ಗಳನ್ನು ಪ್ರಾರಂಭಿಸಲಿದೆ ಎಂದು ಎಸ್ ಸೋಮನಾಥ್ ಹೇಳಿದರು.

ಆದಿತ್ಯ L1 ಮಿಷನ್ ಎಂದರೇನು?

ಆದಿತ್ಯ L1 ಬಗ್ಗೆ ಮಾಹಿತಿ ನೀಡಿದ ಇಸ್ರೋ ಮುಖ್ಯಸ್ಥರು, ಇದು ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಸೌರ ಮಿಷನ್ ಆಗಿದೆ. ಸೆಪ್ಟೆಂಬರ್ ಆರಂಭದಲ್ಲಿ ಈ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಯೋಜನೆಯನ್ನು ಜೋಡಿಸಿ ಶ್ರೀಹರಿಕೋಟಾ ಉಡಾವಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ISRO ಪ್ರಕಾರ, ಆದಿತ್ಯ L1 ಬಾಹ್ಯಾಕಾಶ ನೌಕೆಯು ಏಳು ರೀತಿಯ ವೈಜ್ಞಾನಿಕ ಪೇಲೋಡ್‌ಗಳನ್ನು ಹೊಂದಿರುತ್ತದೆ.

ಅವು ಸೂರ್ಯನನ್ನು ವಿವಿಧ ರೀತಿಯಲ್ಲಿ ಅಧ್ಯಯನ ಮಾಡುತ್ತವೆ. ಈ ವಾಹನವು ಸುಮಾರು 5 ವರ್ಷಗಳ ಕಾಲ ಸೂರ್ಯನನ್ನು ಅಧ್ಯಯನ ಮಾಡುತ್ತವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?