AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿರುಪತಿಗೆ 100 ಕೆಜಿ ಬೆಳ್ಳಿ ದೀಪ ನೀಡಿ 3 ಶತಮಾನಗಳ ಸಂಪ್ರದಾಯಕ್ಕೆ ಮರುಚಾಲನೆ ನೀಡಿದ ಮೈಸೂರು ರಾಜಮಾತೆ ಪ್ರಮೋದಾದೇವಿ

ತಿರುಮಲದ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಮೈಸೂರು ರಾಜ್ಯವು ಬೃಹತ್ ಬೆಳ್ಳಿ ದೀಪಗಳನ್ನು ಕೊಡುಗೆಯಾಗಿ ನೀಡಿತು. ಮೈಸೂರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಹಾಗೂ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ತಿರುಪತಿ ದೇವಸ್ಥಾನದ ದರ್ಶನ ಪಡೆದ ನಂತರ ದೀಪಗಳನ್ನು ದೇವಸ್ಥಾನಕ್ಕೆ ಅರ್ಪಿಸಿದರು. ಮೈಸೂರು ಅರಮನೆಯಿಂದ 3 ಶತಮಾನಗಳ ನಂತರ ತಿರುಪತಿ ದೇವಸ್ಥಾನಕ್ಕೆ ಅಪಾರ ಪ್ರಮಾಣದ ಕಾಣಿಕೆಗಳು ಬಂದವು. ಮೈಸೂರಿನ ರಾಜಮಾತೆ ಪ್ರಮೋದಾದೇವಿ ತಿರುಪತಿಯ ರಂಗನಾಯಕಕುಲ ಮಂಟಪದಲ್ಲಿ ಮೈಸೂರು ರಾಜ್ಯದ ದೇಣಿಗೆ ನೀಡಿದರು.

ತಿರುಪತಿಗೆ 100 ಕೆಜಿ ಬೆಳ್ಳಿ ದೀಪ ನೀಡಿ 3 ಶತಮಾನಗಳ ಸಂಪ್ರದಾಯಕ್ಕೆ ಮರುಚಾಲನೆ ನೀಡಿದ ಮೈಸೂರು ರಾಜಮಾತೆ ಪ್ರಮೋದಾದೇವಿ
Pramoda Devi Donates 100 Kg Silver Lamps To Tirumala
ಸುಷ್ಮಾ ಚಕ್ರೆ
|

Updated on:May 19, 2025 | 5:57 PM

Share

ತಿರುಮಲ, ಮೇ 19: ಮೈಸೂರು ರಾಜಮಾತೆ ತಿರುಮಲ ತಿರುಪತಿ ದೇವಸ್ಥಾನಕ್ಕೆ (Tirupati Temple) 100 ಕೆಜಿ ತೂಕದ ಬೆಳ್ಳಿ ದೀಪಗಳನ್ನು ದಾನ ಮಾಡಿ, 300 ವರ್ಷಗಳ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದ್ದಾರೆ. ಆಳೆತ್ತರದ ಬೆಳ್ಳಿ ದೀಪಗಳು ಇನ್ನುಮುಂದೆ ತಿರುಮಲ ದೇವಸ್ಥಾನಕ್ಕೆ ಬೆಳಗಲಿವೆ. ಭಕ್ತಿ ಮತ್ತು ರಾಜ ಪರಂಪರೆಯ ಸಂಕೇತವಾಗಿ ಮೈಸೂರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ತಿರುಮಲ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ ಎರಡು ದೊಡ್ಡ ಬೆಳ್ಳಿ ದೀಪಗಳನ್ನು ದಾನ ಮಾಡಿದರು. ರಂಗನಾಯಕಕುಲ ಮಂಟಪದಲ್ಲಿ ನಡೆದ ಅಧಿಕೃತ ಹಸ್ತಾಂತರ ಸಮಾರಂಭದಲ್ಲಿ ದೇವಾಲಯ ಆಡಳಿತದ ಪರವಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಈ ಕಾಣಿಕೆಯನ್ನು ಸ್ವೀಕರಿಸಿದರು.

ಸರಿಸುಮಾರು 100 ಕೆಜಿ ತೂಕವಿರುವ ಈ ಬೆಳ್ಳಿ ದೀಪಗಳನ್ನು ಶಾಶ್ವತ ದೀಪಗಳಾಗಿ ಬಳಸಲಾಗುತ್ತದೆ. ಹಗಲು-ರಾತ್ರಿ ದೇವಾಲಯದ ಗರ್ಭಗುಡಿಯಲ್ಲಿ ಬೆಳಗುತ್ತಿರುವ ಅಖಂಡ ದೀಪಗಳನ್ನು ದೈವಿಕತೆಯ ಶಾಶ್ವತ ಉಪಸ್ಥಿತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮೈಸೂರು ರಾಜಮಾತೆಯ ಈ ಕಾಣಿಕೆಯು ದೇವಾಲಯದಲ್ಲಿ 300 ವರ್ಷಗಳಷ್ಟು ಹಳೆಯದಾದ ಸಂಪ್ರದಾಯವನ್ನು ಪುನರುಜ್ಜೀವನಗೊಳಿಸಿದೆ ಎನ್ನಲಾಗಿದೆ.

Pramoda Devi Donates 100 Kg Silver Lamps To Tirumala (1)

ದೇವಾಲಯ ಮತ್ತು ಮೈಸೂರು ಅರಮನೆಯ ದಾಖಲೆಗಳು ನಿರ್ವಹಿಸುವ ಐತಿಹಾಸಿಕ ದಾಖಲೆಗಳು, 18ನೇ ಶತಮಾನದಲ್ಲಿ ಆಗಿನ ಮೈಸೂರು ಮಹಾರಾಜರು ತಿರುಮಲ ದೇವಾಲಯಕ್ಕೆ ಇದೇ ರೀತಿಯ ಬೆಳ್ಳಿ ದೀಪಗಳನ್ನು ದಾನ ಮಾಡಿದ್ದರು ಎನ್ನಲಾಗಿದೆ. ರಾಜಮಾತೆಯ ಈ ಕಾಣಿಕೆಯನ್ನು ನಂಬಿಕೆಯ ಕ್ರಿಯೆ, ಆಳವಾದ ಆಧ್ಯಾತ್ಮಿಕ ಸಂಪ್ರದಾಯದ ಮುಂದುವರಿಕೆ ಮತ್ತು ಮೈಸೂರು ರಾಜಮನೆತನ ಹಾಗೂ ತಿರುಮಲದ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವ ಒಂದು ಕಾರ್ಯವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಆಪರೇಷನ್ ಸಿಂಧೂರದ ಬಗ್ಗೆ ಮತ್ತೊಮ್ಮೆ ಜೈಶಂಕರ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ; ಪಾಕಿಸ್ತಾನದಲ್ಲಿ ಅದೇ ಹೆಡ್​ಲೈನ್!

ಪ್ರಮೋದಾ ದೇವಿ ಒಡೆಯರ್ ಕಲೆ, ಸಂಸ್ಕೃತಿ ಮತ್ತು ಧಾರ್ಮಿಕ ಸಂಸ್ಥೆಗಳ ಪೋಷಕಿಯಾಗಿದ್ದಾರೆ. ಪ್ರಮೋದಾದೇವಿ ಒಡೆಯರ್ ಮೈಸೂರು ರಾಜವಂಶವು ಸ್ಥಾಪಿಸಿದ ಸಂಪ್ರದಾಯಗಳನ್ನು ಸಂರಕ್ಷಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ. ಅವರ ಪ್ರಸ್ತುತ ಕಾಣಿಕೆಯನ್ನು ದೇವಾಲಯದ ಅಧಿಕಾರಿಗಳು ಮತ್ತು ಭಕ್ತರು ಮೆಚ್ಚುತ್ತಿದ್ದಾರೆ. ಇಂತಹ ಹೆಚ್ಚಿನ ಮೌಲ್ಯದ ದೇಣಿಗೆಗಳು ಅಪರೂಪ ಮಾತ್ರವಲ್ಲದೆ ಬಹಳಷ್ಟು ಐತಿಹಾಸಿಕ ಸಂಕೇತಗಳನ್ನು ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ಈ ಅಖಂಡಗಳು ಕೇವಲ ಬೆಳ್ಳಿಯಿಂದ ಮಾಡಿದ ದೀಪಗಳಲ್ಲ, ಅವು ನಮ್ಮ ಪರಂಪರೆ ಮತ್ತು ಭಕ್ತಿಯ ಪ್ರಮುಖ ಭಾಗವಾಗಿದೆ” ಎಂದು ದೀಪಗಳ ಹಸ್ತಾಂತರದ ಸಮಯದಲ್ಲಿ ಹಾಜರಿದ್ದ ದೇವಾಲಯದ ಹಿರಿಯ ಅರ್ಚಕರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:56 pm, Mon, 19 May 25