ಸನ್ ಮಿಷನ್: ಇಂದು ಮೊದಲ ಕಕ್ಷೆ ಬದಲಿಸಲಿದೆ ಆದಿತ್ಯ ಎಲ್1
ಇಸ್ರೋ(Isro)ದ ಸನ್ ಮಿಷನ್ ಆದಿತ್ಯ ಎಲ್1 ತನ್ನ ಮೊದಲ ಕಕ್ಷೆಯನ್ನು ಬದಲಾಯಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಭಾನುವಾರ ಬೆಳಗ್ಗೆ 11.45ರ ಸುಮಾರಿಗೆ ಮೊದಲ ಪಿಎಸ್ಎಲ್ವಿ ವಾಹನದಿಂದ ಬೇರ್ಪಟ್ಟು ಚಂದ್ರನೆಡೆಗೆ ಚಲಿಸಿದೆ. ಭಾರತೀಯ ಬಾಹ್ಯಾಕಾಶ ಸಂಸೋಧನಾ ಸಂಸ್ಥೆ ಚಂದ್ರಯಾನ 3 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಒಂದು ವಾರ ಬಳಿಕ ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್1 ಮಿಷನ್ ಉಡಾವಣೆ ಮಾಡಿದೆ.

ಬಾಹ್ಯಾಕಾಶ ನೌಕೆಯು ಸುಮಾರು 125 ದಿನಗಳ ಕಾಲ ಪ್ರಯಾಣಿಸುವ ನಿರೀಕ್ಷೆಯಿದೆ, ಇದು ಸೂರ್ಯನಿಗೆ ಹತ್ತಿರವಿರುವ ಲಾಗ್ರಾಂಜಿಯನ್ ಪಾಯಿಂಟ್ L1 ಸುತ್ತ ಹಾಲೋ ಕಕ್ಷೆಯನ್ನು ತಲುಪುತ್ತದೆ. ಆದಿತ್ಯ L-1 ಭೂಮಿಯ ಸುತ್ತ 16 ದಿನಗಳ ಕಾಲ ಸುತ್ತುತ್ತದೆ ಮತ್ತು ತನ್ನ ವೇಗವನ್ನು ನಿರಂತರವಾಗಿ ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ಉಪಗ್ರಹದ ಕಕ್ಷೆಯನ್ನು 5 ಬಾರಿ ಬದಲಾಯಿಸಲಾಗುತ್ತದೆ.
ಆದಿತ್ಯ ಎಲ್1 ಸೂರ್ಯನ ಮೇಲೆ ಇಳಿಯುವುದೂ ಇಲ್ಲ, ಸೂರ್ಯನ ಸಮೀಪಕ್ಕೆ ತೆರಳುವುದೂ ಇಲ್ಲ ಬದಲಾಗಿ ಸೂರ್ಯನಿಂದ ಸುಮಾರು 1.5 ಮಿಲಿಯನ್ ಕಿ.ಮೀ ದೂರ ಉಳಿದುಕೊಂಡು ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡಲಿದೆ.
ಮತ್ತಷ್ಟು ಓದಿ: Aditya L1 Mission: ಇಸ್ರೋ ಮಹತ್ವದ ಹೆಜ್ಜೆ, ಇಂದು ಆದಿತ್ಯ ಎಲ್1 ಉಡಾವಣೆ; ಸಮಯ, ಸ್ಥಳ, ಮಹತ್ವ ಇಲ್ಲಿದೆ
ಎಲ್1 ಎನ್ನುವುದು ಖಗೋಳದಲ್ಲಿರುವ ಒಂದು ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಸೂರ್ಯ ಹಾಗೂ ಭೂಮಿಯಂತಹ ಆಕಾಶಕಾಯಗಳ ಗುರುತ್ವಾಕರ್ಷಣೆಯ ಬಲಗಳು ಸಮತೋಲನದಲ್ಲಿರುತ್ತವೆ.
ಆದಿತ್ಯ ಎಲ್1 ಉಡಾವಣೆಯಾದ ದಿನದಿಂದ 126 ದಿನಗಳಲ್ಲಿ ಸೂರ್ಯನ ಸುತ್ತ ಕಕ್ಷೆಯಲ್ಲಿರುವ ತನ್ನ ಎಲ್1 ಬಿಂದುವನ್ನು ತಲುಪುವ ನಿರೀಕ್ಷೆ ಇದೆ. ಆದರೆ ಇಸ್ರೋ ಈ ಬಗ್ಗೆ ದಿನಾಂಕವನ್ನು ಇನ್ನೂ ಸ್ಪಷ್ಟಗೊಳಿಸಿಲ್ಲ.
ಭಾರತದ ಚೊಚ್ಚಲ ಸೋಲಾರ್ ಮಿಷನ್‌ನ ಅಂದಾಜು ಬಜೆಟ್ 400 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಇಸ್ರೋದ ಈ ಯೋಜನೆ ಯಶಸ್ವಿಯಾದರೆ ಸೌರ ಕಕ್ಷೆಯಲ್ಲಿ ಉಪಗ್ರಹ ಇಳಿಸಿದ ಏಷ್ಯಾದ ಮೊದಲ ದೇಶ ಎಂಬ ಕೀರ್ತಿಗೆ ಭಾರತ ಪಾತ್ರವಾಗಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:11 am, Sun, 3 September 23