AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಿತ್ಯ ಎಲ್​1 ಯಶಸ್ವಿ ಉಡಾವಣೆ: ಇಸ್ರೋ ಮುಖ್ಯಸ್ಥ ಸೋಮನಾಥ್ ಮಾಹಿತಿ, ಪ್ರಧಾನಿ ಮೋದಿ ಅಭಿನಂದನೆ

ನೌಕೆ ಯಶಸ್ವಿ ಉಡಾವಣೆ ಬಗ್ಗೆ ಇಸ್ರೋ ಮುಖ್ಯಸ್ಥ ಸೋಮನಾಥ್ ಮಾಹಿತಿ ನೀಡಿದ್ದು ಆದಿತ್ಯ ಎಲ್​​​​-1​​​​ ನೌಕೆ ಯಶಸ್ವಿ ಉಡಾವಣೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಆದಿತ್ಯ ಎಲ್​1 ಯಶಸ್ವಿ ಉಡಾವಣೆ: ಇಸ್ರೋ ಮುಖ್ಯಸ್ಥ ಸೋಮನಾಥ್ ಮಾಹಿತಿ, ಪ್ರಧಾನಿ ಮೋದಿ ಅಭಿನಂದನೆ
ಇಸ್ರೋ ಮುಖ್ಯಸ್ಥ ಸೋಮನಾಥ್
TV9 Web
| Edited By: |

Updated on: Sep 02, 2023 | 2:03 PM

Share

ಬೆಂಗಳೂರು, ಸೆ.02: ಭಾರತದ ಮೊಟ್ಟ ಮೊದಲ ಸೂರ್ಯಯಾನದ ಮೊದಲ ಹೆಜ್ಜೆ ಇಂದು ಯಶಸ್ವಿಯಾಗಿದೆ. ಆದಿತ್ಯ ಎಲ್​1 ಉಪಗ್ರಹ ಹೊತ್ತ PSLV-C57 ರಾಕೆಟ್​ ಬೆಳಗ್ಗೆ 11 ಗಂಟೆ 50 ನಿಮಿಷಕ್ಕೆ ಆಕಾಶಕ್ಕೆ ಜಿಗಿದಿದ್ದು, ಭೂಕಕ್ಷೆಗೆ ಯಶಸ್ವಿಯಾಗಿ ಸೇರಿದೆ. ಇನ್ನು ನೌಕೆ ಯಶಸ್ವಿ ಉಡಾವಣೆ ಬಗ್ಗೆ ಇಸ್ರೋ ಮುಖ್ಯಸ್ಥ ಸೋಮನಾಥ್ ಮಾಹಿತಿ ನೀಡಿದ್ದು ಆದಿತ್ಯ ಎಲ್​​​​-1​​​​ ನೌಕೆ ಯಶಸ್ವಿ ಉಡಾವಣೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

ಇಸ್ರೋದ ಮಹತ್ವಾಕಾಂಕ್ಷಿ ಆದಿತ್ಯ ಎಲ್​​​​-1​​​​ ನೌಕೆ ಉಡಾವಣೆ ಯಶಸ್ವಿಯಾಗಿದೆ. ಈ ಬಗ್ಗೆ ಮಾತನಾಡಿದ ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು, ಆದಿತ್ಯ ಎಲ್​​​​-1​​​​ ನೌಕೆ ಯಶಸ್ವಿ ಉಡಾವಣೆಗೆ ಶ್ರಮಿಸಿದ ವಿಜ್ಞಾನಿಗಳು, ಇಂಜಿನಿಯರ್​ಗಳು, ಸಿಬ್ಬಂದಿ ವರ್ಗ ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಇನ್ನು ಆದಿತ್ಯ L-1​​​​ ನೌಕೆ ಯಶಸ್ವಿ ಉಡಾವಣೆ ಹಿನ್ನೆಲೆ ವಿಜ್ಞಾನಿಗಳ ಸಂಭ್ರಮಾಚರಣೆ ಜೋರಾಗಿದೆ.

ಇದನ್ನೂ ಓದಿ: ಆದಿತ್ಯ L1 ಉಡಾವಣೆ ಯಶಸ್ವಿ; ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ ಇಸ್ರೋ

ಇಸ್ರೋಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಚಂದ್ರಯಾನ-3 ಯಶಸ್ಸಿನ ನಂತರ ಭಾರತ ತನ್ನ ಬಾಹ್ಯಾಕಾಶ ಯಾನವನ್ನು ಮುಂದುವರೆಸಿದೆ. ಆದಿತ್ಯ ಎಲ್​​​​-1​​​​ ನೌಕೆ ಯಶಸ್ವಿ ಉಡಾವಣೆಗೆ ಶ್ರಮಿಸಿದ ವಿಜ್ಞಾನಿಗಳು, ಇಂಜಿನಿಯರ್​ಗಳು ಎಲ್ಲರಿಗೂ ಅಭಿನಂದನೆಗಳು. ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಬ್ರಹ್ಮಾಂಡದ ಬಗ್ಗೆ ಉತ್ತಮ ತಿಳುವಳಿಕೆಯನ್ನು ಅಭಿವೃದ್ಧಿಪಡಿಸಲು ನಮ್ಮ ದಣಿವರಿಯದ ವೈಜ್ಞಾನಿಕ ಪ್ರಯತ್ನಗಳು ಮುಂದುವರಿಯುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ಭೂಮಿಯಿಂದ ಯಶಸ್ವಿಯಾಗಿ ಪ್ರಯಾಣ ಆರಂಭಿಸಿರುವ ಆದಿತ್ಯ ಎಲ್​ 1 ನೌಕೆ ಇನ್ನು ನಾಲ್ಕು ತಿಂಗಳುಗಳ ಬಳಿಕ ತನ್ನ ನಿಗದಿತ ಕಕ್ಷೆಗೆ ತಲುಪಲಿದೆ. ಸೂರ್ಯ ನಿಂದ 148.5 ಮಿಲಿಯನ್ ಕಿಲೋ ಮೀಟರ್​ ಮತ್ತು ಭೂಮಿಯಿಂದ 15 ಲಕ್ಷ ಕಿಲೋ ಮೀಟರ್​ ದೂರದಲ್ಲಿರುವ L1 ಪಾಯಿಂಟ್ ತಲುಪಲು ಈ ನೌಕೆಗೆ ಇನ್ನು ನಾಲ್ಕು ತಿಂಗಳುಗಳ ಕಾಲ ಬೇಕು. ಅಂದ್ರೆ ಇಂದು ಸೆಪ್ಟಂಬರ್ 2 2023ರಂದು ಹಾರಿಬಿಟ್ಟಿರುವ ಆದಿತ್ಯ ನೌಕೆ 2024ರ ಜನವರಿ 12ರಂದು ಎಲ್​ 1 ಕಕ್ಷೆಗೆ ತಲುಪಲಿದೆ. ಭೂಕಕ್ಷೆಗೆ ಸೇರಿಸಿದ ಬಳಿಕ ಕ್ರೂಸ್​ ಫೇಸ್​ನ ವೇಗವನ್ನು ಹೆಚ್ಚಿಸಲಾಗುತ್ತೆ. ಬಳಿಕ ಅದನ್ನು ಹಾಲೋ ಆರ್ಬಿಟ್​ಗೆ ಸೇರಿಸಲಾಗುತ್ತದೆ. ಭೂಮಿ ಮತ್ತು ಚಂದ್ರನ ಪ್ರಭಾವಲಯಕ್ಕೆ ಸಿಲುಕುವ ನೌಕೆ ಹಾಲೋ ಆಕಾರದಲ್ಲಿ ಇದು ತಿರುಗುವ ಕಾರಣದಿಂದ ಇದನ್ನು ಹಾಲೋ ಆರ್ಬಿಟ್ ಎಂದು ಕರೆಯಲಾಗುತ್ತದೆ. ಬಳಿಕ ಅಲ್ಲಿಂದ ಬೂಸ್ಟ್​ ಮಾಡುವ ಮೂಲಕ L1 ಕಡೆಗೆ ಪಾಯಿಂಟ್​ಗೆ ಸೇರಿಸಲಾಗುತ್ತದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್