ಉತ್ತರ ಪ್ರದೇಶ: ಕುಡಿದ ಮತ್ತಿನಲ್ಲಿ ವಾಗ್ವಾದ, ಬಿಜೆಪಿ ನಾಯಕನ ಸಹೋದರನಿಗೆ ಗುಂಡಿಕ್ಕಿ ಹತ್ಯೆ
ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಿಜೆಪಿ ನಾಯಕನ ಸಹೋದರನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಆರೋಪಿ ದೇವೇಂದ್ರ ಅಲಿಯಾಸ್ ಪ್ರಕಾಶ್ ಜೈಸ್ವಾಲ್ ಮದ್ಯಪಾನ ಮಾಡಿದ್ದ. ಪ್ರದೀಪ್ ಮೌರ್ಯ ಅವರ ಮೆಡಿಕಲ್ ಶಾಪ್ ಪಕ್ಕದಲ್ಲಿರುವ ಸಂತೋಷ್ ಮೌರ್ಯ ಅವರ ದಿನಸಿ ಅಂಗಡಿಯ ಬಳಿ ಆತ ನಿಂತು ಹೋಗಿ ಬರುವವರ ಬಳಿ ಎಲ್ಲಾ ಜಗಳ ಮಾಡುತ್ತಿದ್ದ. ಸಂತೋಷ್ ಮತ್ತು ಇತರರು ಅವನ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿ ಆತನನ್ನು ಅಲ್ಲಿಂದ ಕಳುಹಿಸಲಾಯಿತು.

ಚಂದೌಲಿ, ಜುಲೈ 06: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಬಿಜೆಪಿ ನಾಯಕನ ಸಹೋದರನಿಗೆ ಗುಂಡು ಹಾರಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಚಂದೌಲಿಯಲ್ಲಿ ನಡೆದಿದೆ. ಸಂತೋಷ್ ಮೌರ್ಯ ಮೃತರು. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಪ್ರದೀಪ್ ಮೌರ್ಯ ಅವರ ಕಿರಿಯ ಸಹೋದರ ಎಂಬುದು ತಿಳಿದುಬಂದಿದ್ದು, ಶನಿವಾರ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಆರೋಪಿ ದೇವೇಂದ್ರ ಅಲಿಯಾಸ್ ಪ್ರಕಾಶ್ ಜೈಸ್ವಾಲ್ ಮದ್ಯಪಾನ ಮಾಡಿದ್ದ. ಪ್ರದೀಪ್ ಮೌರ್ಯ ಅವರ ಮೆಡಿಕಲ್ ಶಾಪ್ ಪಕ್ಕದಲ್ಲಿರುವ ಸಂತೋಷ್ ಮೌರ್ಯ ಅವರ ದಿನಸಿ ಅಂಗಡಿಯ ಬಳಿ ಆತ ನಿಂತು ಹೋಗಿ ಬರುವವರ ಬಳಿ ಎಲ್ಲಾ ಜಗಳ ಮಾಡುತ್ತಿದ್ದ. ಸಂತೋಷ್ ಮತ್ತು ಇತರರು ಅವನ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿ ಆತನನ್ನು ಅಲ್ಲಿಂದ ಕಳುಹಿಸಲಾಯಿತು.
ಆದರೆ ಸ್ವಲ್ಪ ಸಮಯದ ಬಳಿಕ ದೇವೇಂದ್ರ ಡಬಲ್ ಬ್ಯಾರೇಜ್ ಗನ್ನೊಂದಿಗೆ ವಾಪಸ್ ಬಂದು ಗಲಾಟೆ ಮಾಡಲು ಶುರು ಮಾಡಿದ್ದ. ಸಂತೋಷ್ ಅಂಗಡಿಯಿಂದ ಹೊರಗೆ ಬಂದು ಸುಮ್ಮನಿರುವಂತೆ ಕೇಳಿದಾಗ ದೇವೇಂದ್ರ ಬಂದೂಕನ್ನು ಆತನ ಎದೆಗೆ ಇಟ್ಟು ಹತ್ತಿರದಿಂದಲೇ ಗುಂಡು ಹಾರಿಸಿದ್ದಾನೆ.
ಮತ್ತಷ್ಟು ಓದಿ: ಲೈವ್ಸ್ಟ್ರೀಮ್ ಮಾಡುವಾಗಲೇ ಗುಂಡಿಕ್ಕಿ ಇನ್ಫ್ಲುಯೆನ್ಸರ್ ಹತ್ಯೆ; ಶಾಕಿಂಗ್ ವಿಡಿಯೋ ವೈರಲ್
ಸಂತೋಷ್ ತಕ್ಷಣವೇ ಕುಸಿದುಬಿದ್ದಿದ್ದಾರೆ, ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆಯ ನಂತರ, ಬಿಜೆಪಿ ಹಿರಿಯ ನಾಯಕರು ಮತ್ತು ಸ್ಥಳೀಯ ಶಾಸಕರು ಸ್ಥಳಕ್ಕೆ ಆಗಮಿಸಿದ್ದಾರೆ.
ಪೊಲೀಸರು ಕೂಡ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ದೇವೇಂದ್ರ ಜೈಸ್ವಾಲ್ ಹಾಗೂ ಆತ ಅಪರಾಧಕ್ಕೆ ಬಳಸಿದ ಆಯುಧದೊಂದಿಗೆ ಬಂಧಿಸಿದ್ದಾರೆ. ಆತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿಗಂಬರ್ ಕುಶ್ವಾಹ ಅವರು ಎಫ್‌ಐಆರ್ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ದೃಢಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ