ಲೈವ್ಸ್ಟ್ರೀಮ್ ಮಾಡುವಾಗಲೇ ಗುಂಡಿಕ್ಕಿ ಇನ್‌ಫ್ಲುಯೆನ್ಸರ್ ಹತ್ಯೆ; ಶಾಕಿಂಗ್ ವಿಡಿಯೋ ವೈರಲ್
ಮೆಕ್ಸಿಕೋದ 23 ವರ್ಷದ ಟಿಕ್‌ಟಾಕ್ ಇನ್‌ಫ್ಲುಯೆನ್ಸರ್ ವ್ಯಾಲೆರಿಯಾ ಮಾರ್ಕೆಜ್ ಅವರನ್ನು ಲೈವ್ ಸ್ಟ್ರೀಮಿಂಗ್ ಸಮಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸೌಂದರ್ಯವೇ ಅವರ ಸಾವಿಗೆ ಕಾರಣವೆಂದು ಶಂಕಿಸಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಮೆಕ್ಸಿಕೋದಲ್ಲಿ ಮಹಿಳೆಯರ ಮೇಲಿನ ಹಿಂಸೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಸುಂದರವಾಗಿರುವ ಕಾರಣಕ್ಕೆ ಕೆಲವರು ಕಿರುಕುಳ ಅನುಭವಿಸಬೇಕಾದ ಪರಿಸ್ಥಿತಿ ಬಂದಿದ್ದನ್ನು ಕೇಳಿರಬಹುದು. ಸಾರ್ವಜನಿಕವಾಗಿ ಓಡಾಡುವಾಗ ಯುವತಿಯರು ಈ ರೀತಿಯ ಕಿರುಕುಳ ಅನುಭವಿಸಿದರ ಬಗ್ಗೆ ಹಲವು ಕಡೆಗಳಲ್ಲಿ ವರದಿ ಆಗಿರುತ್ತದೆ. ಆದರೆ, ಮೆಕ್ಸಿಕೋದಲ್ಲಿ ಸುಂದರುವಾಗಿರುವ ಕಾರಣಕ್ಕೆ 23 ವರ್ಷದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ನ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಟಿಕ್‌ಟಾಕ್ (Tik Tok) ಲೈವ್ ಸ್ಟ್ರೀಮಿಂಗ್ ಮಾಡುವಾಗಲೇ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.
ವ್ಯಾಲೆರಿಯಾ ಮಾರ್ಕೆಜ್ ಎಂಬುವವರು ಮೃತ ದುರ್ದೈವಿ. ಅವರು ಬ್ಯೂಟಿ ಸಲೂನ್ ಒಂದನ್ನು ನಡೆಸುತ್ತಿದ್ದರು. ಅಲ್ಲಿ ವ್ಯಾಲೆರಿಯಾ ಖುಷಿಯಿಂದ ಲೈವ್ಸ್ಟ್ರೀಮ್ ಮಾಡುತ್ತಿದ್ದರು. ಈ ವೇಳೆ ಸಲೂನ್ಗೆ ಎಂಟ್ರಿ ಕೊಟ್ಟ ಅನಾಮಧೇಯ ವ್ಯಕ್ತಿ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ. ಇದನ್ನು ನೋಡಿ ಅನೇಕರಿಗೆ ಶಾಕ್ ಆಗಿದೆ. ಆ ಬಳಿಕ ಸ್ಥಳಕ್ಕೆ ಪೊಲೀಸರು ಬಂದು ಮೊಬೈಲ್ನ ವಶಕ್ಕೆ ಪಡೆದಿದ್ದಾರೆ. ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ತನಿಖೆ ಪ್ರಗತಿಯಲ್ಲಿದೆ.
ಸೌಂದರ್ಯವೇ ಮುಳುವಾಯ್ತು?
ವ್ಯಾಲೆರಿಯಾ ಅವರಿಗೆ ಸೌಂದರ್ಯವೇ ಮುಳುವಾಯಿತಾ ಎನ್ನುವ ಪ್ರಶ್ನೆ ಮೂಡಿದೆ. ಸೌಂದರ್ಯದ ಕಾರಣಕ್ಕೆ ಅಥವಾ ಹೆಣ್ಣು ಎನ್ನುವ ಕಾರಣಕ್ಕೆ ಹೆಣ್ಣುಮಕ್ಕಳನ್ನು ಕೊಲ್ಲೋದು ಮೆಕ್ಸಿಕೋದಲ್ಲಿ ಸಾಮಾನ್ಯವಾಗಿದೆ. ವಿಶ್ವಸಂಸ್ಥೆಯ ವರದಿ ಪ್ರಕಾರ ಮೆಕ್ಸಿಕೋದಲ್ಲಿ ಈ ರೀತಿ ನಿತ್ಯ 10 ಯುವತಿ/ಮಹಿಳೆಯರ ಕೊಲೆ ಆಗುತ್ತದೆ ಎಂಬುದು ಶಾಕಿಂಗ್ ವಿಚಾರ. ವ್ಯಾಲೆರಿಯಾ ಸಾವಿಗೂ ಇದೇ ಕಾರಣ ಎನ್ನಲಾಗುತ್ತಿದೆ.
Watch crazy .During a TikTok livestream, a
person picked up Valeria Marquez’s phone his face briefly visible before the screen went dark.
Valeria Marquez, a 23-year-old Mexican social media influencer, was tragically shot and killed while streaming live pic.twitter.com/O3GB7W0yjt
— KamalaHQ (@kamalahqlies) May 15, 2025
ಗೊತ್ತೇ ಆಗಲಿಲ್ಲ..
ವ್ಯಾಲೆರಿಯಾ ಅವರು ಗೊಂಬೆಯನ್ನು ಇಟ್ಟುಕೊಂಡು ಆಟ ಆಡುತ್ತಿದ್ದರು. ಈ ವೇಳೆ ಅವರ ಹೊಟ್ಟೆಗೆ ಶೂಟ್ ಮಾಡಲಾಗಿದೆ. ಏನಾಗುತ್ತಿದೆ ಎಂದು ಗೊತ್ತಾಗುವುದರೊಳಗೆ ಅವರು ಅಸುನೀಗಿದ್ದಾರೆ. ಆ ಬಳಿಕ ಯಾರೋ ಒಬ್ಬರು ಅವರ ಮೊಬೈಲ್ ತೆಗೆದುಕೊಂಡು ಲೈವ್ಸ್ಟ್ರೀಮ್ನ ನಿಲ್ಲಿಸಿದ್ದಾರೆ. ಉಡುಗೊರೆ ಕೊಡೋ ನೆಪದಲ್ಲಿ ಬಂದ ವ್ಯಕ್ತಿ ಈ ಕೊಲೆ ಮಾಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಶ್ರೀಲೀಲಾ ಶಾಕಿಂಗ್ ವಿಡಿಯೋ; ನಟಿಯನ್ನು ಬಲವಂತವಾಗಿ ಎಳೆದಾಡಿದ ಜನ
ವ್ಯಾಲೆರಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈಗತಾನೇ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದರು. ಇನ್ಸ್ಟಾಗ್ರಾಮ್ ಹಾಗೂ ಟಿಕ್‌ಟಾಕ್ ಸೇರಿ ಅವರಿಗೆ 2 ಲಕ್ಷ ಹಿಂಬಾಲಕರು ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:28 am, Fri, 16 May 25








