- Kannada News Photo gallery Cricket photos First Time In 93 Years: Team India Score 1000 Runs In A Test Match
ಅತಿರಥ ಮಹಾರಥರಿಗೆ ಸಾಧ್ಯವಾಗಿಲ್ಲ… 93 ವರ್ಷಗಳ ಬಳಿಕ ಯಂಗ್ ಇಂಡಿಯಾ ಹೊಸ ಸಾಧನೆ
India vs England 2nd Test: ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 587 ರನ್ ಕಲೆಹಾಕಿದರೆ, ಇಂಗ್ಲೆಂಡ್ ಪ್ರಥಮ ಇನಿಂಗ್ಸ್ನಲ್ಲಿ 407 ರನ್ಗಳಿಸಿ ಆಲೌಟ್ ಆಗಿತ್ತು. ಇನ್ನು ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 427 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ.
Updated on: Jul 06, 2025 | 7:59 AM

ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ 93 ವರ್ಷಗಳು ಕಳೆದಿವೆ. ಈ 93 ವರ್ಷಗಳಲ್ಲಿ ಭಾರತದ ಪರ 317 ಆಟಗಾರರು ಕಣಕ್ಕಿಳಿದಿದ್ದಾರೆ. ಇವರಲ್ಲಿ ಅನೇಕರು ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಆದರೆ ಇವರಿಂದ ಯಾರಿಗೂ ಸಾಧ್ಯವಾಗದ ಹೊಸ ದಾಖಲೆಯೊಂದನ್ನು ಇದೀಗ ಟೀಮ್ ಇಂಡಿಯಾ ನಿರ್ಮಿಸಿದೆ.

ಹೌದು, ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಬರೋಬ್ಬರಿ 1014 ರನ್ ಕಲೆಹಾಕಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 587 ರನ್ಗಳಿಸಿದರೆ, ದ್ವಿತೀಯ ಇನಿಂಗ್ಸ್ನಲ್ಲಿ 427 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದರು.

ಈ 587+427 ರನ್ಗಳೊಂದಿಗೆ ಟೀಮ್ ಇಂಡಿಯಾ ಟೆಸ್ಟ್ ಪಂದ್ಯವೊಂದರಲ್ಲಿ ಇದೇ ಮೊದಲ ಬಾರಿಗೆ 1000+ ರನ್ ಕಲೆಹಾಕಿದ ಸಾಧನೆ ಮಾಡಿದೆ. ಅಂದರೆ ಕಳೆದ 93 ವರ್ಷಗಳಲ್ಲಿ ಭಾರತ ಒಮ್ಮೆಯೂ ಪಂದ್ಯವೊಂದರಲ್ಲಿ ಸಾವಿರಕ್ಕೂ ಅಧಿಕ ರನ್ ಕಲೆಹಾಕಿರಲಿಲ್ಲ. ಇದಕ್ಕೂ ಮುನ್ನ 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತೀಯ ಬ್ಯಾಟರ್ಗಳು ಎರಡು ಇನಿಂಗ್ಸ್ಗಳ ಮೂಲಕ 916 ರನ್ (705+211) ಕಲೆಹಾಕಿದ್ದು ಶ್ರೇಷ್ಠ ಸಾಧನೆಯಾಗಿತ್ತು.

ಇದೀಗ ಕ್ರಿಕೆಟ್ ಜನಕರ ನಾಡಿನಲ್ಲಿ ಮೊದಲ ಇನಿಂಗ್ಸ್ನಲ್ಲಿ 587 ಹಾಗೂ ದ್ವಿತೀಯ ಇನಿಂಗ್ಸ್ನಲ್ಲಿ 427 ರನ್ ಬಾರಿಸಿ (1014 ರನ್ಸ್) ಯಂಗ್ ಇಂಡಿಯಾ ಹೊಸ ಇತಿಹಾಸ ಬರೆದಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ 1000+ ರನ್ಗಳಿಸಿದ ವಿಶ್ವದ 6ನೇ ತಂಡ ಎನಿಸಿಕೊಂಡಿದೆ.

ಇದೀಗ ಕ್ರಿಕೆಟ್ ಜನಕರ ನಾಡಿನಲ್ಲಿ ಮೊದಲ ಇನಿಂಗ್ಸ್ನಲ್ಲಿ 587 ಹಾಗೂ ದ್ವಿತೀಯ ಇನಿಂಗ್ಸ್ನಲ್ಲಿ 427 ರನ್ ಬಾರಿಸಿ (1014 ರನ್ಸ್) ಯಂಗ್ ಇಂಡಿಯಾ ಹೊಸ ಇತಿಹಾಸ ಬರೆದಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ 1000+ ರನ್ಗಳಿಸಿದ ವಿಶ್ವದ 6ನೇ ತಂಡ ಎನಿಸಿಕೊಂಡಿದೆ.
