ಮೊಹರಂ ಹಬ್ಬ ಹಿನ್ನೆಲೆ ಬೆಂಗಳೂರಿನ ಈ ಮೂರು ಮಾರ್ಗದಲ್ಲಿ ವಾಹನ ಸಂಚಾರ ಬದಲಾವಣೆ
ಇಂದು ನಗರದಲ್ಲಿ ಮುಸ್ಲಿಂ ಭಾಂದವರ ಮೊಹರಂ ಹಬ್ಬ ಆಚರಣೆ ಹಿನ್ನೆಲೆ ಬೆಂಗಳೂರು ನಗರದಲ್ಲಿ ಮೂರು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 11ರಿಂದ ಸಂಜೆ 5.30ರವರೆಗೆ ಈ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಹಾಗಾದರೆ ಯಾವೆಲ್ಲಾ ಮಾರ್ಗಗಳ ಸಂಚಾರ ಬದಲಾವಣೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.

ಸಂಚಾರ ಮಾರ್ಗದಲ್ಲಿ ಬದಲಾವಣೆ
ಬೆಂಗಳೂರು, ಜುಲೈ 06: ಇಂದು ಮುಸ್ಲಿಂ ಭಾಂದವರ ಮೊಹರಂ (Muharram) ಹಬ್ಬದ ಆಚರಣೆಯ ಹಿನ್ನಲೆ ಮಧ್ಯಾಹ್ನ 11 ಗಂಟೆಯಿಂದ ಸಂಜೆ 05-30 ಗಂಟೆಯವರೆಗೆ ಬೆಂಗಳೂರು (bangaluru) ನಗರದಲ್ಲಿ ಮೂರು ರಸ್ತೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಪರ್ಯಾಯ ಮಾರ್ಗಗಳು ಹೀಗಿವೆ.
ಈ ಸಂಚಾರ ಮಾರ್ಗ ಬದಲಾವಣೆ
- ಬ್ರಿಗೇಡ್ ರಸ್ತೆ ಮತ್ತು ರಿಚ್ಮಂಡ್ ರಸ್ತೆಯ ಮೂಲಕ ಹೊಸೂರು ರಸ್ತೆ ಕಡೆಗೆ ವೆಲ್ಲಾರಾ ಜಂಕ್ಷನ್ (ಶೂಲೆ ವೃತ್ತ) ಮುಖಾಂತರ ಸವಾರರು ತೆರಳಬಹುದಾಗಿದೆ.
ಬೆಂಗಳೂರು ನಗರ ಸಂಚಾರ ಪೊಲೀಸ್ ಟ್ವೀಟ್
ಇದನ್ನೂ ಓದಿ— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) July 6, 2025
- ಓಲ್ಡ್ ಪಿ.ಎಸ್ ಜಂಕ್ಷನ್ ಎಡ ತಿರುವು ಪಡೆದು ವುಡ್ ಸ್ಟ್ರೀಟ್, ಟೇಟ್ ಲೇನ್, ರಿಚ್ಮಂಡ್ ರಸ್ತೆಯ ಮೂಲಕ ರಿಚ್ಮಂಡ್ ಜಂಕ್ಷನ್, ಶಾಂತಿನಗರ ಜಂಕ್ಷನ್, ಲಾಂಗ್ ಪೋರ್ಡ್ ರಸ್ತೆ, ನಂಜಪ್ಪ ಜಂಕ್ಷನ್, ಸಿಎಂಪಿ ಜಂಕ್ಷನ್ ಮೂಲಕ ಹೊಸೂರು ರಸ್ತೆ ಕಡೆಗೆ ಸಂಚರಿಸುವುದು.
ಇದನ್ನೂ ಓದಿ: ಸ್ಟಿಕ್ಕರ್ ಅಂಟಿಸಲು ಕೊಟ್ಯಂತರ ರೂ ಖರ್ಚು: ಸಮೀಕ್ಷೆಯ ಖರ್ಚು ವೆಚ್ಚಗಳ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ
- ಹೊಸೂರು ರಸ್ತೆಯ ಆಡುಗೋಡಿ ಕಡೆಯಿಂದ ಬರುವ ಸವಾರರು ಆನೇಪಾಳ್ಯ ಜಂಕ್ಷನ್ ಬಳಿ ಸಿಮೆಂಟ್ರಿ ಕ್ರಾಸ್ನಲ್ಲಿ ಎಡ ತಿರುವು ಪಡೆದು ಬರ್ಲಿ ಸ್ಟ್ರೀಟ್, ಲಾಂಗ್ ಪೋರ್ಡ್ ರಸ್ತೆ, ನಂಜಪ್ಪ ವೃತ್ತ, ಶಾಂತಿನಗರ ಕಡೆಗೆ ಹಾಗೂ ರೀನಿಯಸ್ ಸ್ಟ್ರೀಟ್ ಮೂಲಕ ರಿಚ್ಮಂಡ್ ರಸ್ತೆಗೆ ಬಂದು ಮುಂದಕ್ಕೆ ಸಂಚರಿಸುವುದು.
ಇದನ್ನೂ ಓದಿ: ಬೆಸ್ಕಾಂ ಟೆಂಪರರಿ ಕನೆಕ್ಷನ್ ಪಡೆದವರ ಬವಣೆ: ಸರ್ಕಾರ ತೋರಬೇಕಿದೆ ಕರುಣೆ..!
- ಹೊಸೂರು ರಸ್ತೆ ಕಡೆಯಿಂದ ಬರುವ ಭಾರಿ ವಾಹನ ಸವಾರರು ಆಡುಗೋಡಿ ಜಂಕ್ಷನ್, ಮೈಕೋ ಜಂಕ್ಷನ್, 8ನೇ ಮೈನ್, ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆ, ಸಿದ್ದಯ್ಯ ರಸ್ತೆಗೆ ಬಂದು ಮುಂದಕ್ಕೆ ಸಂಚರಿಸುವುದು. ಈ ಮೇಲ್ಕಂಡಂತೆ ಮಾಡಲಾದ ಮಾರ್ಪಾಡುಗಳಿಗೆ ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:55 am, Sun, 6 July 25