AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಿಕ್ಕರ್ ಅಂಟಿಸಲು ಕೊಟ್ಯಂತರ ರೂ ಖರ್ಚು: ಸಮೀಕ್ಷೆಯ ಖರ್ಚು ವೆಚ್ಚಗಳ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ

ಈಗಾಗಲೇ ಎಸ್​ಸಿ ಒಳಮೀಸಲಾತಿ ಸರ್ವೆಗೆ ರಾಜ್ಯ ಸರ್ಕಾರ ಆದೇಶಿಸಿದೆ. ಅದರಂತೆ ಪಾಲಿಕೆ ಅಧಿಕಾರಿಗಳು ಸಮೀಕ್ಷೆ ಮುಗಿಸುವ ಭರದಲ್ಲಿ ಯಾವುದೇ ಮಾಹಿತಿ ಪಡೆಯದೆ ಬೇಕಾಬಿಟ್ಟಿಯಾಗಿ ಮನೆಗಳಿಗೆ ಸಮೀಕ್ಷೆ ಸ್ಟಿಕ್ಕರ್​​​ ಅಂಟಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಹೀಗಿರುವಾಗ ಸಮೀಕ್ಷೆ ಹೆಸರಲ್ಲಿ ಲಕ್ಷಾಂತರ ರೂ ಹಣ ಸುರಿಯಲಾಗುತ್ತಿದೆ. ಸಮೀಕ್ಷೆಯ ಖರ್ಚು ವೆಚ್ಚಗಳ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ.

ಸ್ಟಿಕ್ಕರ್ ಅಂಟಿಸಲು ಕೊಟ್ಯಂತರ ರೂ ಖರ್ಚು: ಸಮೀಕ್ಷೆಯ ಖರ್ಚು ವೆಚ್ಚಗಳ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ
ಸಮೀಕ್ಷೆಯ ಖರ್ಚು ವೆಚ್ಚಗಳ ಪಟ್ಟಿ
ಶಾಂತಮೂರ್ತಿ
ಶಾಂತಮೂರ್ತಿ | Edited By: |

Updated on: Jul 05, 2025 | 1:16 PM

Share

ಬೆಂಗಳೂರು, ಜುಲೈ 05: ಎಸ್​ಸಿ ಒಳಮೀಸಲಾತಿ ಸರ್ವೆಗೆ (Caste Census Survey) ರಾಜ್ಯ ಸರ್ಕಾರ ಆದೇಶಿಸಿದೆ. ಸಮೀಕ್ಷೆ ನಡೆಸಲು ಬಿಬಿಎಂಪಿ (BBMP) ಸಿಬ್ಬಂದಿ ಫೀಲ್ಡ್​ಗೆ ಇಳಿದಿದ್ದಾರೆ. ಸಮೀಕ್ಷೆ ಮುಗಿಸುವ ಭರದಲ್ಲಿ ಎಡವಟ್ಟಿನ ಮೇಲೆ ಎಡವಟ್ಟು ಮಾಡುತ್ತಿದ್ದಾರೆ. ಬೇಕಾಬಿಟ್ಟಿ ಮನೆಬಾಗಿಲಿಗೆ ಸ್ಟಿಕ್ಕರ್ ಅಂಟಿಸುತ್ತಿರುವುದಾಗಿ ಆರೋಪಗಳು ಕೇಳಿ ಬಂದಿವೆ. ಈ ಮಧ್ಯೆ ಸಮೀಕ್ಷೆ ಹೆಸರಲ್ಲಿ ಸರ್ಕಾರ ಕೊಟ್ಯಂತರ ರೂ ಹಣ ವ್ಯರ್ಥ ಮಾಡುತ್ತಿದೆ. ಪಾಲಿಕೆ ಮಾಡುತ್ತಿರುವ ದುಂದು ವೆಚ್ಚದ ಪಟ್ಟಿ ಟಿವಿ9ಗೆ ಲಭ್ಯವಾಗಿದ್ದು, ಬರೋಬ್ಬರಿ 3 ಕೋಟಿ 60 ಲಕ್ಷ ರೂ ಖರ್ಚು ಮಾಡಲಾಗಿದೆ.

ಲಕ್ಷ ಲಕ್ಷ ಹಣ ಖರ್ಚು

ರಾಜ್ಯದಲ್ಲಿ ಎಸ್​ಸಿ ಒಳಮೀಸಲಾತಿ ಸರ್ವೆಗೆ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಸ್ಟಿಕ್ಕರ್‌ ಅಂಟಿಸುವುದು, ಜಾಗೃತಿ ಮೂಡಿಸುವ ಹೆಸರಲ್ಲಿ ಪಾಲಿಕೆ ಮೂಲಕ ಲಕ್ಷ ಲಕ್ಷ ಹಣ ಖರ್ಚು ಮಾಡಲಾಗುತ್ತಿದೆ. ಪ್ರತಿ ಮನೆಗೆ ಸ್ಟಿಕ್ಕರ್‌ ಅಂಟಿಸುವುದಕ್ಕೆ ತಲಾ 5 ರೂ ನಿಗದಿ ಮಾಡಲಾಗಿದೆ. ಒಳಮೀಸಲಾತಿ ಸಮೀಕ್ಷೆ ಜಾಗೃತಿ, ಬೀದಿನಾಟಕಕ್ಕೆ 49.59 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ.

ಇದನ್ನೂ ಓದಿ: ಮನೆಗಳಿಗೆ ಸ್ಟಿಕ್ಕರ್‌ ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಭಾಗ: ಬಿಬಿಎಂಪಿ ಸ್ಪಷ್ಟನೆ

ಇದನ್ನೂ ಓದಿ
Image
ಹಳದಿ ಲೈನ್ ಮೆಟ್ರೋ ಮತ್ತಷ್ಟು ವಿಳಂಬ: BMRCL​ಗೆ ತೇಜಸ್ವಿಸೂರ್ಯ ಪ್ರಶ್ನೆ
Image
ಸಂವೇದನೆಯಿಲ್ಲದ, ಸೂಕ್ಷ್ಮತೆ ಗೊತ್ತಿರದ ಸಿಬ್ಬಂದಿಯಿಂದ ಸಮೀಕ್ಷೆ ಬೇಕಿತ್ತೇ?
Image
ಮನೆಗಳಿಗೆ ಸ್ಟಿಕ್ಕರ್‌ ಅಂಟಿಸುವುದು ಸಮೀಕ್ಷಾ ಪ್ರಕ್ರಿಯೆಯ ಭಾಗ: ಬಿಬಿಎಂಪಿ
Image
ಜಾತಿ ಸಮೀಕ್ಷೆ: ಸರ್ವೆ ಮಾಡದೆ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಿದ ಅಧಿಕಾರಿಗಳು

ಇನ್ನು 35 ಲಕ್ಷ ಮನೆಗಳಿಗೆ ಒಂದು ಸ್ಟಿಕ್ಕರ್​ನಂತೆ ಒಟ್ಟು 35 ಲಕ್ಷ ಸ್ಟಿಕ್ಕರ್ ಮುದ್ರಣ ಮಾಡಲಾಗಿದೆ. ಒಂದು ಸ್ಟಿಕ್ಕರ್​ಗೆ 2 ರೂ., 350000×2= 70 ಲಕ್ಷ, ಇದಕ್ಕೆ ಸೇವಾಶುಲ್ಕ 3.50 ಲಕ್ಷ ರೂ., 13.33 ಲಕ್ಷ ರೂ ಜಿಎಸ್​ಟಿ, ಒಂದು ಸ್ಟಿಕ್ಕರ್​ಗೆ 2 ರೂ. 47 ಪೈಸೆ, ಅಲ್ಲಿಗೆ ಪಾಲಿಕೆ ಒಟ್ಟು 86 ಲಕ್ಷ 73 ಸಾವಿರ ರೂ ಖರ್ಚು ಮಾಡಿದೆ.

ಇದನ್ನೂ ಓದಿ: ಸರ್ವೆ ವೇಳೆ ಬಿಬಿಎಂಪಿ ಸಿಬ್ಬಂದಿ ಗೂಂಡಾಗಿರಿ: ಮನೆ ಮಾಲೀಕನ ಮೇಲೆ ಹಲ್ಲೆಗೆ ಯತ್ನ

28 ವಿಧಾನ ಸಭಾಕ್ಷೇತ್ರದಲ್ಲಿ ಆಟೋ ಮೂಲಕ ಪ್ರಚಾರಕ್ಕೆ 7 ದಿನಕ್ಕೆ 11 ಲಕ್ಷ 7 ಸಾವಿರ ರೂ, 5 ಲಕ್ಷ ಭಿತ್ತಿಪತ್ರ ಮುದ್ರಣಕ್ಕೆ 5 ಲಕ್ಷ ರೂ., ಸಾಮಾಜಿಕ ಜಾಲತಾಣ, ಯೂಟ್ಯೂಬ್​​ನಲ್ಲಿ ಜಾಗೃತಿಗೆ 28 ಲಕ್ಷ ರೂ., ಎರಡು ಶಾರ್ಟ್ ಫಿಲ್ಮ್ ತಯಾರಿಗೆ ಕಲಾವಿದರು, ಕ್ಯಾಮರಾ ಮತ್ತು ನಿರ್ದೇಶಕರು ಸೇರಿ ಕೇವಲ 80 ಸೆಕೆಂಡ್ ವಿಡಿಯೋಗೆ 49.56 ಲಕ್ಷ ರೂ ಪಾಲಿಕೆ ಸುರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಇಂದಿನಿಂದ ಫ್ರೀ ಬಸ್ ಪಾಸ್​ಗೆ ಅರ್ಜಿ ಸಲ್ಲಿಕೆ
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ಕಾರವಾರ-ಅಂಕೋಲಾ ಘಾಟ್ ರಸ್ತೆಯಲ್ಲಿ ಮೈದುಂಬಿದ ಜಲಧಾರೆಗಳು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಇಂದು ವಟಸಾವಿತ್ರಿ ವೃತವನ್ನು ಆಚರಿಸುವ ಪವಿತ್ರ ದಿನ!
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಮಗನಿಗೆ ಬಣ್ಣ ಹಚ್ಚಿಸಿದ ರಿಷಬ್ ಶೆಟ್ಟಿ: ಯಕ್ಷಗಾನ ವೇದಿಕೆಯಲ್ಲಿ ರನ್ವಿತ್
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ಬಿಡದಿ ಟೌನ್​ಶಿಪ್: ರಾಜ್ಯವ್ಯಾಪಿ ಜನಾಂದೋಲನಕ್ಕೆ ಕುಮಾರಸ್ವಾಮಿ ತಂತ್ರ
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ರಾಮಮಂದಿರ ದೇಣಿಗೆ ಲೂಟಿ; ಬೀದರ್​ ಶಾಸಕನ ವಿರುದ್ಧವೂ ಎಸ್​ಐಟಿಗೆ ದೂರು
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಪುತ್ರನ ಕಳೆದುಕೊಂಡ ಭಾಮಾ ಹರೀಶ್ ಅವರ ತಬ್ಬಿ ಸಂತೈಸಿದ ಧ್ರುವ ಸರ್ಜಾ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ
ಶಾಲೆ ಒಳಗಡೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಯೂನಿಫಾರ್ಮ್ ಬೆಂಕಿಗಾಹುತಿ